ಮಂಡ್ಯ: ದೇಶದ 75ನೇ ವರ್ಷದ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಪ್ರಯುಕ್ತ ಮಂಡ್ಯದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯೋತ್ಸವದ ಸಂದೇಶ ಸಾರಿ ಸಚಿವ ಆರ್.ಅಶೋಕ್ ಎಸ್ಕೇಪ್ ಆಗಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: “ಮುಂಬರುವ 25 ವರ್ಷಗಳಲ್ಲಿ ಭಾರತದ ಚಿತ್ರಣ ಹೀಗಿರಲಿದೆ”… ಕೆಂಪುಕೋಟೆಯಲ್ಲಿ ಪ್ರಧಾನಿ ಮಾತು


ಸಚಿವ ಅಶೋಕ್ ಹಿಂದೆಯೇ ಸಂಸದೆ ಸುಮಲತಾ ಅಂಬರೀಶ್ ಕೂಡ ನಿರ್ಗಮಿಸಿದ್ದಾರೆ. ಧ್ವಜಾರೋಹಣ ನೆರವೇರಿಸಿದ ಬಳಿಕ ಪಥಸಂಚಲನದ ಗೌರವ ವಂದನೆ ಸ್ವೀಕರಿಸಿದ ಸಚಿವ ಅಶೋಕ್ ಸ್ವಾತಂತ್ರ್ಯೋತ್ಸವದ ಸಂದೇಶ ಸಾರಿ ಕಾರ್ಯಕ್ರಮಕ್ಕೆ ಗುಡ್ ಬೈ ಹೇಳಿ ಹೋಗಿದ್ದಾರೆ.    


ಇದನ್ನೂ ಓದಿ: Independence Day 2022: ಇದೇ ಮೊದಲ ಬಾರಿಗೆ ಸ್ವದೇಶಿ ಫಿರಂಗಿಯೊಂದಿಗೆ ಗೌರವ : ಕೆಂಪು ಕೋಟೆಯಲ್ಲಿ ಅನಾವರಣಗೊಂಡಿತು 'ದೇಸಿ ಧಮ್ '


ಸ್ವಾತಂತ್ರ್ಯೋತ್ಸವ ಹಿನ್ನೆಲೆ ಏರ್ಪಡಿಸಿದ್ದ ಹಲವು ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಸಚಿವ ಅಶೋಕ್ ಅರ್ಧಕ್ಕೆ ತೆರಳಿದ್ದಾರೆ. ಸ್ಥಬ್ಧ ಚಿತ್ರಗಳ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸದೆ ಹಾಗೂ ಪ್ರಶಸ್ತಿ ಪ್ರದಾನ, ಲ್ಯಾಪ್‌ಟಾಪ್ ವಿತರಣೆ ಮಾಡದೆ ಹೋಗಿದ್ದಾರೆ. ತಾವೇ ನಿರ್ಧರಿಸಿದಂತೆ ಕೇವಲ 40 ನಿಮಿಷಕ್ಕೆ ಕಾರ್ಯಕ್ರಮದಿಂದ ನಿರ್ಗಮಿಸಿದ್ದಾರೆ. ಈ ಕಾರ್ಯಕ್ರನದಲ್ಲಿ ಎಂ.ಶ್ರೀನಿವಾಸ್, ಡಿಸಿ ಅಶ್ವಥಿ, ಎಸ್ಪಿ ಎನ್.ಯತೀಶ್, ನಗರಸಭೆ ಅಧ್ಯಕ್ಷ ಸೇರಿದಂತೆ ಹಲವರು ಭಾಗಿಯಾಗಿದ್ದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.