ಬೆಂಗಳೂರು: ಮಹಾದಾಯಿ ನದಿ ಪ್ರದೇಶದಲ್ಲಿ ಬರುವ ಕಳಸಾ ಮತ್ತು ಬಂಡೂರಿ ನಾಲಾ ಜೋಡಣೆಯನ್ನು ಪೂರ್ಣಗೊಳಿಸುವಂತೆ ಕೋರಿ ಜನಸಾಮಾನ್ಯರ ಪಕ್ಷ ಪ್ರಧಾನಿ ನರೇಂದ್ರ ಮೋದಿಯವರಿಗೆ ಸುಧೀರ್ಘ ಮೂರು ಪುಟಗಳ ಪತ್ರವನ್ನು ಬರೆದಿದೆ.ಜನಸಾಮಾನ್ಯರ ಪಕ್ಷವು ಪತ್ರದಲ್ಲಿ ಈ ಭಾಗದ ನೀರಿನ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ಬಗೆಗಳ ಕುರಿತು ವಿವರಣೆ ನೀಡಿದೆ. 


COMMERCIAL BREAK
SCROLL TO CONTINUE READING

ಮಹಾದಾಯಿ ನದಿಯು ಹಲವು ರಾಜ್ಯಗಳ ಮೂಲಕ ಹರಿಯುತ್ತಿರುವುದರಿಂದ ಇದು ನ್ಯಾಯಾಧಿಕರಣದ ವ್ಯಾಪ್ತಿಗೆ ಬರುತ್ತದೆ. ಆದರೆ ಕಳಸಾ ಮತ್ತು ಬಂಡೂರಿ ನಾಲಾಗಳು ಕರ್ನಾಟಕದ ವ್ಯಾಪ್ತಿಯಲ್ಲಿ ಇರುವುದರಿಂದ  ಇವು ಅಂತರಾಜ್ಯ ನದಿ ವಿವಾಧ ಕಾಯ್ದೆ 1956 ರ ಅಡಿಯಲ್ಲಿ ಬರುವುದಿಲ್ಲ ಎಂದು ತಿಳಿಸಿದೆ. 


ಆದ್ದರಿಂದ ಕರ್ನಾಟಕವು ಈ ನಾಲಾ ಜೋಡಣೆಯ ಮೂಲಕ  7.56 ಟಿಎಂಸಿ ನೀರನ್ನು ಮಲಪ್ರಭಾ ನಧಿಗೆ ತಿರುಗಿಸುವುದರ ಮೂಲಕ ಈ ಭಾಗದ ನೀರಿನ ಸಮಸ್ಯೆಯನ್ನು ನೀಗಿಸಲು ಯತ್ನಿಸುತ್ತಿದೆ. ಇನ್ನು  ಅದು ಮುಂದುವರೆದು ಕಳಸಾ ಬಂಡೂರಿ ಯೋಜನೆಯ ಕುರಿತಾಗಿ  ಸಾಮಾನ್ಯ ಪ್ರಜೆಯು ಈಗಾಗಲೇ ಸರ್ಕಾರಗಳ ಮೇಲಿನ ನಂಬಿಕೆಯನ್ನು ಕಳೆದುಕೊಂಡಿರುವುದರ ಕುರಿತು ಉಲ್ಲೇಖಿಸುತ್ತಾ ಈಗ  ಯೋಜನೆಯನ್ನು ಜನ ಸಾಮಾನ್ಯರ ಮೂಲಕವೇ ಅರ್ಧಕ್ಕೆ ನಿಂತಿರುವ ನಾಲಾ ಅಭಿವೃದ್ದಿ ಕಾರ್ಯವನ್ನು ಮುಂದುವರೆಸುವ ಯೋಜನೆ ಬಗ್ಗೆ ಪ್ರಸ್ತಾಪಿಸಿದೆ. ಆದ್ದರಿಂದ  ಕಳಸಾ- ಹಲತಾರೆ ನಾಲಾ ಉಪನದಿಗೆ ಚೆಕ್ ಡ್ಯಾಮ್ ನಿರ್ಮಿಸುವುದರ ಮೂಲಕ 3.56 ಟಿಎಂಸಿ ನೀರನ್ನು ಮಲಪ್ರಭಾಗೆ ಹರಿಸುವ ಯೋಜನೆಯನ್ನು ಹೊಂದಲಾಗಿದೆ ಎಂದು ಅದು ತಿಳಿಸಿದೆ. ಈಗಾಗಲೇ .5.15 ಕಿ ಮಿ ಯ ನಾಲಾ ದಲ್ಲಿ ಕೇವಲ 500 ಮೀಟರ ನಷ್ಟು ಕೆಲಸ ಭಾಕಿ ಉಳಿದಿರುವುದರಿಂದ  ಇದನ್ನು ಈಗ ಪೂರ್ಣಗೊಳಿಸಲು ಕೇಂದ್ರ ಸರ್ಕಾರದಿಂದ ಒಪ್ಪಿಗೆ ಅವಶ್ಯಕವೆಂದು ಜನಸಾಮನ್ಯರ ಪಕ್ಷ ಅಭಿಪ್ರಾಯಪಟ್ಟಿದೆ. 


ಕರ್ನಾಟಕ ಸರ್ಕಾರವು ಆಗಸ್ಟ್ 22  2002 ರಲ್ಲೇ  4 ಟಿಎಂಸಿ  ನೀರನ್ನು  ತೀರುಗಿಸಲು ಒಪ್ಪಿಗೆ ನೀಡಿದ್ದು ,ಆದರೆ ಈ ಯೋಜನೆಯನ್ನು ಪೂರ್ಣ ಗೊಳಿಸಲು ಇದಕ್ಕೆ ಕನಿಷ್ಠವೆಂದರು 402 ಹೆಕ್ಟೇರ್ ಭೂಮಿ ಅವಶ್ಯಕವಾಗಿದೆ. ಅದರಲ್ಲಿ  242 ಹೆಕ್ಟೇರ್ ಭೂಮಿ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಬರುವುದರಿಂದ ಈ ಚೆಕ್ ಡ್ಯಾಮ್ ನಿರ್ಮಾಣದ  ವಿಚಾರವನ್ನು ಸಂಕೀರ್ಣಗೊಳಿಸಿದೆ ಎಂದು ತಿಳಿಸಿದೆ.


ಈ ಹಿಂದೆ ವಿಚಾರವಾಗಿ ಕರ್ನಾಟಕದ ನೀರಾವರಿ ಇಲಾಖೆಯು ಮೀಸಲು ಅರಣ್ಯದ ಭೂಮಿಯೊಂದನ್ನು  ಬಿಟ್ಟು ಚೆಕ್ ಡ್ಯಾಮ್ ನಿರ್ಮಿಸಲು ನಿರ್ದೇಶನ ನೀಡಿತ್ತು, ಆದರೆ ಈವರೆಗೂ ಕೂಡಾ ಯಾವುದೇ ಕಾರ್ಯ ಅಲ್ಲಿ ಚಾಲನೆಗೊಂಡಿಲ್ಲದಿರುವುದರಿಂದ ಜನಸಾಮಾನ್ಯರ ಮೂಲಕ ಸುಮಾರು 50 ಕೋಟಿ ರೂಗಳಲ್ಲಿ ಈ ಕಾರ್ಯವನ್ನು ಕೈಗೆತ್ತಿಕೊಳ್ಳುವ ಬಗ್ಗೆ ಪ್ರಸ್ತಾಪಿಸಿ ಅದರಲ್ಲಿ ಸ್ವತಃ ಜನಸಾಮಾನ್ಯರ ಪಕ್ಷವು 20 ಕೋಟಿ ರೂಗಳು ದೇಣಿಗೆಯನ್ನು ನೀಡಿರುವ ಕುರಿತು ಮಾಹಿತಿ ನೀಡಿದೆ.


ಉತ್ತರಕರ್ನಾಟಕದ ಪ್ರತಿಯೊಬ್ಬ ರೈತನು ಈ ಯೋಜನೆಗಾಗಿ 100 ಹಾಗೂ ಪ್ರತಿ ಮನೆಯಿಂದ ಒಂದು ರೊಟ್ಟಿ ಎನ್ನುವಂತೆ ನೀಡಲು ಮುಂದೆ ಬಂದಿದ್ದಾರೆ.ಆದ್ದರಿಂದ ಇದು ಈ ಉಪನದಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸರಿಯಾದ ಸಮಯ, ಆ ಮೂಲಕ ಬರಗಾಲದಲ್ಲಿ ತೀವ್ರ ನೀರಿನ ಸಮಸ್ಯೆಯನ್ನು ಅನುಭವಿಸುವ ರೈತರು ನೀರಿಲ್ಲದೆ ಆತ್ಮಹತ್ಯೆಯನ್ನು ಮಾಡಿಕೊಳ್ಳುವಂತ ಪರಿಷ್ಥಿತಿ ಈ ಭಾಗದ ರೈತರದ್ದಾಗಿದೆ  ಆದ್ದರಿಂದ ಇಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮತ್ತು ರೈತರ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಈ ಭಾಗದಲ್ಲಿನ ಕಳಸಾ ಮತ್ತು ಬಂಡೂರಿ ಚೆಕ್ ಡ್ಯಾಮ್ ನಿರ್ಮಾಣ ಮಾಡಲು ಅವಕಾಶ ಮಾಡಿಕೊಡಬೇಕೆಂದು ಜನಸಾಮಾನ್ಯರ ಪಕ್ಷವು ಪ್ರಧಾನಿ ನರೇಂದ್ರ ಮೊದಿಯವರಲ್ಲಿ ಕೇಳಿಕೊಂಡಿದೆ, ಒಂದುವೇಳೆ ಪ್ರಧಾನಿಯವರು ಈ ವಿಚಾರವನ್ನು ಅಲಕ್ಷಿಸಿದರೆ ಉಗ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳುವ ಸೂಚನೆಯನ್ನು ಜನಸಾಮಾನ್ಯರ ಪಕ್ಷವು ಪ್ರಧಾನಮಂತ್ರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.