ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು 2019ರ ಮಾರ್ಚ್ 1 ರಿಂದ 18 ರವರೆಗೆ ನಡೆಸಲು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ. 


COMMERCIAL BREAK
SCROLL TO CONTINUE READING

ಮಾರ್ಚ್​ 1ರಂದು ಇತಿಹಾಸ, ಭೌತಶಾಸ್ತ್ರ, ಬೇಸಿಕ್​ ಮ್ಯಾಥ್ಸ್​, ಮಾರ್ಚ್​ 2ರಂದು ಮಾಹಿತಿ ತಂತ್ರಜ್ಞಾನ, ರೀಟೆಲ್, ಆಟೋಮೊಬೈಲ್, ಹೆಲ್ತ್​ಕೇರ್, ಬ್ಯೂಟಿ ಮತ್ತು ವೆಲ್​ನೆಸ್​, ಮಾರ್ಚ್​ 5ರಂದು ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್, ಮಾರ್ಚ್​ 6ರಂದು ತರ್ಕಶಾಸ್ತ್ರ, ಭೂಗರ್ಭ ಶಾಸ್ತ್ರ, ಶಿಕ್ಷಣ, ಗೃಹವಿಜ್ಞಾನ, ಮಾರ್ಚ್​ 7ರಂದು ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ ಗಣಿತ, ಮಾರ್ಚ್​ 8ರಂದು ಉರ್ದು, ಸಂಸ್ಕೃತ, ಮಾರ್ಚ್​ 9ರಂದು ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ ಪರೀಕ್ಷೆಗಳು ನಡೆಯಲಿವೆ.


ಮಾರ್ಚ್​ 11ರಂದು ವ್ಯವಹಾರ ಅಧ್ಯಯನ, ಸಮಾಜಶಾಸ್ತ್ರ, ರಸಾಯನ ಶಾಸ್ತ್ರ, ಮಾರ್ಚ್​ 12ರಂದು ಭೂಗೋಳಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ, ಮಾರ್ಚ್​ 13ರಂದು ಮನಃಶಾಸ್ತ್ರ, ಎಲೆಕ್ಟ್ರಾನಿಕ್ಸ್, ಗಣಕ ವಿಜ್ಞಾನ, ಮಾರ್ಚ್​ 14ರಂದು ಅರ್ಥಶಾಸ್ತ್ರ, ಜೀವಶಾಸ್ತ್ರ, ಮಾರ್ಚ್​ 15ರಂದು ಹಿಂದಿ, ಮಾರ್ಚ್ 16ರಂದು ಕನ್ನಡ, ಮಾರ್ಚ್​ 18ರಂದು ಹಿಂದಿ ಪರೀಕ್ಷೆಗಳು ಪ್ರತಿದಿನ ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿವೆ.


ಇದು ಪರೀಕ್ಷೆಯ ಪ್ರಸ್ತಾವಿತ ವೇಳಾಪಟ್ಟಿಯಾಗಿದ್ದು, ವೇಳಾಪಟ್ಟಿ ಸಂಬಂಧ ಯಾವುದೇ ಆಕ್ಷೇಪಗಳಿದ್ದಲ್ಲಿ ಜಂಟಿ ನಿರ್ದೇಶಕರು (ಪರೀಕ್ಷೆ), ಪದವಿಪೂರ್ವ ಶಿಕ್ಷಣ ಇಲಾಖೆ, ಸಂಪಿಗೆ ರಸ್ತೆ, 18ನೇ ಅಡ್ಡ ರಸ್ತೆ, ಮಲ್ಲೇಶ್ವರ, ಬೆಂಗಳೂರು-12 ಈ ವಿಳಾಸಕ್ಕೆ ನವೆಂಬರ್ 30 ರೊಳಗೆ ಅರ್ಜಿ ಸಲ್ಲಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.