ಸಿಂಧನೂರು (ರಾಯಚೂರು): ಮೂಗಿಗೆ ನಿಂಬೆ ಹಣ್ಣಿನ ರಸ ಬಿಟ್ಟುಕೊಂಡರೆ ಯಾವುದೇ ಆಕ್ಸಿಜೆನ್ ಸಮಸ್ಯೆ ಬರಲ್ಲ ಮತ್ತು ಕೊರೊನಾ ಕೂಡ ನಿಯಂತ್ರಣಕ್ಕೆ ಬರುತ್ತೆ ಎನ್ನುವ ತಪ್ಪು ಕಲ್ಪನೆಗೆ ಒಳಗಾದ ಶಿಕ್ಷಕನೊಬ್ಬ ಈಗ ಆರೋಗ್ಯದಲ್ಲಿ ಏರುಪೇರಾಗಿ ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ - Pulse Oximeter: ಆಕ್ಸಿಮೀಟರ್ ಸಿಗುತ್ತಿಲ್ಲವೇ? ಚಿಂತಿಸಬೇಡಿ, ಇಲ್ಲಿದೆ ಅಗ್ಗದ ಆಯ್ಕೆ


ನಟರಾಜ ಕಾಲೋನಿಯ ನಿವಾಸಿಯಾಗಿದ್ದ  43 ವರ್ಷ ವಯಸ್ಸಿನ ಶಿಕ್ಷಕ ಬಸವರಾಜ್ ಅವರು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ನಿಂಬೆ ಹಣ್ಣಿನ ರಸವನ್ನು ಮೂಗಿಗೆ ಬಿಟ್ಟುಕೊಂಡ ನಂತರ ಎರಡು ಬಾರಿ ಅವರಿಗೆ ವಾಂತಿಯಾಗಿದೆ. ಅವರಿಗೆ ಯಾವುದೇ ರೀತಿಯ ಕಾಯಿಲೆ ಕೂಡ ಇರಲಿಲ್ಲ ಎಂದು ಹೇಳಲಾಗುತ್ತಿದೆ. ಆಸ್ಪತ್ರೆಗೆ ಸಾಗಿಸಿದರೂ ಕೂಡ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.


ಇದನ್ನೂ ಓದಿ - ಕರೋನಾ ಎರಡನೇ ಅಲೆಯಿಂದ ಬಚಾವಾಗಲು ಏನು ತಿನ್ನಬೇಕು ಏನು ತಿನ್ನಬಾರದು? ಏನು ಹೇಳುತ್ತೆ WHO


ಮೂಲತಃ ಅವರು ರಾಯಚೂರು ಜಿಲ್ಲೆಯ ಲಿಂಗಸೂರು ತಾಲ್ಲೂಕಿನ ರಾಮತ್ನಾಲ ಗ್ರಾಮದವರು ಎಂದು ತಿಳಿದು ಬಂದಿದೆ.2002 ರಲ್ಲಿ ಅವರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿದ್ದರು.ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ ಎಂದು ತಿಳಿದು ಬಂದಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.