ಧಾರವಾಡ: ವಿಶ್ವದ ಉನ್ನತ ವಿಜ್ಞಾನಿಗಳ ಕುರಿತು ಅಮೆರಿಕಾದ ಪ್ರತಿಷ್ಠಿತ ಸ್ಟಾನ್ಫೊರ್ಡ್ ವಿಶ್ವವಿದ್ಯಾನಿಲಯವು ಬಿಡುಗಡೆ ಮಾಡಿರುವ ವಿಶ್ವದ ಟಾಪ್ ವಿಜ್ಞಾನಿಗಳ ಪಟ್ಟಿಯಲ್ಲಿ ಧಾರವಾಡ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಯ ವಿಜ್ಞಾನಿಗಳಾದ ಡಾ. ಎಸ್. ಬಸವರಾಜಪ್ಪ ಮತ್ತು ಡಾ. ಅಮರನಾಥ ಹೆಗಡೆ ಅವರು ಸ್ಥಾನ ಪಡೆದಿದ್ದಾರೆ. ಅವರ ಮೌಲ್ಯಿಕ ಸಂಶೋಧನೆಗಳ ಸಾಧನೆಯಿಂದ ಧಾರವಾಡ ಐಐಟಿ ಗೆ ಕೀರ್ತಿ ಬಂದಿದ್ದು, ಅವರನ್ನು ಧಾರವಾಡ ಐಐಟಿ ಯ ಎಲ್ಲ ಸಿಬ್ಬಂದಿ ಅಭಿನಂದಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: IND vs PAK ಪಂದ್ಯಕ್ಕೆ ಶುಭ್ಮನ್ ಗಿಲ್ 99% ಫಿಟ್! ರೋಹಿತ್ ಶರ್ಮಾ ಕೊಟ್ಟೇಬಿಟ್ರು ಗ್ರೀನ್ ಸಿಗ್ನಲ್


ಸ್ಟಾನ್ಫೊರ್ಡ್ ವಿಶ್ವವಿದ್ಯಾನಿಲಯ ಮತ್ತು ಎಲ್ಸೆವಿಯ ಪಬ್ಲಿಕೇಶನ್‍ನ ಸಹಯೋಗದೊಂದಿಗೆ ವಿಶ್ವದ ಅಗ್ರ ಶೇ.2 ರಷ್ಟು ವಿಜ್ಞಾನಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ಶ್ರೇಯಾಂಕಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಸಂಶೋಧನೆ, ಸಂಶೋಧನಾ ವರದಿ, ಸಂಶೋಧನಾ ಉಲ್ಲೇಖಗಳು, ಲೇಖನಗಳನ್ನು ಒಳಗೊಂಡ ಎಚ್-ಇಂಡೆಕ್ಸ್, ಐ-ಟೆನ್ ಇಂಡೆಕ್ಸ್ ಸೇರಿದಂತೆ ವಿವಿಧ ಮಾನದಂಡಗಳನ್ನು ಪರಿಗಣಿಸಿ ಮತ್ತು ಇತರ ಸಂಯೋಜಿತ ಗ್ರಂಥಮಾಪಕ ಅ0ಕಿ-ಸ0ಖ್ಯೆ ಮಾಹಿತಿಯನ್ನು ಆಧರಿಸಿ ಸಿದ್ಧಪಡಿಸಲಾಗಿದೆ. ಇಂತಹ ಅಗ್ರಗಣ್ಯ ವಿಜ್ಞಾನಿಗಳ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡುವ ಪರಿಪಾಠ 2018 ರಿಂದ ಪ್ರಾರಂಭವಾಗಿದೆ.


ಇದನ್ನೂ ಓದಿ: IND vs PAK, ICC Cricket World Cup 2023: ಇಂದು-ಭಾರತ-ಪಾಕ್ ಕದನ: ವಿಜಯ ಮಾಲೆ ಯಾರ ಕೊರಳಿಗೆ? ಇತಿಹಾಸ ಹೇಳುವುದೇನು? 


ಡಾ. ಎಸ್. ಬಸವರಾಜಪ್ಪ : ಡಾ. ಎಸ್. ಬಸವರಾಜಪ್ಪ ಅವರು ಐಐಟಿ ಧಾರವಾಡದ ರಿಜಿಸ್ಟ್ರಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿಯವರಿಗೆ ಅವರು 129 ಸಂಶೋಧನ ಲೇಖನಗಳನ್ನು ಪ್ರಕಟಿಸಿದ್ದಾರೆ. 2023 ರ ಸ್ಟ್ಯಾನ್‍ಫೆÇೀರ್ಡ್ ವಿಶ್ವವಿದ್ಯಾನಿಲಯದ ಅಗ್ರ ವಿಜ್ಞಾನಿಗಳಲ್ಲಿ ವಾರ್ಷಿಕ ಶ್ರೇಯಾಂಕದೊಂದಿಗೆ ವೃತ್ತಿ ಜೀವನದ ಸಾಧನೆಯಲ್ಲಿ ಶ್ರೇಯಾಂಕವನ್ನು ಪಡೆದಿರುವುದು ಗಮನಾರ್ಹವಾಗಿದೆ. ಡಾ.ಬಸವರಾಜಪ್ಪ ಅವರದು ವಸ್ತುಗಳು, ಯಾಂತ್ರಿಕ ಮತ್ತು ಸಾರಿಗೆ ಎಂಜಿನಿಯರಿಂಗ್ ವಿಷಯಗಳು ಅವರ ಸಂಶೋಧನಾ ಕ್ಷೇತ್ರಗಳಾಗಿವೆ. ಈ ಹಿಂದೆಯೂ ಕೂಡ 2020 ಮತ್ತು 2021 ನೇ ಸಾಲಿನಲ್ಲಿ ಬಿಡುಗಡೆಯಾದ ಪಟ್ಟಿಯಲ್ಲಿ ಅವರು ಸ್ಥಾನ ಪಡೆದಿದ್ದರು.


ಡಾ. ಅಮರನಾಥ ಹೆಗಡೆ : ಡಾ. ಅಮರನಾಥ ಹೆಗಡೆ ಅವರು ಧಾರವಾಡ ಐಐಟಿ ಯ ಸಿವಿಲ್ ಮತ್ತು ಇನ್ಫಾಸ್ಟ್ರಕ್ಚರ್ ಇಂಜಿನಿಯರಿಂಗ್ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿದ್ದರೆ. ಇಲ್ಲಿಯವರೆಗೆ ಅವರು 46 ಸಂಶೋಧನೆ, ಲೇಖನಗಳನ್ನು  ಪ್ರಕಟಿಸಿದ್ದಾರೆ. ಪ್ರಸ್ತುತ ವರ್ಷದ ಸ್ಟ್ಯಾನ್‍ಫೋರ್ಡ್  ವಿಶ್ವವಿದ್ಯಾಲಯದ ಅಗ್ರ ವಿಜ್ಞಾನಿಗಳಲ್ಲಿ ಶ್ರೇಯಾಂಕ ಪಡೆದಿದ್ದಾರೆ. ಜಿಯೋಟೆಕ್ನಿಕಲ್ ಇಂಜಿನಿಯರಿಂಗ್, ಜಿಯೋಸಿಂಥೆಟಿಕ್ ಮತ್ತು ಗ್ರೌಂಡ್ ಇಂಪ್ರೂಮೆಂಟ್ಸ್, ಕಾಂಪ್ಯೂಟೇಶನಲ್ಲಿ ಟೆಕ್ನಿಕ್ಸ್ ವಿಷಯಗಳು ಇವರ ಅಧ್ಯಯನ ಆಸಕ್ತಿಯ ಕ್ಷೇತ್ರಗಳಾಗಿವೆ. ಐಐಟಿ ಧಾರವಾಡದ ನಿರ್ದೇಶಕ ವೆಂಕಪ್ಪಯ್ಯ ದೇಸಾಯಿ, ವಿವಿಧ ವಿಭಾಗಗಳ ಡೀನ್‍ರು, ಅಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಈ ಇಬ್ಬರೂ ಸಂಶೋಧಕರನ್ನು ಸಾಧನೆಗಾಗಿ ಅಭಿನಂದಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.