ವಿಜಯನಗರ: ಶ್ರೀಗಂಧದ ಮರಗಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಂಪಿ ಪ್ರವಾಸಿ ಪೊಲೀಸ್ ಠಾಣೆಯ ಪೊಲೀಸರಿಂದ  4 ಜನ ಆರೋಪಿಗಳನ್ನು ಬಂಸಲಾಗಿದೆ. 


COMMERCIAL BREAK
SCROLL TO CONTINUE READING

ಹೊಸಪೇಟೆಯ ಆಶ್ರಯ ಕಾಲೊನಿಯ ಗಾಳೆಪ್ಪ (20), ಗೌಳೇರಹಟ್ಟಿಯ ಕೆ.ಲೋಕೇಶ್ (20), ದೂಳ್ ಪೇಟೆಯ ಕೆ.ಲಕ್ಷ್ಮಣ (21), ಸಿರಸಿನಕಲ್ಲು ಪ್ರದೇಶದ ಹುಲುಗಪ್ಪ (26) ಬಂಧಿತ ಆರೋಪಿಗಳು.


ಇದನ್ನೂ ಓದಿ: ಕರ್ನಾಟಕ ಸಂಭ್ರಮ-50 ಜ್ಯೋತಿ ರಥಯಾತ್ರೆಗೆ ಕಲಬುರಗಿ ನಗರದಲ್ಲಿ ಅದ್ದೂರಿ ಸ್ವಾಗತ 


ಆರೋಪಿತರಿಂದ 60 ಸಾವಿರ ರೂ. ನಗದು, 3 ಲಕ್ಷ ಮೌಲ್ಯದ ಬೊಲೆರೊ ಜೀಪ್ ವಶಕ್ಕೆ  ಪಡೆಯಲಾಗಿದೆ. 62 ಸಾವಿರ ಮೌಲ್ಯದ 2 ಬೈಕ್, 3 ಮೊಬೈಲ್, 5 ಸಾವಿರ ಬೆಲೆ ಬಾಳುವ 2 ಕೆ.ಜಿ.ಶ್ರೀಗಂಧದ ಮರದ ಕಟ್ಟಿಗೆ ತುಂಡನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.


ಕಳೆದ ನವೆಂಬರ್ 24 ರಂದು ಹಂಪಿಯ ಕಮಲ ಮಹಲ್ ಆವರಣದಲ್ಲಿನ ಶ್ರೀಗಂಧದ ಮರವನ್ನು ದುಷ್ಕರ್ಮಿಗಳು ಕತ್ತರಿಸಿ ಹೊತ್ತೊಯ್ದಿದ್ದರು. ಈ ಕುರಿತು ಹಂಪಿ ಪ್ರವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ಇದನ್ನೂ ಓದಿ: ಆತ್ಮಾಹುತಿ ದಾಳಿಗೆ ಸಂಚು : 8 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ ಶೀಟ್‌ ಸಲ್ಲಿಸಿದ ಎನ್ಐಎ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.