`ಲೆಸ್ ಟ್ರಾಫಿಕ್ ಡೇ` ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮಾತು
ರಾಜ್ಯದಲ್ಲಿ ವಾಯುಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಪ್ರತಿ ತಿಂಗಳು ಎರಡನೇ ಭಾನುವಾರ `ಲೆಸ್ ಟ್ರಾಫಿಕ್ ಡೇ` ಆಚರಿಸಲು ಸರ್ಕಾರ ನಿರ್ಧರಿಸಿದೆ.
ಬೆಂಗಳೂರು: ಫೆಬ್ರವರಿ ಎರಡನೇ ಭಾನುವಾರದಿಂದ ರಾಜ್ಯ ಸರ್ಕಾರ ಜಾರಿಗೊಳಿಸಲು ಹೊರಟಿರುವ 'ಲೆಸ್ ಟ್ರಾಫಿಕ್ ಡೇ' ಅಭಿಯಾನಕ್ಕೆ ರಾಕಿಂಗ್ ಸ್ಟಾರ್ ಯಶ್ ಕೈಜೋಡಿಸಿದ್ದಾರೆ.
ಇದನ್ನೂ ಓದಿ: ವಾಯುಮಾಲಿನ್ಯ ತಡೆಗಟ್ಟಲು 'ಟ್ರಾಫಿಕ್ ಮುಕ್ತ ದಿನ' - ಹೆಚ್.ಎಂ.ರೇವಣ್ಣ
ಇತ್ತೀಚಿಗೆ ವಾಯುಮಾಲಿನ್ಯ ಎಂಬುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ವಾಯು ಮಾಲಿನ್ಯ ತಡೆಗಟ್ಟಲು ಕ್ರಮ ಕೈಗೊಳ್ಳದಿದ್ದರೆ ಮುಂದಿನ ಪೀಳಿಗೆಗೆ ಬೆಂಗಳೂರನ್ನು ಉಳಿಸುವುದು ಕನಸಿನ ಮಾತು. 'ಲೆಸ್ ಟ್ರಾಫಿಕ್ ಡೇ' ಅಭಿಯಾನಕ್ಕೆ ಕೈಜೋಡಿಸಿರುವ ಯಶ್ ಈ ಬಗ್ಗೆ ಏನ್ ಹೇಳ್ತಾರ್...? ಅವರ ಮಾತನ್ನು ನೀವೇ ಕೇಳಿ...
ಪರಿಸರವನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ. ವಿರಳ ಸಂಚಾರ ದಿನ ಅಭಿಯಾನಕ್ಕೆ ನೀವು ಸಹ ಕರಿಸಿ.