ಬೆಂಗಳೂರು: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ನಾಗೇಶ್ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿರುವ ರುಪ್ಸಾ ಕರ್ನಾಟಕ ಪ್ರಧಾನಿ ನರೇಂದ್ರ ಮೋದಿಗೆ ದೂರಿನ ಪತ್ರ ಬರೆದಿದ್ದಾರೆ. ಸಚಿವ ನಾಗೇಶ್ ಶಿಕ್ಷಣದ ಕನಿಷ್ಠ ಜ್ಞಾನವಿಲ್ಲದೆ ವ್ಯಾಪಾರಿ ಮನೋಭಾವದ ವ್ಯಕ್ತಿ ಎಂದು ಟೀಕಿಸಿದ್ದು ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಮ್ಯಾನೇಜ್ ಮೆಂಟ್ ಸಂಘ ಸಚಿವರನ್ನು ವಜಾಗೊಳಿಸಲು ಸಿಎಂಗೆ ನಿರ್ದೇಶಿಸಿ ಎಂದು ಪತ್ರ ಬರೆದಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Honeytrap: ಹನಿಟ್ರ್ಯಾಪ್ ಮಾಡಿ ನಂತರ ಸಿಬಿಐ ಹೆಸರಲ್ಲಿ ಲಕ್ಷ ಲಕ್ಷ ವಂಚನೆ


ಒಟ್ಟು 7 ತಪ್ಪು ನಿರ್ಧಾರಗಳ ಪಟ್ಟಿ ಮಾಡಿ, ಪ್ರಧಾನಿಗೆ ದೂರು ಸಲ್ಲಿಕೆ


1)ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ


2)ಶಾಲೆಗೆ ಮಕ್ಕಳ ದಾಖಲಾತಿ ಮರೆತ ಶಿಕ್ಷಣ ಇಲಾಖೆ


3) ಹಿಜಾಬ್ ವಿವಾದ 


4) ಕಠಿಣ ಹಾಗೂ ಅವೈಜ್ಞಾನಿಕ ನಿಯಮ ಪಾಲನೆಗೆ ಆದೇಶ 


5) ರಾಷ್ಟ್ರೀಯ ಶಿಕ್ಷಣ ನೀತಿ 


6) ಸಮವಸ್ತ್ರ, ಸೈಕಲ್ ಹಾಗೂ ಪುಸ್ತಕ ನೀಡದೇ ಇರುವುದು 


7) ಶಿಕ್ಷಕರಿಲ್ಲದ ಸರ್ಕಾರಿ ಶಾಲೆಗಳು


ಈ ಏಳು ಅಂಶಗಳ ಬಗ್ಗೆ ಪ್ರಧಾನಿಗೆ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಮ್ಯಾನೇಜ್ ಮೆಂಟ್ ಸಂಘ ಪತ್ರ ಬರೆದಿದೆ.  


ಇದನ್ನೂ ಓದಿ: ರಾಜ್ಯದ 541 ಪಿಯು ಕಾಲೇಜಲ್ಲಿ 3 ವರ್ಷದಿಂದ ವಿದ್ಯಾರ್ಥಿಗಳೇ ಇಲ್ಲ!


ಅಲ್ಲದೆ ಹತ್ತಾರು ಲಕ್ಷ ಮಕ್ಕಳು ಶಾಲೆ ಬಿಟ್ಟು ಬೀದಿ ಪಾಲಾಗುವಂತೆ ಶಿಕ್ಷಣ ಇಲಾಖೆ ಮಾಡಿದೆ. ಕಲಿಕಾ ವಾತಾವರಣ ನಾಶ ಮಾಡಿ, ವಿದ್ಯಾರ್ಥಿಗಳಲ್ಲಿ ಧಾರ್ಮಿಕ ವಿಭಜನೆಗೆ ಕಾರಣವಾಗ್ತಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಯಾವುದೇ ಪೂರ್ವ ತಯಾರಿ ಮಾಡಿಲ್ಲ, ಜೊತೆಗೆ ಬಜೆಟ್ ನಲ್ಲಿ ಅನುದಾನವೂ ಇಡದೇ ಶಿಕ್ಷಣ ಸಚಿವರು ನಗೆಪಾಟಲಿಗೆ ಈಡಾಗ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ 50 ಸಾವಿರ ಶಿಕ್ಷಕರ ಕೊರತೆ ಇದೆ ಈ ಎಲ್ಲಾ ಕರಣದಿಂದ ಸಚಿವರನ್ನು ವಜಾಗೊಳಿಸಿ ಎಂದು ರುಪ್ಸಾ ಮನವಿ ಮಾಡಿ, ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪತ್ರ ಬರೆದಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.