ಕರ್ನಾಟಕದಲ್ಲಿ ಮೊದಲ ಬಾರಿಗೆ ರೂ. 13,666 ಕೋಟಿ ರಾಜಸ್ವ ಕೊರತೆ..!
Karnataka News: ವಿಧಾನಮಂಡಲದ ಉಭಯಸದನದಲ್ಲಿ ಮಾರ್ಚ್ 2022ಕ್ಕೆ ಕೊನೆಗೊಂಡ ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳ ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಲಾಯಿತು.
ಬೆಂಗಳೂರು : 2004-05ನೇ ಸಾಲಿನಿಂದ ರಾಜಸ್ವ ಹೆಚ್ಚಳವನ್ನು ದಾಖಲಿಸಿದ್ದ ರಾಜ್ಯವು 2020-21 ರಲ್ಲಿ ಮೊದಲ ಬಾರಿಗೆ ರಾಜಸ್ವ ಕೊರತೆಯನ್ನು ಅನುಭವಿಸಿದ್ದು, 2021-22ನೇ ಸಾಲಿನಲ್ಲಿಯೂ ಮುಂದುವರೆಯಿತು ಎಂದು ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿ ತಿಳಿಸಿದೆ.
ಇದನ್ನೂ ಓದಿ: ಈ ರಾಶಿಯವರು ಹೋದಲೆಲ್ಲಾ ಯಶಸ್ಸು , ಕೈ ಇಟ್ಟಲೆಲ್ಲಾ ಹಣ ! ಮನದ ಇಚ್ಛೆ ನೆರವೇರುವ ಕಾಲವಿದು !
ವಿಧಾನಮಂಡಲದ ಉಭಯಸದನದಲ್ಲಿ ಮಾರ್ಚ್ 2022ಕ್ಕೆ ಕೊನೆಗೊಂಡ ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳ ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಲಾಯಿತು. ವರದಿಯು ಹಣಕಾಸುಗಳ ವ್ಯವಹಾರದ ವಿಶ್ಲೇಷಣಾತ್ಮಕ ವಿಮರ್ಶೆಯನ್ನು ಹೊಂದಿದ್ದು, ಐದು ಆಧ್ಯಾಯಗಳಲ್ಲಿ ರಚಿಸಲಾಗಿದೆ.
ಅವಲೋಕನ, ರಾಜ್ಯದ ಹಣಕಾಸು ವ್ಯವಹಾರಗಳು, ಆಯವ್ಯಯ ನಿರ್ವಹಣೆ, ಲೆಕ್ಕಗಳ ಗುಣಮಟ್ಟ ಮತ್ತು ಆರ್ಥಿಕ ನಿರೂಪಣಾ ಪದ್ಧತಿಗಳು ಮತ್ತು ರಾಜ್ಯ ಸಾರ್ವಜನಿಕ ವಲಯ ಉದ್ದಿಮೆಗಳ ಮೇಲೆ ವರದಿಯು ಬೆಳಕು ಚೆಲ್ಲಿದೆ.
ರಾಜಸ್ವ ಕೊರತೆಯು ರೂ. 13,666 ಕೋಟಿಯಾಗಿತ್ತು. ಕಳೆದ ಮೂರು ವರ್ಷದಲ್ಲಿ ವಿತ್ತೀಯ ಕೊರತೆಯನ್ನು ಜಿಎಸ್‌ಡಿಪಿಯ ಶೇ.3ಕ್ಕಿಂತ ಕಡಿಮೆ ಇರುವಂತೆ ಮತ್ತು 2020-21, 2021-22ರ ಅವಧಿಯಲ್ಲಿ ಶೇ.4ಕ್ಕಿಂತ ಕಡಿಮೆ ಇರುವಂತೆ ಗಮನಹರಿಸುವಲ್ಲಿ ರಾಜ್ಯವು ಯಶಸ್ವಿಯಾಗಿದೆ.
ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 2021-22ರ ಅವಧಿಯಲ್ಲಿ ರಾಜ್ಯ ಸರ್ಕಾರವು ತನ್ನ ರಾಜಸ್ವ ಸ್ವೀಕೃತಿಯಲ್ಲಿ ಶೇ.24.92ರಷ್ಟು ಹೆಚ್ಚಳವನ್ನು ದಾಖಲಿಸಿದೆ. ಶೇ.62ರಷ್ಟು ರಾಜಸ್ವ ಸೀಕೃತಿಯು ರಾಜ್ಯ ಸ್ವಂತ ತೆರಿಗೆ ಆದಾಯದಿಂದ ಬಂದಿದೆ ಎಂದು ಉಲ್ಲೇಖ ಮಾಡಲಾಗಿದೆ.
21 ಇಲಾಖೆಗಳು 25 ಲಕ್ಷ ರು. ಮತ್ತು ಅದಕ್ಕಿಂತ ಹೆಚ್ಚಿನ ಅನುದಾನವನ್ನು ಪಡೆದಿರುವ ಸಂಸ್ಥೆಗಳಿಗೆ ಸಂಬಂಧಪಟ್ಟಂತೆ ಮಾಹಿತಿಯನ್ನು ಒದಗಿಸಿಲ್ಲ. ವೈಯಕ್ತಿಕ ಠೇವಣಿ (ಪಿಡಿ) ಖಾತೆಗಳಲ್ಲಿ ದೊಡ್ಡ ಮೊತ್ತದ ಹಣವನ್ನು ಉಳಿಸಿಕೊಳ್ಳುವುದು, ನಿಷ್ಕ್ರಿಯ ಪಿಡಿ ಖಾತೆಗಳನ್ನು ಮುಕ್ತಾಯಗೊಳಿಸದಿರುವುದು ಮತ್ತು ಬಳಕೆ ಮಾಡದ ಮೊತ್ತವನ್ನು ಸಂಚಿತನಿಧಿಗೆ ವರ್ಗಾವಣೆ ಮಾಡದಿರುವುದು ಶಾಸಕಾಂಗದ ಹಣಕಾಸು ನಿಯಂತ್ರಣ ನೀತಿಗಳಿಗೆ ವಿರುದ್ಧವಾಗಿದೆ.
2020-21ನೇ ಸಾಲಿನಲ್ಲಿ 3,989 ಕೋಟಿ ರು.ಇದ್ದ ಪಿಡಿ ಖಾತೆಗಳ ಮುಕ್ತಾಯ ಮೊತ್ತ 2021-22ನೇ ಸಾಲಿನಲ್ಲಿ 4,105 ಕೋಟಿ ರುಗೆ ಏರಿಕೆಯಾಗಿದೆ ಎಂದು ತಿಳಿಸಲಾಗಿದೆ.
2022ರ ಮಾ.31ರ ಅಂತ್ಯಕ್ಕೆ ಆರು ನಿಗಮಗಳು, 119 ಸರ್ಕಾರಿ ಕಂಪನಿಗಳು ಸೇರಿದಂತೆ 125 ರಾಜ್ಯ ಸಾರ್ವಜನಿಕ ವಲಯ ಉದ್ದಿಮೆಗಳಿದ್ದವು. 119 ಸರ್ಕಾರಿ ಕಂಪನಿಗಳಲ್ಲಿ 13 ನಿಷ್ಕ್ರಿಯವಾಗಿವೆ. ಇವುಗಳು 97,053 ಕೋಟಿ ರು. ಬಂಡವಾಳ ಹೂಡಿಕೆ ಮತ್ತು 92,885 ಕೋಟಿ ರು. ದೀರ್ಘಾವಧಿ ಸಾಲವನ್ನು ಹೊಂದಿದ್ದವು ಎಂದು ಹೇಳಿದೆ.
ನಿರೀಕ್ಷಿತ ಉಳಿತಾಯವನ್ನು ಗುರುತಿಸಲು ಮತ್ತು ನಿಗದಿತ ಕಾಲಮಿತಿಯೊಳಗೆ ಅದನ್ನು ತಲುಪಲು ಸರ್ಕಾರವು ಸೂಕ್ತವಾದ ನಿಯಂತ್ರಣ ಕಾರ್ಯವಿಧಾನವನ್ನು ಸ್ಥಾಪಿಸಬೇಕು. ಹಣಕಾಸು ನಿಬಂಧನೆಗಳಿಗನುಗುಣವಾಗಿ ಪುನರ್‌ವಿನಿಯೋಗ ಆದೇಶಗಳನ್ನು ಜಾರಿಗೊಳಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಹಣವು ಲೋಪವಾಗುವುದನ್ನು ತಪ್ಪಿಸಲು ವರ್ಷದ ಕೊನೆಯಲ್ಲಿ ವೆಚ್ಚ ಮಾಡುವುದನ್ನು ತಪ್ಪಿಸಬೇಕು.
ಇದನ್ನೂ ಓದಿ: Health Tips: ಉತ್ತಮ ಆರೋಗ್ಯ ಪಡೆಯಲು ಈ ಆಹಾರ ಸೇವಿಸಿ
ನಿರ್ದಿಷ್ಟ ಉದ್ದೇಶಗಳಿಗೆ ಬಿಡುಗಡೆಯಾದ ಅನುದಾನಗಳಿಗೆ ಸಂಬಂಧಿಸಿದಂತೆ ಇಲಾಖೆಗಳು ಬಳಕೆ ಪ್ರಮಾಣಪತ್ರಗಳನ್ನು ನಿಗದಿತ ಸಮಯದಲ್ಲಿ ಸಲ್ಲಿಸುವುದನ್ನು ಸರ್ಕಾರವು ಖಚಿತಪಡಿಸಿಕೊಳ್ಳಬೇಕು. ಸಲ್ಲಿಸದಿರುವ ನಿಯಂತ್ರಣಾಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವರದಿಯಲ್ಲಿ ಸಲಹೆ ನೀಡಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ