ಶಿವಮೊಗ್ಗ: ರಾಜ್ಯದ ಪ್ರತಿಷ್ಠಿತ ಸಕ್ರೆಬೈಲು ಆನೆ ಬಿಡಾರ ಇತ್ತಿಚಿನ ದಿನಗಳಲ್ಲಿ ಒಂದಿಲ್ಲೊಂದು ವಿವಾದಗಳ ಮೂಲಕ ಸುದ್ದಿಯಾಗುತ್ತಿದೆ. ಬಾನುಮತಿ ಬಾಲ ಕಟ್ ಮಾಡಿದ ಸುದ್ದಿಯ ಬಳಿಕ ಸಕ್ರೆಬೈಲು ಆನೆ ಬಿಡಾರದಲ್ಲಿ ಮತ್ತೊಂದು ಎಡವಟ್ಟು ನಡೆದು ಹೋಗಿದ್ದು, ಆ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. 


COMMERCIAL BREAK
SCROLL TO CONTINUE READING

ನಿನ್ನೆ ಬಿಡಾರದಲ್ಲಿ ನವಜೋಡಿಗಳ ಪ್ರಿ ವೆಡ್ಡಿಂಗ್ ಶೂಟಿಂಗ್ ವೇಳೆ ಈ ಅಚಾತುರ್ಯ ನಡೆದಿದೆ. ಕುಂತಿ ಆನೆ ಮುಂಬಂದಿಯಲ್ಲಿ ನವ ಜೋಡಿಗಳು ಹೋಗುವ ದೃಶ್ಯ ಸೆರೆ ಹಿಡಿಯುವ ವೇಳೆ ದ್ರುವ ಆನೆ ಮರಿ ಏಕಾಏಕಿ ತಾಯಿ ಕುಂತಿ ಬಳಿ ಬಂದಿದೆ. ಆಗ ತಕ್ಷಣ ಕುಂತಿ ತಿರುಗಿದಾಗ ಆಯತಪ್ಪಿ ಮಾವುತ ಸಂಶುದ್ದಿನ್ ಕೆಳಗೆ ಬಿದ್ದಿದ್ದಾರೆ. ಸಂಶುದ್ದೀನ್  ಕೈಗೆ ಹಾಗು ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಆಗ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಪೂರ್ಣ ಘಟನಾವಳಿಯನ್ನು ಬಿಡಾರಕ್ಕೆ ಬಂದಿದ್ದ ಪ್ರವಾಸಿಗರೊಬ್ಬರೂ ಚಿತ್ರೀಕರಿಸಿ ಸೋಷಿಯಲ್ ಮಿಡಿಯಾದಲ್ಲಿ ಹರಿ ಬಿಟ್ಟಿದ್ದಾರೆ. 


ಇದನ್ನೂ ಓದಿ: ಮತಾಂತರವಾಗಿ, ಇಲ್ಲ ಇಸ್ಲಾಂನ ಕತ್ತಿಯಿಂದ ಸಾಯಿರಿ..! ಭಯಾನಕವಾಗಿದೆ ʼಸ್ಕೂಲ್‌ ಬಾಂಬ್‌ ಮೇಲ್‌ʼ 


ಮಾವುತ ಸಂಶುದ್ದೀನ್ ಗೆ ಸಹಸಿಬ್ಬಂದಿಯಂತಿರುವ ಕಾವಾಡಿ ಇಲ್ಲ. ಕುಂತಿ ತಾಯಿ ಆನೆಗೆ ಒಂಬತ್ತು ತಿಂಗಳ ಮರಿಯಾನೆ ದೃವ ಜೊತೆಗಿದೆ. ತಾಯಿ ಹಾಗು ಮರಿಯನ್ನು ಒಬ್ಬನೇ ಸಿಬ್ಬಂದಿ ನೋಡಿಕೊಳ್ಳುವುದು ಹಾಗೂ ಆನೆ ನಿಯಂತ್ರಿಸುವುದು ಕಷ್ಟಕರ ಕೆಲಸವೇ ಆಗಿದೆ. ಆನೆಯ ಮೇಲೆ ಒಬ್ಬರಿದ್ದರೆ. ಕೆಳಗೆ ಮತ್ತೊಬ್ಬ ಸಿಬ್ಬಂದಿಯಿರಬೇಕು. ಇದರ ಜೊತೆ ತಾಯಿ ಹಾಗೂ ಮರಿಗೆ ಒಬ್ಬನೇ ಮಾವುತ ಇದ್ರೆ ಪರಿಸ್ಥಿತಿ ಹೇಗಾಗ ಬೇಡ. ತಾಯಿ ಆನೆ ಮೇಲೆ ಮಾವುತ ಸಂಶುದ್ದೀನ್ ಇದ್ದ ಸಂದರ್ಭದಲ್ಲಿಯೇ ಮರಿಯಾನೆ ದೃವ ಚಂಗನೇ ತಾಯಿ ಬಳಿ ಓಡೋಡಿ ಬರುವಾಗ ಎಡವಟ್ಟು ನಡೆದಿದೆ.  


ಸಕ್ರೆಬೈಲು ಆನೆ ಬಿಡಾರದಲ್ಲಿ ವೆಡ್ಡಿಂಗ್ ಶೂಟಿಂಗ್ ಗೆ ಅವಕಾಶ ಇದೆಯಾ? 


ಸಕ್ರೆಬೈಲು ಆನೆ ಬಿಡಾರದಲ್ಲಿ ವೆಡ್ಡಿಂಗ್ ಶೂಟಿಂಗ್ ಗೆ ಅವಕಾಶ ಇದೆಯಾ? ಎಂಬ ಪ್ರಶ್ನೆ ಇದೀಗ ಮೂಡಿದೆ. ನಿಜಕ್ಕೂ ಸರ್ಕಾರದ ನಿಯಮಾವಳಿ ಪ್ರಕಾರ, ಆನೆ ಕ್ಯಾಂಪ್ ಗಳಲ್ಲಿ ಪ್ರಿ ವೆಡ್ಡಿಂಗ್ ಶೂಟಿಂಗ್ ಗಳಿಗೆ ಅವಕಾಶ ಇದೆಯಾ ಎಂಬುದು ಪ್ರಶ್ನಾರ್ಹವಾಗಿದೆ. ಸಿನಿಮಾಗಳಿಗಾದ್ರೆ ಕಾನೂನು ನಿಯಮದಂತೆ ಇಂತಿಷ್ಟು ಹಣ ಕಟ್ಟಿಸಿಕೊಂಡು, ಶೂಟಿಂಗ್ ಗೆ ಅವಕಾಶ ಕಲ್ಪಿಸಲಾಗುತ್ತದೆ. ಆದರೆ ಇಲ್ಲಿ ಕಾನೂನನ್ನು ಉಲ್ಲಂಘಿಸಿದವರು ಯಾರು? ಅವರ ವಿರುದ್ಧ ಕ್ರಮ ಏನು? ಎಂಬ ಪ್ರಶ್ನೆ ಮೂಡಿವೆ.


ಆಯುಷ್ಮಾನ್ ಶೂಟಿಂಗ್ ವೇಳೆ ಶಿವಣ್ಣನಿಗೆ ಎದುರಾಗಿತ್ತು ಸಮಸ್ಯೆ: 


ಈ ಹಿಂದೆ ಸಕ್ರೆಬೈಲು ಆನೆ ಬಿಡಾರದಲ್ಲಿ ಕಾನೂನಿನ ನಿಯಮಾವಳಿ ಪ್ರಕಾರವೇ ಸರ್ಕಾರಕ್ಕೆ ಹಣ ಪಾವತಿಸಿ ಕೇವಲ ಹತ್ತು ಸೆಕೆಂಡ್ ಗಳ ವಿಡಿಯೋ ಚಿತ್ರೀಕರಣಕ್ಕೆ ಚಿತ್ರತಂಡ ಅನುಮತಿ ಪಡೆದಿತ್ತು. ಚಿತ್ರೀಕರಣದಲ್ಲಿ ಶಿವರಾಜ್ ಕುಮಾರ್ ಆನೆಯ ಮೇಲೆ  ಹತ್ತಿ ಕೂತಿದ್ದಕ್ಕೆ ವಿರೋಧ ವ್ಯಕ್ತವಾಗಿತ್ತು. ಆನೆ ಶಿವಣ್ಣನ ಮೇಲೆ ನೀರು ಚಿಮ್ಮಿಸುವ ದೃಶ್ಯಕ್ಕೆ ಅವಕಾಶ ಪಡೆಯಲಾಗಿತ್ತು. ಜಂಗಲ್ ರೆಸಾರ್ಟ್ ಬಳಿಯ ಜಾಗದಲ್ಲಿ ಶಿವಣ್ಣನಿಗೆ ಆನೆಯ ಮೇಲೆ ಕೂರಿಸಿದ್ದರು. ಇದನ್ನೇ ಪ್ರಾಣಿ ಪ್ರಿಯರು ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದರು. 


ಇದನ್ನೂ ಓದಿ: ಜಗದೀಶ ಶೆಟ್ಟರ್ DNA ಸಂಘ ಪರಿವಾರದ್ದು, ಕಾಂಗ್ರೆಸ್ಸಿನದ್ದಲ್ಲ: ಸಿಟಿ ರವಿ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.