Aam Aadmi Party: ಆಮ್ ಆದ್ಮಿ ಪಕ್ಷಕ್ಕೆ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಸೇರ್ಪಡೆ ಸಾಧ್ಯತೆ?!
ಸಾಮಾನ್ಯವಾಗಿ ಪೊಲೀಸ್ ಕಮಿಷನರ್ ಹುದ್ದೆಗೆ ಕನ್ನಡಿಗರು ಬರುವುದು ಕಡಿಮೆ, ಅಂತಹ ಹುದ್ದೆಯಲ್ಲಿ ಒಂದು ವರ್ಷ ಐಪಿಎಸ್ ಭಾಸ್ಕರ್ ರಾವ್ ಕೆಲಸ ನಿರ್ವಹಣೆ ಮಾಡಿದ್ದರು.
ಬೆಂಗಳೂರು: ಇತ್ತೀಚಿಗೆ ಎಡಿಜಿಪಿ ಭಾಸ್ಕರ್ ರಾವ್ (Bhaskar Rao), ತಮ್ಮ ಐಪಿಎಸ್ ಸೇವೆಗೆ ರಾಜೀನಾಮೆ ನೀಡಿದ್ದು, ಆಮ್ ಆದ್ಮಿ ಪಕ್ಷದ ಪ್ರಮುಖ ಹಾಗೂ ಡೆಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಜತೆ ಪಕ್ಷಕ್ಕೆ ಸೇರುವ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.
ಸದ್ಯ ಕರ್ನಾಟಕ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷಕ್ಕೆ (Aam Aadmi Party) ನಾಯಕತ್ವ ಹಾಗೂ "ಫೇಸ್" ಕೊರತೆ ಕಾಡುತ್ತಿದ್ದು, ಕೋವಿಡ್ ಸಂದರ್ಭದಲ್ಲಿ ಬೆಂಗಳೂರು ಜನರ ಮೆಚ್ಚುಗೆ ಪಡೆದಿರುವ ಭಾಸ್ಕರ್ ರಾವ್(Bhaskar Rao), ಹೆಸರನ್ನು ಬಳಸಿಕೊಂಡು ಆಮ್ ಆದ್ಮಿ ಪಕ್ಷ ರಾಜ್ಯದಲ್ಲಿ ತನ್ನ ಬೇರೂರಲು ಪ್ರಯತ್ನ ನಡೆಸಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- 'ಶೋಷಿತರನ್ನು ಮೇಲೆತ್ತಲು ಪ್ರಯತ್ನ ಮಾಡಿದವರಲ್ಲಿ ಬ್ರಾಹ್ಮಣರು ಮೊದಲಿಗರು' : ಗೋವಿಂದ ಕಾರಜೋಳ
ಸಾಮಾನ್ಯವಾಗಿ ಪೊಲೀಸ್ ಕಮಿಷನರ್ ಹುದ್ದೆಗೆ ಕನ್ನಡಿಗರು ಬರುವುದು ಕಡಿಮೆ, ಅಂತಹ ಹುದ್ದೆಯಲ್ಲಿ ಒಂದು ವರ್ಷ ಐಪಿಎಸ್ ಭಾಸ್ಕರ್ ರಾವ್ (Bhaskar Rao) ಕೆಲಸ ನಿರ್ವಹಣೆ ಮಾಡಿದ್ದರು. ಸರ್ಕಾರದ ಕಾರ್ಯಗಳು ಹಾಗೂ ಲೋಪಗಳ ಬಗ್ಗೆ ಉತ್ತಮ ಅರಿವಿರುವ ಇವರು, 2023ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ನಿರ್ಧಾರ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ- ದೇವಸ್ಥಾನ ಕಟ್ಟಿದವರು ಓಬಿಸಿ, ದಲಿತರು; ಆದರೂ ಮಜಾ ಮಾಡುವವರು ನೀವು..!
ಒಟ್ಟಾರೆಯಾಗಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ರಾಜ್ಯದಲ್ಲಿ ತನ್ನ ರಾಜಕೀಯ ಅಸ್ತಿತ್ವ ಸಾಧಿಸಿದ್ದು, ತೆರೆಮರೆಯಲ್ಲಿ ಆಮ್ ಆದ್ಮಿ ಪಕ್ಷ ನಾಯಕರ ಹುಡುಕಾಟದ ಮೂಲಕ ಪ್ರಬಲ ಪಕ್ಷವಾಗಿ ಹೊರಹೊಮ್ಮಲು ಯತ್ನಿಸುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.