ಬೆಳಗಾವಿ: ಇಲ್ಲಿನ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ  ಎಸ್ ಸಿ, ಎಸ್ ಟಿ ಮೀಸಲಾತಿ ವಿಧೇಯಕಯನ್ನು ಅಂಗೀಕರಿಸಿದೆ.ರಾಜ್ಯ ಸರ್ಕಾರ ಪ್ರಸ್ತಾಪಿಸಿದ ವಿಧೇಯಕಕ್ಕೆ ಸದನವು ಸಂಪೂರ್ಣ ಬೆಂಬಲ ನೀಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ :ಕೊರೊನಾ ಬಗ್ಗೆ ಗಾಬರಿಯಾಗಬೇಕಾಗಿಲ್ಲ-ಸಿಎಂ ಬೊಮ್ಮಾಯಿ


ಈ ವಿಧೇಯಕವು ಪ್ರಮುಖವಾಗಿ ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು  ಸರ್ಕಾರ ನೇಮಕಾತಿ, ಹುದ್ದೆಗಳ‌ ಮೀಸಲಾತಿಯನ್ನು ನೀಡುತ್ತದೆ.ರಾಜ್ಯ ಸರ್ಕಾರ ಮಂಡಿಸಿದ ಈ ವಿಧೇಯಕಕ್ಕೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಪ್ರತಿಕ್ರಿಯಿಸಿ ಈ ಬಿಲ್ ಗೆ ನಮ್ಮದು ಮನಃಪೂರ್ವಕ ಬೆಂಬಲ ಇದೆ ಎಂದು ಘೋಷಿಸಿದರು.


ಇದನ್ನೂ ಓದಿ :ಜನವರಿ 12 ರಂದು ಅವಳಿ ನಗರದಲ್ಲಿ ಪ್ರಧಾನ ಮಂತ್ರಿ ಮೋದಿಯಿಂದ ಯುವಜನೋತ್ಸವ ಉದ್ಘಾಟನೆ


ಸದನದಲ್ಲಿ  ನಿಯಮ ೬೯ರ ಅಡಿಯಲ್ಲಿ ಮುಂದುವರೆದ ಎಸ್‌ಸಿ, ಎಸ್‌ಟಿ ಮೀಸಲಾತಿ ಮೇಲಿನ ಚರ್ಚೆ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಚುನಾವಣೆಗಾಗಿ ಕಣ್ಣೊರೆಸುವ ತಂತ್ರ ಆಗಬಾರದು, ಮೀಸಲಾತಿ ಜನಸಂಖ್ಯೆಗೆ ಅನುಗುಣವಾಗಿ ಸಿಗಬೇಕು, ಮೀಸಲಾತಿ ಮಸೂದೆಗೆ ನಮ್ಮ ಸಂಪೂರ್ಣ ಬೆಂಬಲ ಇದೆ.ಆದರೆ ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಬೇಕು ಇಲ್ಲದಿದ್ರೆ ಮೀಸಲಾತಿ ಊರ್ಜಿತ ಆಗುವುದಿಲ್ಲ, ಈ ಅಧಿವೇಶನದ ಸಂದರ್ಭದಲ್ಲೇ ಮಾಡಿಸಿ ಎಂದು ಅವರು ಸರ್ಕಾರಕ್ಕೆ ಆಗ್ರಹಿಸಿದರು. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.