ಬೆಂಗಳೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷೆ, ಗ್ರಾಮೀಣ ರಸ್ತೆ ಸಂಪರ್ಕ ಯೋಜನೆಯಡಿ ತೀರ್ಥಹಳ್ಳಿ ತಾಲೂಕಿನಲ್ಲಿ  ಸುಮಾರು 50 ಕೋಟಿ ರೂಪಾಯಿಗಳ ವೆಚ್ಚದ ಎರಡು ಸೇತುವೆಗಳ ಕಾಮಗಾರಿಗೆ ರಾಜ್ಯ ಆರ್ಥಿಕ ಇಲಾಖೆ, ಹಸಿರು ನಿಶಾನೆ ನೀಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಅನುಮಾನಾಸ್ಪದ ರೀತಿಯಲ್ಲಿ ರೈಲ್ವೆ ಹಳಿಗಳ ಮೇಲೆ ಪ್ರೇಮಿಗಳ ಶವ ಪತ್ತೆ


ರಾಜ್ಯ ಆರ್ಥಿಕ ಇಲಾಖೆಯು ತೀರ್ಥಹಳ್ಳಿ ತಾಲೂಕಿನ ತೂದೂರು-ಮುಂಡುವಳ್ಳಿ ಗ್ರಾಮಗಳ ನಡುವೆ ತುಂಗಾ ನದಿಗೆ ಹೊಸ ಸೇತುವೆ ನಿರ್ಮಾಣ ಕಾಮಗಾರಿಗೆ 25.65 ಕೋಟಿ ರೂಪಾಯಿಗಳ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. ಹಾಗೂ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಕಾರಣಗಿರಿ - ಬಪ್ಪನಮನೆ ಸಂಪರ್ಕ ರಸ್ತೆಯ ಶರಾವತಿ ಹಿನ್ನೀರಿನ ಬಿಲ್ಸಾಗರದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ 24.36 ಕೋಟಿ ರೂಪಾಯಿಗಳ ಪ್ರಸ್ತಾವನೆಗೆ ಒಪ್ಪಿಗೆ ದೊರೆತಿದ್ದು, ಶೀಘ್ರವಾಗಿ ಯೋಜನೆ ಅನುಷ್ಠಾನಕ್ಕೆ ಟೆಂಡರ್ ಕರೆಯಲಾಗುತ್ತದೆ.


ಇದನ್ನೂ ಓದಿ: ಕಾಂಗ್ರೆಸ್ ನಿಂದಲೇ ಭಯೋತ್ಪಾದನೆ, ಗಲಭೆ- ಬೇಕಾದ್ರೆ ಸಾಬೀತು ಮಾಡ್ತೀನಿ: ಮುತಾಲಿಕ್ ಗುಡುಗು


ಕ್ಷೇತ್ರದ ಶಾಸಕ ಹಾಗೂ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರರವರು ಈ ಎರಡು ಯೋಜನೆಗಳ ಮಂಜೂರಾತಿಗೆ ಬೇಡಿಕೆ ಮಂಡಿಸಿ ಪ್ರಸ್ತಾವನೆ ಸಲ್ಲಿಸಿದ್ದರು. ತೂದೂರು- ಮುಂಡುವಳ್ಳಿ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣ ಯೋಜನೆ ಕಾರ್ಯಗತಗೊಳಿಸಬೇಕೆಂದು ದಶಕಗಳಿಂದ ಬೇಡಿಕೆ ಇದ್ದರೂ ಇದುವರೆಗೆ ಮಾನ್ಯತೆ ದೊರೆತಿರಲಿಲ್ಲ. ಈ ಎರಡೂ ಕಾಮಗಾರಿಗಳನ್ನು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ದಿ ನಿಗಮದ ವತಿಯಿಂದ ಕಾರ್ಯಗತಗೊಳಿಸಲಾಗುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.