ನವ ದೆಹಲಿ: ದೇಶದ ತಂಬಾಕು ಉದ್ಯಮಕ್ಕೆ 11 ಶತಕೋಟಿ ಡಾಲರ್ ಗಳ ಹಿನ್ನೆಡೆ ಉಂಟಾಗಿದ್ದು,  ತಂಬಾಕು ಪ್ಯಾಕೇಜುಗಳ ಮೇಲೆ ಹೆಚ್ಚಿನ ಆರೋಗ್ಯ ಎಚ್ಚರಿಕೆ ನೀಡುವಂತೆ ಕೇಂದ್ರ ಸರ್ಕಾರ ನೀಡಿದ ಆದೇಶವನ್ನು ವಜಾಮಾಡುವಂತೆ ಕೆಳ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. 


COMMERCIAL BREAK
SCROLL TO CONTINUE READING

ಕಳೆದ ತಿಂಗಳು ಕರ್ನಾಟಕ ರಾಜ್ಯ ಹೈಕೋರ್ಟ್ ಕೇಂದ್ರ ಸರ್ಕಾರದ ನಿಯಮಗಳನ್ನು ತಿದ್ದುಪಡಿ ಮಾಡಿ ಈ ಹಿಂದೆ ತಂಬಾಕಿನ ಪ್ಯಾಕ್ ಮೇಲೆ ವಿಧಿಸಲಾಗಿದ್ದ ಶೇ.20 ಭಾಗ ಆರೋಗ್ಯ ಎಚ್ಚರಿಕೆಯನ್ನು ಶೇಕಡಾ 85 ಭಾಗಕ್ಕೆ ಹೆಚ್ಚಿಸಿತ್ತು. ಈ ನಿಯಮ 2016ರಿಂದ ಜಾರಿಗೆ ಬಂದಿತ್ತು.


ಈ ಹಿನ್ನೆಲೆಯಲ್ಲಿ ತಂಬಾಕು ನಿಯಂತ್ರಣ ಕಾರ್ಯಕರ್ತರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕರ್ನಾಟಕ ಹೈಕೋರ್ಟ್ ಆದೇಶವನ್ನು ಸೋಮವಾರ ಹಾಗೆಯೇ ಉಳಿಸಿಕೊಂಡಿದ್ದು,  ಸಾರ್ವಜನಿಕರ ಆರೋಗ್ಯ ರಕ್ಷಣೆಯ ಅಗತ್ಯವಿದೆ ಎಂದು ಹೇಳಿದೆ. 


"ಪ್ರಜೆಯ ಆರೋಗ್ಯವು ಪ್ರಾಮುಖ್ಯತೆ ಹೊಂದಿದೆ. ಅವನು ಅಥವಾ ಅವಳು ಆರೋಗ್ಯದ ಪರಿಸ್ಥಿತಿಯನ್ನು ಹಾನಿಯುಂಟುಮಾಡುವ ಅಥವಾ ಕೆಡಿಸುವಂತಹವುಗಳ ಬಗ್ಗೆ ತಿಳಿದಿರಬೇಕು" ಎಂದು ಸುಪ್ರೀಂ ಕೋರ್ಟ್ ತನ್ನ 13-ಪುಟದ ಆದೇಶದಲ್ಲಿ ತಿಳಿಸಿದೆ.


ದೊಡ್ಡ ಆರೋಗ್ಯ ಎಚ್ಚರಿಕೆಗಳು ತಂಬಾಕು ಸೇವನೆಯನ್ನು ತಡೆಗಟ್ಟುತ್ತವೆ ಎಂದು ಆರೋಗ್ಯ ವಕೀಲರು ಮತ್ತು ಕೇಂದ್ರೀಯ ಆರೋಗ್ಯ ಸಚಿವಾಲಯ ಹೇಳಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ನಿರ್ಧಾರ ಕೈಗೊಂಡಿದೆ. ತಂಬಾಕು-ಸಂಬಂಧಿತ ರೋಗಗಳ ಕಾರಣದಿಂದಾಗಿ ಭಾರತದಲ್ಲಿ ಪ್ರತಿ ವರ್ಷವೂ 900,000 ಕ್ಕಿಂತ ಹೆಚ್ಚು ಜನ ಸಾವನ್ನಪ್ಪುತ್ತಿದ್ದಾರೆ ಎಂದು ಸರ್ಕಾರದ ಸಮೀಕ್ಷೆಯೊಂದು ಹೇಳಿದೆ. 


ಭಾರತದ ತಂಬಾಕು ಪ್ಯಾಕೇಜಿಂಗ್ ನಿಯಮಗಳು ವಿಶ್ವದಲ್ಲೇ ಅತ್ಯಂತ ಕಠಿಣವಾದವು. ಕಳೆದ ವರ್ಷ ಸರ್ಕಾರಿ ಸಮೀಕ್ಷೆ ಕಂಡುಕೊಂಡ ಪ್ರಕಾರ 62% ರಷ್ಟು ಧೂಮಪಾನಿಗಳು ಪ್ಯಾಕೆಟ್ಗಳಲ್ಲಿ ಇಂತಹ ಎಚ್ಚರಿಕೆ ಲೇಬಲ್ಗಳ ಕಾರಣದಿಂದ ಸಿಗರೀತ್ ಸೇವನೆಯಿಂದ ಹೊರಗುಳಿಯುವ ಬಗ್ಗೆ ಯೋಚಿಸಿದ್ದಾರೆ.


ಭಾರತದ ಐಟಿಸಿ ಲಿಮಿಟೆಡ್ ಮತ್ತು ಫಿಲಿಪ್ ಮೋರಿಸ್ ಇಂಟರ್ನ್ಯಾಷನಲ್ ಇಂಕ್ ಇಂಡಿಯಾ ಪಾಲುದಾರ, ಗಾಡ್ಫ್ರೇ ಫಿಲಿಪ್ಸ್ ಇಂಡಿಯಾ ಲಿಮಿಟೆಡ್ನಂತಹ ಸಿಗರೇಟ್ ತಯಾರಕರಿಗೆ ನ್ಯಾಯಾಲಯದ ತೀರ್ಮಾನವು ತೀವ್ರತರ ಪರಿಣಾಮ ಬೀರಲಿದೆ. ಆರೋಗ್ಯ ಎಚ್ಚರಿಕೆ ಕ್ರಮಗಳಿಗೆ ಸಂಬಂಧಿಸಿದಂತೆ ನಡೆದ ಪ್ರತಿಭಟನೆಯಲ್ಲಿ, 2016ರಲ್ಲಿ ಉದ್ಯಮವು ದೇಶದಾದ್ಯಂತ ತನ್ನ ಕಾರ್ಖಾನೆಗಳನ್ನು ಮುಚ್ಚಿದೆ ಮತ್ತು ಹಲವಾರು ಕಾನೂನು ಪ್ರಕರಣಗಳನ್ನು ಸಲ್ಲಿಸಿದೆ.


ಸೋಮವಾರ, ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಮತ್ತು ತಂಬಾಕು ಉದ್ಯಮದ ಅಧಿಕಾರಿಗಳು 40 ನಿಮಿಷಗಳ ಕಾಲ ನಡೆದ ವಿಚಾರಣೆಗಳನ್ನು ಕೇಳಲು ಕೋರ್ಟ್ನಲ್ಲಿ ಹಾಜರಾಗಿದ್ದರು. ಮೂರು ನ್ಯಾಯಾಧೀಶರು ಸಿಗರೇಟ್ ಪ್ಯಾಕ್ಗಳಲ್ಲಿ ಬಳಸಿದ ಆರೋಗ್ಯ ಎಚ್ಚರಿಕೆ ಚಿತ್ರಗಳ ಉದಾಹರಣೆಗಳನ್ನು ವೀಕ್ಷಿಸಿದರು.


ಅರ್ಜಿದಾರರ ಪರ ವಾದಿಸಿದ ವಕೀಲ ಕಪಿಲ್ ಸಿಬಲ್, ತಂಬಾಕು ಪ್ಯಾಕ್ ಎಚ್ಚರಿಕೆಗಳ ಗಾತ್ರವನ್ನು ಕಡಿಮೆ ಮಾಡಲು ನ್ಯಾಯಾಲಯವನ್ನು ಒತ್ತಾಯಿಸಿದರು. ಒಂದು ಹಂತದಲ್ಲಿ, ತಂಬಾಕು ಉತ್ಪನ್ನಗಳ ಮೇಲೆ ವಿಧಿಸಿರುವ ಆರೋಗ್ಯ ಕ್ರಮಗಳ ಬಗ್ಗೆ ವಾದಿಸುತ್ತಿರುವಾಗ ವಿಸ್ಕಿ ಬಾಟಲಿಗಳ ಮೇಲೆ ಯಾವುದೇ ಆರೋಗ್ಯ ಎಚ್ಚರಿಕೆಗಳು ಇಲ್ಲದಿರುವುದನ್ನು ಅವರು ಉಲ್ಲೇಖಿಸಿದರು. 


ಭಾರತದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ಸರ್ಕಾರದ ಕಠಿಣ ನಿಯಮಗಳನ್ನು ಸಮರ್ಥಿಸಿಕೊಂಡರು. ಜನರ ಆರೋಗ್ಯವನ್ನು ರಕ್ಷಿಸಲು "ಹೆಚ್ಚು ಪ್ರಗತಿಪರ" ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.


ಈ ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 12ರಂದು ನಡೆಯಲಿದೆ.