ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ಸಂಭ್ರಮದ ಚಾಲನೆ ನೀಡಲಾಯಿತು.ಈ ಬಾರಿ ಸಾಹಿತಿ ಎಸ್.ಎಲ್ ಬೈರಪ್ಪನವರು ನಾಡಹಬ್ಬ ದಸರಾಗೆ ಚಾಲನೆ ನೀಡಿದರು.



COMMERCIAL BREAK
SCROLL TO CONTINUE READING

ಈ ವೈಭವದ ಕಾರ್ಯಕ್ರಮದ ಚಾಲನೆಗೆ ಮುಖ್ಯಮಂತ್ರಿ ಯಡಿಯೂರಪ್ಪ, ಮೈಸೂರು ಜಿಲ್ಲಾ ಉಸ್ತುವಾರಿ ವಿ.ಸೋಮಣ್ಣ, ಗೋವಿಂದ್ ಕಾರಜೋಳ, ಕೇಂದ್ರ ಸಚಿವ ಸದಾನಂದಗೌಡ ಅವರು ಸಾಕ್ಷಿಯಾದರು.



ಇದೇ ವೇಳೆ ದಸರಾ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಸಾಹಿತಿ ಎಸ್.ಎಲ್.ಬೈರಪ್ಪ ' ನನಗೆ ದೇವರ ಮೇಲೆ ನಂಬಿಕೆ ಇದೆ, ಸಾಹಿತಿಗಳು ದೇವರನ್ನು ನಂಬಬಾರದು ಎನ್ನುವ ಭಾವನೆ ಜನರಲ್ಲಿ ಬಿಂಬಿಸಲಾಗಿದೆ.ಆ ಅಭಿಪ್ರಾಯದಿಂದ ನೋಡುವದಾದಲ್ಲಿ ತಾವು ಸಾಹಿತಿ ಅಲ್ಲ' ಎಂದು ತಿಳಿಸಿದರು.



ಕೇರಳದ ಅಯ್ಯಪ್ಪಸ್ವಾಮಿ ದೇವಸ್ತಾನ ವಿಚಾರ ಪ್ರಸ್ತಾಪ ಮಾಡಿದ ಅವರು ಈ ವಿಚಾರದಲ್ಲಿ ಕೇರಳ ಕಮ್ಯುನಿಸ್ಟ್ ಸರ್ಕಾರ ತಪ್ಪು ನಿರ್ಧಾರ ತೆಗೆದುಕೊಂಡಿತು ಎಂದರು. ನಮ್ಮಲ್ಲಿ ಕೆಲವು ತಪ್ಪು ಗ್ರಹಿಕೆಗಳಿವೆ, ಅಯ್ಯಪ್ಪ ದೇವಸ್ತಾನದಲ್ಲಿ ಮುಟ್ಟದ ಮಹಿಳೆಯರಿಗೆ ಪ್ರವೇಶವಿಲ್ಲ ಎನ್ನುವುದು ಅಲ್ಲಿರುವ ಸಂಪ್ರದಾಯವಾಗಿದೆ. ಮಹಿಳಾ ನ್ಯಾಯಾಧೀಶೆ 'ಈ ವಿಚಾರದಲ್ಲಿ ತೀರ್ಪು ನೀಡಲು ಸಾಧ್ಯವಿಲ್ಲ ಎಂದರು, ಆದರೆ ಅದು ಮೈನಾರಿಟಿ ತೀರ್ಪು ಆಯಿತು. ಆದರೆ ಕಮ್ಯುನಿಸ್ಟ್ ಸರ್ಕಾರ ಬಲವಂತವಾಗಿ ಪೋಲಿಸ್ ಕಾವಲಿಟ್ಟು ಒಂದಿಷ್ಟು ಹೆಣ್ಣು ಮಕ್ಕಳನ್ನು ದೇವಸ್ತಾನಕ್ಕೆ ಕಳುಹಿಸಿತು'ಎಂದು ಕೇರಳ ಸರ್ಕಾರದ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.