ಬೆಂಗಳೂರು: ಕೋವಿಡ್ ಆರ್ಥಿಕ ಬಿಕ್ಕಟ್ಟಿನ ನಡುವೆಯೇ ಶಾಸಕರ, ಸಚಿವರ ಸಂಬಳವನ್ನು ಭರ್ಜರಿಯಾಗಿ ಹೆಚ್ಚಳ ಮಾಡಲಾಗಿದೆ. ಯಾವುದೇ ಚರ್ಚೆ ಇಲ್ಲದೆ ಮಂತ್ರಿಗಳ ಸಂಬಳ ಭತ್ಯೆ ವಿಧೇಯಕವನ್ನು ಇಂದು(ಫೆ.22) ವಿಧಾನಸಭೆಯಲ್ಲಿ ಮಂಡಿಸಲಾಯಿತು.


COMMERCIAL BREAK
SCROLL TO CONTINUE READING

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ಖಂಡಿಸಿ, ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಕರ್ನಾಟಕ ಮಂತ್ರಿಗಳ ಸಂಬಳ ಭತ್ಯೆ ನಿವೃತ್ತಿ ವೇತನ ತಿದ್ದುಪಡಿ ವಿಧೇಯಕವನ್ನು ಮಂಡಿಸಲಾಯಿತು. ಮಂತ್ರಿಗಳ ಸಂಬಳ ಭತ್ಯೆ ಹೆಚ್ಚಳಕ್ಕೆ ಶಾಸಕ ಬಂಡೆಪ್ಪ ಕಾಶಂಪೂರ್ ವಿರೋಧ ಮಾಡಿದ್ದು, ಗದ್ದಲದ ನಡುವೆಯೇ ವಿಧೇಯಕ ಅಂಗೀಕಾರವಾಯಿತು.


ಇದನ್ನೂ ಓದಿ: HD Kumaraswamy: ‘ರಾಷ್ಟ್ರೀಯ ಪಕ್ಷಗಳ ರಕ್ಕಸ ರಾಜಕಾರಣಕ್ಕೆ ಕ್ಷಮೆಯೇ ಇಲ್ಲ’


ಏನಿದು ಕರ್ನಾಟಕ ಮಂತ್ರಿಗಳ ಸಂಬಳ ಮತ್ತು ಭತ್ಯೆ ನಿವೃತ್ತಿ ವೇತನ ತಿದ್ದುಪಡಿ ವಿಧೇಯಕ?


ಗದ್ದಲದ ನಡುವೆಯೂ ಮಂಡನೆಯಾಗಿರುವ ವಿಧೇಯಕದ ಪ್ರಕಾರ ಮಂತ್ರಿಗಳಿಗೆ ತಿಂಗಳಿಗೆ ಅಂದಾಜು ₹4,47,500 ಸಿಗಲಿದೆ.


ಹಾಗಾದರೆ ಮಂತ್ರಿಗಳ ಭತ್ಯೆ ಎಷ್ಟು ಹೆಚ್ಚಳ ಆಗಿದೆ?


ಮುಖ್ಯಮಂತ್ರಿ, ಸಚಿವರಿಗೆ:


ಸಂಬಳ (ಮುಖ್ಯಮಂತ್ರಿ): 50 ಸಾವಿರದಿಂದ 75 ಸಾವಿರ ರೂ.


ಸಂಬಳ (ಸಚಿವರಿಗೆ): 40 ಸಾವಿರದಿಂದ 60 ಸಾವಿರ ರೂ.


ಆತಿಥ್ಯ ಭತ್ಯೆ(ವಾರ್ಷಿಕ): 3 ಲಕ್ಷದಿಂದ 4.50 ಲಕ್ಷ ರೂ.ವರೆಗೆ


ಮನೆ ಬಾಡಿಗೆ: 80 ಸಾವಿರದಿಂದ 1.20 ಲಕ್ಷ ರೂ.ವರೆಗೆ


ಮನೆ ನಿರ್ವಹಣೆ: 20 ಸಾವಿರದಿಂದ 30 ಸಾವಿರ ರೂ.


ಇಂಧನ: 1000 ಲೀಟರ್ ನಿಂದ 2000 ಲೀಟರ್


ಸಭಾಧ್ಯಕ್ಷರು, ವಿಪಕ್ಷ ನಾಯಕ ಹಾಗೂ ಸಚೇತಕರಿಗೂ ಭತ್ಯೆ ಹೆಚ್ಚಳ:


ಸಭಾಧ್ಯಕ್ಷರು/ ಉಪಸಭಾಧ್ಯಕ್ಷರಿಗೆ:


ಸಂಬಳ: 50 ಸಾವಿರದಿಂದ 75 ಸಾವಿರ ರೂ.


ಆತಿಥ್ಯ ವೇತನ ವಾರ್ಷಿಕ: 3 ಲಕ್ಷದಿಂದ 4 ಲಕ್ಷ ರೂ.


ಮನೆ ಬಾಡಿಗೆ: 80 ಸಾವಿರದಿಂದ 1.60 ಲಕ್ಷ ರೂ.


ಇಂಧನ: 1000 ಲೀಟರ್ ನಿಂದ 2000 ಲೀಟರ್


ಪ್ರಯಾಣ ಭತ್ಯೆ: ಪ್ರತಿ ಕಿಲೋಮೀಟರ್ 30ರಿಂದ 40 ರೂ.


ದಿನ ಭತ್ಯೆ (ಪ್ರಯಾಣ): ದಿನಕ್ಕೆ 2 ಸಾವಿರದಿಂದ 3 ಸಾವಿರ ರೂ.


ಹೊರ ರಾಜ್ಯ ಪ್ರವಾಸ: ದಿನಕ್ಕೆ 2,500 ರೂ. +5 ಸಾವಿರದಿಂದ 3 ಸಾವಿರ +7 ಸಾವಿರ ರೂ.


ವಿಪಕ್ಷ ನಾಯಕರಿಗೆ:


ಸಂಬಳ: 40 ಸಾವಿರದಿಂದ 60 ಸಾವಿರ ರೂ.


ಆತಿಥ್ಯ ವೇತನ ವಾರ್ಷಿಕ: 2 ಲಕ್ಷದಿಂದ 2.50 ಲಕ್ಷ ರೂ.


ಇಂಧನ: 1000 ಲೀಟರ್ ನಿಂದ 2000 ಲೀಟರ್


ಪ್ರಯಾಣ ಭತ್ಯೆ: ಪ್ರತಿ ಕಿಲೋಮೀಟರ್ 30 ರೂ.


ದಿನ ಭತ್ಯೆ(ಪ್ರಯಾಣ): ದಿನಕ್ಕೆ 2 ಸಾವಿರದಿಂದ 3 ಸಾವಿರ ರೂ.


ಹೊರ ರಾಜ್ಯ ಪ್ರವಾಸ: 5 ಸಾವಿರದಿಂದ 7 ಸಾವಿರ ರೂ.


ಶಾಸಕರ ಭತ್ಯೆ:


ಸಂಬಳ: 20 ಸಾವಿರದಿಂದ 40 ಸಾವಿರ ರೂ.


ಕ್ಷೇತ್ರದ ಭತ್ಯೆ: 40 ಸಾವಿರದಿಂದ 60 ಸಾವಿರ ರೂ.


ಆತಿಥ್ಯ ವೇತನ (ವಾರ್ಷಿಕ): 2 ಲಕ್ಷದಿಂದ 2.50 ಲಕ್ಷ ರೂ.


ಇಂಧನ: 1000 ಲೀಟರ್ ನಿಂದ 2000 ಲೀಟರ್


ಪ್ರಯಾಣ ಭತ್ಯೆ: ಪ್ರತಿ ಕಿಲೋಮೀಟರ್ 25ರಿಂದ 30 ರೂ.


ದಿನ ಭತ್ಯೆ(ಪ್ರಯಾಣ): ದಿನಕ್ಕೆ 2 ಸಾವಿರದಿಂದ 2,500 ರೂ.


ಹೊರ ರಾಜ್ಯ ಪ್ರವಾಸ: 5 ಸಾವಿರದಿಂದ 7 ಸಾವಿರ ರೂ.


ದೂರವಾಣಿ ವೆಚ್ಚ ಯತಾಸ್ಥಿತಿ ತಿಂಗಳಿಗೆ 20 ಸಾವಿರ ರೂ.ವನ್ನು ಕಾಯ್ದಿರಿಸಲಾಗಿದೆ. ಆಪ್ತಸಹಾಯಕನಿಗೆ ಮತ್ತು ರೂಮ್ ಬಾಯ್ ಸೇರಿ ತಿಂಗಳಿಗೆ 10 ಸಾವಿರದಿಂದ 20 ಸಾವಿರ ರೂ. ಹೆಚ್ಚಳ ಮಾಡಲಾಗಿದೆ.


ಇದನ್ನೂ ಓದಿ: ಶಿವಮೊಗ್ಗ ಗಲಭೆ ಸರ್ಕಾರಿ ಪ್ರಾಯೋಜಿತ, ನ್ಯಾಯಾಂಗ ತನಿಖೆಗೆ ಆಗ್ರಹ: ವಿಪಕ್ಷ ನಾಯಕ ಸಿದ್ದರಾಮಯ್ಯ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.