Chamarajnagar Re-election : ಚಾಮರಾಜನಗರ ಸಂಸದೀಯ ಕ್ಷೇತ್ರದ ಚುನಾವಣಾಧಿಕಾರಿ ಮತ್ತು ಸಾಮಾನ್ಯ ವೀಕ್ಷಕರು ಸಲ್ಲಿಸಿದ ವರದಿಗಳ ಆಧಾರದ ಮೇಲೆ ಮತ್ತು ಎಲ್ಲಾ ವಸ್ತು ಪರಿಸ್ಥಿತಿಗಳನ್ನು ಗಣನೆಗೆ ತೆಗೆದುಕೊಂಡ ನಂತರ ಚುನಾವಣಾ ಆಯೋಗ ಮರು ಮತದಾನ ಮಾಡುವಂತೆ  ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಘೋಷಿಸಿದೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ : Shruti Hariharan : ವಿಭಿನ್ನ ಅವತಾರದಲ್ಲಿ ಶ್ರುತಿ ಹರಿಹರನ್ : ಪೋಟೋಸ್ ಇಲ್ಲಿವೆ


 ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದು ಚುನಾವಣಾ ಆಯೋಗ ತಿಳಿಸಿದೆ. ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಗೆ ಬರುವ ಚಾಮರಾಜನಗರ ಪಾರ್ಲಿಮೆಂಟರಿ ಕ್ಷೇತ್ರದ ಹಂಸೂರು ವಿಧಾನಸಭಾ ಕ್ಷೇತ್ರ ಇಂಡಿಗನಾಥ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇಂಡಿಗನಾಥ, 221 ರ ಮತಗಟ್ಟೆ ಸಂಖ್ಯೆ 146 ರಲ್ಲಿ ಏಪ್ರಿಲ್ 26 ರಂದು ನಡೆದ ಮತದಾನವು ಸಂಪೂರ್ಣವಾಗಿಲ್ಲ ಮತ್ತು ಮತದಾನ ಸಂಧರ್ಭದಲ್ಲಿ ಕಲ್ಲು ತೂರಾಟ, ಇವಿಎಂ ಮಷಿನ್ ಗಳೆಲ್ಲವೂ ಹಾನಿಗೊಳಗಿವೆ 


ಇದನ್ನು ಓದಿ : Tarak Mehta Ka Ulta Chasma : ಕೆಲವು ದಿನಗಳಿಂದ ಕಾಣೆಯಾಗಿದ್ದ ನಟ ಗುರುಚರಣ್ ಸಿಂಗ್, ಸಿಸಿಟಿವಿಯಲ್ಲಿ ಪತ್ತೆ


ಈ ಕಾರಣದಿಂದ  ಇಂಡಿಗನಾಥ ಗ್ರಾಮದಲ್ಲಿ ಮರು ಮತದಾನ ಮಾಡುವಂತೆ ಚುನಾವಣಾ ಆಯೋಗ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದು ತಿಳಿಸಿದೆ. 1951 ಆಯೋಗದ ಸೂಚನೆಗೆ ಅನುಗುಣವಾಗಿ ಏಪ್ರಿಲ್ 29 ರಂದು ಮತಗಟ್ಟೆಯಲ್ಲಿ ಹೊಸದಾಗಿ ಮತದಾನಕ್ಕೆ ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ .ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ.


ಚಾಮರಾಜನಗರ ಜಿಲ್ಲೆಯ ಇಂಡಿಗನಾಥ ಗ್ರಾಮದಲ್ಲಿ ಶುಕ್ರವಾರ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಬೇಕೋ ಬೇಡವೋ ಎಂಬ ವಿಷಯದಲ್ಲಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಇವಿಎಂ ಮಷಿನ್ ಗಳೆಲ್ಲವೂ ಹಾಳಾಗಿದ್ದು, ಈ ಹಿನ್ನೆಲೆ ಮರುಮತದಾನ ನಡೆಯಲಿದೆhttps://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.