ಆಶ್ರಯ ಮನೆಗಳ ಹಂಚಿಕೆಯಲ್ಲಿ ತಾರತಮ್ಯ; ಬಡವರಿಗೆ ಸೇರಬೇಕಿದ್ದ ಮನೆಗಳು ಶಾಸಕರ ಬೆಂಬಲಿಗರ ಪಾಲು?
ಗದಗ-ಬೆಟಗೇರಿ ನಗರಸಭೆ ಆಧ್ಯಕ್ಷೆ ಮತ್ತು ಸದಸ್ಯರ ಗಮನಕ್ಕೆ ತರದೆ ಮನೆಗಳನ್ನು ಹಂಚಿಕೆ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಗದಗ: ಪ್ರತಿಯೊಬ್ಬರಿಗೂ ಒಂದು ಸೂರು ಇರಬೇಕು. ಸುಂದರವಾದ ಕುಟುಂಬಕ್ಕೆ ಚೆಂದದೊಂದು ಮನೆ ಕಟ್ಗೊಬೇಕು ಅನ್ನೋದು ಎಲ್ಲರ ಕನಸು. ಆ ಕನಸು ಈಡೇರಿಸಲು ಸರ್ಕಾರದ ಕೆಲವು ಯೋಜನೆಗಳು ಸಹಕಾರಿಯಾಗಿವೆ. ಹಾಗೆ ಕೆಲವು ಸಾರಿ ಬಡವರ ಹೆಸರಲ್ಲಿರೋ ಸರ್ಕಾರದ ಯೋಜನೆಗಳು ರಾಜಕೀಯ ಲಾಭ ಪಡೆದು ಉಳ್ಳವರ ಪಾಲಾಗುತ್ತವೆ. ಇಂತಹದ್ದೇ ಒಂದು ಆರೋಪ ಗದಗನಲ್ಲಿ ಇದೀಗ ಕೇಳಿಬಂದಿದೆ
ಅಂದಹಾಗೆ ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ಗಂಗಿಮಡಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುಮೋದಿತ ‘ಪ್ರಧಾನಮಂತ್ರಿ ಆವಾಸ್ ಯೋಜನೆ’ಯಡಿ (PMAY) 3630 (G+1) AHP ಗುಂಪು ಮನೆಗಳನ್ನು ನಿರ್ಮಿಸಲು 2018ರಲ್ಲಿಯೇ ನಗರಸಭೆ ಕಾರ್ಯಾದೇಶ ನೀಡಿದೆ. ಇದರಲ್ಲಿ 1ನೇ ಹಂತದ 1008 ಮನೆಗಳ ಪೈಕಿ 256 ಮನೆಗಳು ಪೂರ್ಣಗೊಂಡಿವೆ. ಆದರೆ, ಗುಂಪು ಮನೆಗಳಿಗೆ ಸಂಬಂಧಿಸಿದಂತೆ ಇನ್ನೂವರೆಗೂ ಯಾವ ಮನೆಗಳನ್ನು ಸಹಿತ ನಗರಸಭೆಗೆ ಹಸ್ತಾಂತರಿಸಿಕೊಂಡಿಲ್ಲವೆಂದು ಹೇಳಲಾಗ್ತಿದೆ. ಜೊತೆಗೆ ಪೂರ್ಣಗೊಂಡ ಮನೆಗಳಿಗೆ ಇನ್ನೂ ಜೀವನಾಂಶಕ್ಕೆ ಅವಶ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಲ್ಲ. ಆದರೆ ಗದಗ ವಿಧಾನಸಭೆ ಕ್ಷೇತ್ರದ ಶಾಸಕ ಹೆಚ್.ಕೆ.ಪಾಟೀಲ್ ತರಾತುರಿಯಲ್ಲಿ ಫಲಾನುಭವಿಗಳನ್ನು ಏಕಪಕ್ಷೀಯವಾಗಿ ಆಯ್ಕೆ ಮಾಡಿ ಮನೆಗಳ ಕೀ ಕೊಟ್ಟಿದ್ದಾರೆ. ಇದು ಈಗ ನಗರದಲ್ಲಿ ದೊಡ್ಡ ಕೋಲಾಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ತಮ್ಮ ಒಪ್ಪಿಗೆಯನ್ನು ಹಿಂತೆಗೆದುಕೊಂಡ ಲೇಖಕರ ಕೃತಿಗಳನ್ನು ಶಾಲಾ ಪಠ್ಯಪುಸ್ತಕಗಳಿಂದ ಕೈಬಿಡಲು ಸರ್ಕಾರ ನಿರ್ಧಾರ
ಯಾಕೆಂದರೆ ಗದಗ-ಬೆಟಗೇರಿ ನಗರಸಭೆ ಆಧ್ಯಕ್ಷೆಮತ್ತು ಸದಸ್ಯರ ಗಮನಕ್ಕೆ ತರದೆ, ಯಾವುದೇ ಸಭೆ ಮಾಡಿ ಫಲಾನುಭವಿಗಳನ್ನು ಆಯ್ಕೆ ಮಾಡದೇ ಮತ್ತು ಆಶ್ರಯ ಸಮಿತಿಯ ನೂತನ ಸದಸ್ಯರ ಗಮನಕ್ಕೂ ತರದೇ ಮನೆಗಳನ್ನು ಹಂಚಿಕೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಶಾಸಕರು ಕೇವಲ ತಮ್ಮ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ಮನೆ ಹಂಚಿಕೆ ಮಾಡಿ ಕೀ ಕೊಟ್ಟಿದ್ದಾರೆ. ನಿಜವಾದ ಬಡವರಿಗೆ ಮನೆ ಸಿಕ್ಕಿಲ್ಲ, ಹೀಗಾಗಿ ಇದರಲ್ಲಿ ಪಾರದರ್ಶಕತೆ ನಡೆದಿಲ್ಲವೆಂದು ನಗರದ ಜನರು ಆರೋಪಿಸಿದ್ದಾರೆ.
ಸುಮಾರು 7.83 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ SC, ST ವರ್ಗದ ಪ್ರತಿ ಫಲಾನುಭವಿಗೆ 3.30 ಲಕ್ಷ ರೂ. ಹಾಗೂ ಸಾಮಾನ್ಯ ವರ್ಗಕ್ಕೆ ಸೇರಿದ ಪ್ರತಿ ಫಲಾನುಭವಿಗೆ 2.70 ಲಕ್ಷ ರೂ. ಸಹಾಯಧನವನ್ನು ಒದಗಿಸಿದೆ. ಇನ್ನುಳಿದ ನಿರ್ಮಾಣದ ಬಾಕಿ ವೆಚ್ಚವನ್ನು ಫಲಾನುಭವಿಗಳು ವಂತಿಕೆ ರೂಪದಲ್ಲಿ ಸ್ವಂತ ಅಥವಾ ಬ್ಯಾಂಕ್ ಲೋನ್ ಮೂಲಕ ಭರಿಸಬೇಕೆಂಬ ಷರುತ್ತು ಇದೆ.
ಇದನ್ನೂ ಓದಿ: SM Krishna : ಮಾಜಿ ಸಿಎಂ ಎಸ್.ಎಂ.ಕೃಷ್ಣ ಆಸ್ಪತ್ರೆಗೆ ದಾಖಲು
ಆದರೆ ಶಾಸಕರು ಈ ಎಲ್ಲಾ ರೂಲ್ಸ್ ಗಳನ್ನು ಇಷ್ಟೆಲ್ಲಾ ಗೊತ್ತಿದ್ದರೂ ತ್ವರಿತಗತಿಯಲ್ಲಿ ಫಲಾನುಭವಿಗಳಿಗೆ ಮನೆ ಹಂಚಿಕೆ ಪತ್ರ ವಿತರಿಸಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇದಲ್ಲದೇ ರಾಜ್ಯ ಹಾಗೂ ಕೇಂದ್ರ ಸರ್ಕಾರ 3630 ಗುಂಪು ಮನೆಗಳ ನಿರ್ಮಾಣಕ್ಕೆ ನೀಡಿರುವ ಸುಮಾರು 243.98 ಕೋಟಿ ರೂ.ವನ್ನು ಸಹಾಯಧನವನ್ನು 256 ಮನೆಗಳಿಗೆ ವಿನಿಯೋಗಿಸಿದ್ದು, ಇನ್ನುಳಿದ ಮನೆಗಳ ನಿರ್ಮಾಣಕ್ಕೆ ಅನುದಾನವೇ ಇಲ್ಲದಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.