ರಾಜ್ಯ ರಾಜಕಾರಣದಲ್ಲಿ ಸೀಕ್ರೆಟ್ ಆಪರೇಷನ್ ನಡೆಸಿದ್ರಾ ಬಿಜೆಪಿ ಚಾಣಾಕ್ಯ?
ಇತ್ತೀಚಿನ ದಿನಗಳಲ್ಲಿ ಸರ್ಕಾರದ ವಿರುದ್ಧ ನಕಾರಾತ್ಮಕವಾಗಿ ಅಭಿಪ್ರಾಯಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಗಂಭೀರ ಕ್ರಮ ಕೈಗೊಂಡಿರುವ ಶಾ ಅವರು ಸೀಕ್ರೆಟ್ ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ಕೇಂದ್ರ ಸರ್ಕಾರದ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದಡಿ ಸ್ಥಾಪಿಸಲಾಗಿರುವ ನೃಪತುಂಗ ಏಕೀಕೃತ ವಿಶ್ವವಿದ್ಯಾಲಯದ ಉದ್ಘಾಟನೆಗೆಂದು ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೀಕ್ರೆಟ್ ಆಪರೇಷನ್ ಮಾಡಿದ್ದಾರೆಯೇ ಎಂಬ ಕುತೂಹಲ ಮೂಡಿದೆ.
ಇದನ್ನು ಓದಿ: ಸಿಎಂ ಬದಲಾವಣೆ ಬಗ್ಗೆ ಬಿಜೆಪಿ ಶಾಸಕ ಯತ್ನಾಳ್ ಮುನ್ಸೂಚನೆ ನಿಜವೇ: ಬಿಜೆಪಿಗೆ ಕಾಂಗ್ರೆಸ್ ಪ್ರಶ್ನೆ
ಸಚಿವ ಅಮಿತ್ ಶಾ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ರಾಜ್ಯ ರಾಜಕೀಯದ ಕುರಿತಾಗಿ ಪೂರ್ಣ ಮಾಹಿತಿ ಪಡೆದಿದ್ದಾರಂತೆ. ಇತ್ತೀಚಿನ ದಿನಗಳಲ್ಲಿ ಸರ್ಕಾರದ ವಿರುದ್ಧ ನಕಾರಾತ್ಮಕವಾಗಿ ಅಭಿಪ್ರಾಯಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಗಂಭೀರ ಕ್ರಮ ಕೈಗೊಂಡಿರುವ ಶಾ ಅವರು ಸೀಕ್ರೆಟ್ ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗಿದೆ.
ಕಳೆದ ದಿನ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೊತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ರಾಜಕಾರಣದ ಬದಲಾವಣೆ ಬಗ್ಗೆ ಚರ್ಚೆ ನಡೆಸಿರುವ ಸಾಧ್ಯತೆ ಇದೆ. ಇನ್ನು ಇದರ ಸಂಪೂರ್ಣ ನಿಯಂತ್ರಣ ಪ್ರಧಾನಿ ನರೇಂದ್ರ ಮೋದಿಯವರ ಕೈಯಲ್ಲಿದೆ ಎನ್ನಲಾಗಿದೆ. ಪ್ರಧಾನಿಗಳ ತೀರ್ಮಾನದ ಮೇಲೆ ಸಂಪುಟ ಬದಲಾವಣೆ ವಿಚಾರ ನಿಂತಿದೆ.
ಇದನ್ನು ಓದಿ: ಮುಸ್ಲಿಂ ಹಬ್ಬಗಳ ಬಾಯ್ಕಟ್ ಅಭಿಯಾನಕ್ಕೆ ಚೈತ್ರಾ ಕುಂದಾಪುರ ಕರೆ!
ಮೇ 10ರೊಳಗೆ ರಾಜ್ಯ ರಾಜಕೀಯಕ್ಕೆ ಸಂಪೂರ್ಣ ಸ್ಪಷ್ಟನೆ ಲಭಿಸಲಿದೆ. ಸದ್ಯ ಪ್ರಧಾನಿ ನರೇಂದ್ರ ಮೋದಿಯವರು ವಿದೇಶ ಪ್ರವಾಸದಲ್ಲಿರುವ ಕಾರಣ ಪ್ರಕ್ರಿಯೆ ನಿಧಾನವಾಗುತ್ತಿದೆ. ಇಂದು ಎಲ್ಲಾ ಪ್ರಶ್ನೆ, ಗೊಂದಲಗಳಿಗೆ ಅಂತ್ಯ ಬೀಳಲಿದೆ ಎಂದು ಹೇಳಲಾಗಿತ್ತು. ಆದರೆ ಅಮಿತ್ ಶಾ ಅವರು ಯಾವುದೇ ವಿಚಾರದಲ್ಲೂ ಪ್ರವೇಶ ಮಾಡದೆ ಕಾರ್ಯಕ್ರಮ ನೆರವೇರಿಸಿ ತೆರಳಲಿದ್ದಾರೆ ಎನ್ನಲಾಗಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.