ಬೆಂಗಳೂರು:  ಬಾಗೇಪಲ್ಲಿ- ಹಲಸೂರು ಹೆದ್ದಾರಿ ಅಗಲೀಕರಣಕ್ಕಾಗಿ ಕುದೂರು ಗ್ರಾಮದಲ್ಲಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರು ಬೆಳೆಸಿದ ಮರಗಳನ್ನು ಕಡಿಯದಂತೆ ಸಂರಕ್ಷಿಸಿ, ಪರ್ಯಾಯ ಮಾರ್ಗ ಮಾಡುವಂತೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಮುಖ್ಯಮಂತ್ರಿ ಅವರಿಗೆ ಪತ್ರ ಬರೆಯುವ ಜೊತೆಗೆ ಸಾಲಮರದ ತಿಮ್ಮಕ್ಕ ಅವರೊಂದಿಗೆ ತೆರಳಿ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ನೀಡಿದರು.   



COMMERCIAL BREAK
SCROLL TO CONTINUE READING

ಸೋಮವಾರ ಸದಾಶಿವನಗರ ಕಚೇರಿಗೆ ಆಗಮಿಸಿದ ಸಾಲಮರದ ತಿಮ್ಮಕ್ಕ ಅವರು ಮರಗಳನ್ನು ಕಡಿಯದಂತೆ ಪರಮೇಶ್ವರ ಅವರಿಗೆ ಮನವಿ ಪತ್ರ ನೀಡಿದರು. ಇದಕ್ಕೆ ಸ್ಪಂದಿಸಿದ ಪರಮೇಶ್ವರ ಅವರು ತಿಮ್ಮಕ್ಕ ಅವರನ್ನು ಮುಖ್ಯಮಂತ್ರಿ ಅವರ ಕಚೇರಿಗೆ ಕರೆದೊಯ್ದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.


ಸಾಲುಮರದ ತಿಮ್ಮಕ್ಕ ಅವರು ಯಾವುದೇ ಪ್ರತಿಫಲಾಕ್ಷೆ ಇಲ್ಲದೆ ಮರಗಳನ್ನು ಬೆಳೆಸಿ ಪ್ರಕೃತಿ ರಕ್ಷಿಸಿರುತ್ತಿದ್ದಾರೆ. ಅವರ ಮರಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ. ರಸ್ತೆ ಅಗಲೀಕರಣದ ಹೆಸರಿನಲ್ಲಿ ಮರಗಳನ್ನು ಕಡಿಯದಂತ ನೋಡಿಕೊಂಡು ಪರ್ಯಾಯ ಮಾರ್ಗ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.