Sarkari Naukri 2021: 10ನೇ ತರಗತಿ ಪಾಸದವರಿಗೆ KSCCF ಯ ಈ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ಸ್ಟೇಟ್ ಕೋ ಆಪರೇಟಿವ್ ಕನ್ಸೂಮರ್ ಫೆಡರೇಶನ್ ಲಿಮಿಟೆಡ್ ಅಕೌಂಟೆಂಟ್, ಫಸ್ಟ್ ಡಿವಿಷನ್ ಅಸಿಸ್ಟೆಂಟ್ , ಸೇಲ್ಸ್ ಅಸಿಸ್ಟೆಂಟ್, ಟೈಪಿಸ್ಟ್, ಪಿಯೋನ್ ಮತ್ತು ಜೂನಿಯರ್ ಫಾರ್ಮಸಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಬೆಂಗಳೂರು : KSCCF Recruitment 2021: ಕರ್ನಾಟಕ ಸ್ಟೇಟ್ ಕೋ ಆಪರೇಟಿವ್ ಕನ್ಸೂಮರ್ ಫೆಡರೇಶನ್ ಲಿಮಿಟೆಡ್ (KSCCF) ಯಿಂದ ಅಕೌಂಟೆಂಟ್, ಫಸ್ಟ್ ಡಿವಿಷನ್ ಅಸಿಸ್ಟೆಂಟ್ , ಸೇಲ್ಸ್ ಅಸಿಸ್ಟೆಂಟ್, ಟೈಪಿಸ್ಟ್, ಪಿಯೋನ್ ಮತ್ತು ಜೂನಿಯರ್ ಫಾರ್ಮಸಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಇನ್ನೂ ಅರ್ಜಿ ಸಲ್ಲಿಸದ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೆಎಸ್‌ಸಿಸಿಎಫ್‌ನ ಅಧಿಕೃತ ವೆಬ್‌ಸೈಟ್‌ಗೆ (KSCCF website) ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ಇದಲ್ಲದೆ, ಅಭ್ಯರ್ಥಿಗಳು ಈ ಲಿಂಕ್ http://recruitapp.in/ksccf2021/ ಅನ್ನು ಕ್ಲಿಕ್ ಮಾಡುವುದರ ಮೂಲಕ ನೇರವಾಗಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅಲ್ಲದೆ, ಈ ಲಿಂಕ್ ಮೂಲಕ http://recruitapp.in/ksccf2021/Notification.pdf, ಅಧಿಕೃತ ಅಧಿಸೂಚನೆಯನ್ನು (Notification) ಸಹ ನೋಡಬಹುದು. ಈ ನೇಮಕಾತಿ ಪ್ರಕ್ರಿಯೆಯಡಿ ಒಟ್ಟು 45 ಹುದ್ದೆಗಳನ್ನು ಭರ್ತಿ ಮಾಡಲಾಗುವುದು.
ಇದನ್ನೂ ಓದಿ : HD Deve Gowda: ದೇವೇಗೌಡರ ಆರೋಗ್ಯದಲ್ಲಿ ಚೇತರಿಕೆ: ಆಸ್ಪತ್ರೆಯಿಂದ ಬಿಡುಗಡೆ!
ಕೆಎಸ್‌ಸಿಸಿಎಫ್ ನೇಮಕಾತಿ 2021 ರ ಪ್ರಮುಖ ದಿನಾಂಕಗಳು :
ಆನ್‌ಲೈನ್ (Online) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 5 ಏಪ್ರಿಲ್ 2021
ಕೆಎಸ್‌ಸಿಸಿಎಫ್ ನೇಮಕಾತಿ 2021 ರ ಹುದ್ದೆಯ ವಿವರಗಳು :
ಅಕೌಂಟೆಂಟ್ - 5 ಹುದ್ದೆಗಳು
ಫಸ್ಟ್ ಡಿವಿಷನ್ ಅಸಿಸ್ಟೆಂಟ್ - 10 ಹುದ್ದೆಗಳು
ಸೇಲ್ಸ್ ಅಸಿಸ್ಟೆಂಟ್- 10 ಹುದ್ದೆಗಳು
ಬೆರಳಚ್ಚುಗಾರ - 8 ಪೋಸ್ಟ್‌ಗಳು
ಪಿಯೋನ್ - 10 ಪೋಸ್ಟ್‌ಗಳು
ಜೂನಿಯರ್ ಫಾರ್ಮಸಿಸ್ಟ್ - 2 ಹುದ್ದೆಗಳು
ಇದನ್ನೂ ಓದಿ : Basavaraj Bommai: 'ಮೀಸಲಾತಿ ಹೆಚ್ಚಿಸಲು 'ಸುಪ್ರೀಂ ಕೋರ್ಟ್' ನಲ್ಲಿ ಅಫಿಡವಿಟ್ ಸಲ್ಲಿಸಲಾಗಿದೆ'
ಕೆಎಸ್‌ಸಿಸಿಎಫ್ ನೇಮಕಾತಿ 2021 ಗೆ ಅರ್ಹತಾ ಮಾನದಂಡ :
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ SSLC/ PUC / ಪದವಿ / ಡಿಪ್ಲೊಮಾ ಹೊಂದಿರಬೇಕು. ಅಭ್ಯರ್ಥಿಗಳ ವಯಸ್ಸು 18 ರಿಂದ 35 ವರ್ಷದೊಳಗಿರಬೇಕು.
ಕೆಎಸ್‌ಸಿಸಿಎಫ್ ನೇಮಕಾತಿ 2021 ರ ಆಯ್ಕೆ ಮಾನದಂಡ :
ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ವೇತನ ವಿವರ :
ಅಕೌಂಟೆಂಟ್ - ರೂ .19000-34500 /
ಫಸ್ಟ್ ಡಿವಿಷನ್ ಅಸಿಸ್ಟೆಂಟ್ - ರೂ .13600-26000 /
ಸೇಲ್ಸ್ ಅಸಿಸ್ಟೆಂಟ್, ಬೆರಳಚ್ಚುಗಾರ - ರೂ .12500-24000 /
ಪಿಯೋನ್ - ರೂ .10400-16400 /
ಜೂನಿಯರ್ ಫಾರ್ಮಸಿಸ್ಟ್ - ರೂ .14550-26700 /
ಇದನ್ನೂ ಓದಿ : Corona Second Wave: ರಾಜ್ಯ ರಾಜಧಾನಿಯಲ್ಲಿ 6ರಿಂದ 9ರವರೆಗಿನ ತರಗತಿಗಳು ಸ್ಥಗಿತ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.