Culture: ‘ಸಮಷ್ಟಿ’ಯಿಂದ ರಂಗಶಂಕರದಲ್ಲಿ ‘ಮಿಸ್. ಸದಾರಮೆ’ ನಾಟಕದ 50ನೇ ಪ್ರಯೋಗ
‘ಮಿಸ್. ಸದಾರಮೆ’ ನಾಟಕವು ರಂಗಭೂಮಿಯ ಮಹಾನ್ ನಾಟಕ ರಚನೆಕಾರ ಬೆಳ್ಳಾವೆ ನರಹರಿ ಶಾಸ್ತ್ರಿ ವಿರಚಿತ ಮೂಲ ನಾಟಕ ‘ಸದಾರಮಾ ನಾಟಕಂ’ನ ಪರಿಷ್ಕೃತಿ ಆವೃತ್ತಿ.
ಬೆಂಗಳೂರು: ‘ಮಿಸ್. ಸದಾರಮೆ’ ನಾಟಕ(Miss. Sadaarame Play)ವು ರಂಗಭೂಮಿಯ ಮಹಾನ್ ನಾಟಕ ರಚನೆಕಾರ ಬೆಳ್ಳಾವೆ ನರಹರಿ ಶಾಸ್ತ್ರಿ ವಿರಚಿತ ಮೂಲ ನಾಟಕ ‘ಸದಾರಮಾ ನಾಟಕಂ’ನ ಪರಿಷ್ಕೃತಿ ಆವೃತ್ತಿ. ಬೆಂಗಳೂರಿನ ಸಮಷ್ಠಿ ರಂಗತಂಡದಿಂದ ಇದೇ ಮಾರ್ಚ್ 12 ರಂದು ರಂಗಶಂಕರ(RangaShankara)ದಲ್ಲಿ ಈ ನಾಟಕದ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ರಂಗನಟ, ನಿರ್ದೇಶಕ ಮತ್ತು ರಂಗಭೂಮಿ ಶಿಕ್ಷಕ ಮಂಜುನಾಥ್ ಎಲ್. ಬಡಿಗೇರ್(Manjunath L Badiger) ನಿರ್ದೇಶನದಲ್ಲಿ 49 ಮತ್ತು 50ನೇ ಪ್ರಯೋಗಗಳು ಶನಿವಾರ ಮಧ್ಯಾಹ್ನ 3.30 ಮತ್ತು ಸಂಜೆ 7.30ಕ್ಕೆ ಪ್ರದರ್ಶನಗೊಳ್ಳಲಿವೆ. ಈ ನಾಟಕ ವೀಕ್ಷಿಸಲು ರಂಗಾಸಕ್ತರಿಗೆ ಸುವರ್ಣಾವಕಾಶವಿರುತ್ತದೆ.
‘ಮಿಸ್. ಸದಾರಮೆ’ ನಾಟಕದ ಕುರಿತು
ಸಂಚಲನ ಮೈಸೂರು ರಂಗತಂಡದಿಂದ ಮಾರ್ಚ್ 11ಕ್ಕೆ ‘ಹಯವದನ’ ನಾಟಕ ಪ್ರದರ್ಶನ
ವರ್ತಕ ಬಂಗಾರ ಸೆಟ್ಟಿಯ ಮಗಳಾದ ಸದಾರಮೆ(Sadaarame)ಯಿಂದ ಆಕರ್ಷಿತನಾದ ರಾಜಕುಮಾರ, ರಾಜ್ಯ-ಕೋಶಾದಿಗಳನ್ನು ಬಿಟ್ಟು ಮದುವೆಯಾಗಿ ಅವಳೊಂದಿಗೆ ದೇಶಾಂತರ ಹೊರಟು ಹೋಗುತ್ತಾನೆ. ವಿಧಿಯ ವೈಪರೀತ್ಯದಿಂದ ಗಂಡ-ಹೆಂಡತಿಯರು ಒಬ್ಬರಿಂದೊಬ್ಬರು ಅಗಲಿ, ಮುಗ್ದೆಯಾದ ಸದಾರಮೆ ಹಲವಾರು ಕಷ್ಟ-ಕಾರ್ಪಣ್ಯಗಳಿಗೆ ಸಿಲುಕಿಕೊಳ್ಳುತ್ತಾಳೆ. ಇವನ್ನೆಲ್ಲಾ ಯಶಸ್ವಿಯಾಗಿ ಎದುರಿಸಿ ಕೊನೆಗೆ ಅವರು ಮತ್ತೆ ಒಂದಾಗುತ್ತಾರೆ. ಈ ಇಡೀ ನಾಟಕವು ಹಾಸ್ಯ ಸನ್ನಿವೇಶಗಳಿಂದ ಕೂಡಿದ್ದು, ಕಂಪನಿ ನಾಟಕ ಶೈಲಿಯ ಹಾಡುಗಳಿಂದ ವೈಭವೀಕರಿಸಲ್ಪಟ್ಟಿದೆ. ನಿರ್ದೇಶಕರು ನಾಟಕದ ಮೂಲ ಕಥೆಗೆ ಹೊಸ ವ್ಯಾಖ್ಯಾನ ನಿಡುವ ಪ್ರಯತ್ನ ಮಾಡಿದ್ದಾರೆ.
ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ ಧಾರವಾಡ ಯುವಕನಿಗೆ ಅಭಿನಂದನೆಗಳ ಮಹಾಪೂರ
ನಾಟಕ: ಮಿಸ್. ಸದಾರಮೆ
ತಂಡ: ಬೆಂಗಳೂರಿನ ಸಮಷ್ಟಿ ರಂಗತಂಡ
ನಿರ್ದೇಶನ: ಮಂಜುನಾಥ್ ಎಲ್. ಬಡಿಗೇರ್
ಪ್ರದರ್ಶನದ ದಿನಾಂಕ: ಮಾರ್ಚ್ 12
ಸ್ಥಳ: ರಂಗಶಂಕರ, ಜೆಪಿ ನಗರ, ಬೆಂಗಳೂರು
ಸಮಯ: ಮಧ್ಯಾಹ್ನ 3.30 ಮತ್ತು ಸಂಜೆ 7.30ಕ್ಕೆ
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 9845163380
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.