ಬೆಂಗಳೂರು: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳು ಇಂದಿನಿಂದ ಆರಂಭವಾಗಲಿದ್ದು ಬೆಳಿಗ್ಗೆ 10:15 ರಿಂದ 1:30ರವರೆಗೆ ಪರೀಕ್ಷೆ ನಡೆಯಲಿದೆ. 


COMMERCIAL BREAK
SCROLL TO CONTINUE READING

ರಾಜ್ಯಾದ್ಯಂತ 305 ಪರೀಕ್ಷಾ ಕೇಂದ್ರಗಳಲ್ಲಿ ಇಂದಿನಿಂದ ಆರಂಭವಾಗಲಿರುವ ದ್ವಿತೀಯ ಪಿಯುಸಿ (Second PUC) ಪರೀಕ್ಷೆಗಳು ಸೆ. 19ರವರೆಗೆ ನಡೆಯಲಿವೆ. ಒಟ್ಟು 2,12, 652 ವಿದ್ಯಾರ್ಥಿಗಳು ಪೂರಕ ಪರೀಕ್ಷೆ ತೆಗೆದುಕೊಂಡಿದ್ದಾರೆ. ಇದರಲ್ಲಿ 1,29,975 ಬಾಲಕರು ಹಾಗೂ 82,677 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ.


ಕೋವಿಡ್ 19 (Covid 19) ಹಿನ್ನೆಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ಮಾರ್ಗಸೂಚಿ ಅನುಸಾರ ಪರೀಕ್ಷೆಯಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.


ಪರೀಕ್ಷಾ ವೇಳಾ ಪಟ್ಟಿ:
ಇಂದು ಉರ್ದು, ಸಂಸ್ಕೃತ ಪರೀಕ್ಷೆ 
ಸೆ. 8 ಇತಿಹಾಸ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ
ಸೆ. 9 ತೃತೀಯ ಭಾಷೆ ಹಿಂದಿ, ಸೆ. 10 ಇಂಗ್ಲೀಷ್
ಸೆ. 11 ಐಚ್ಛಿಕ ಕನ್ನಡ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
ಸೆ. 12 ಅರ್ಥಶಾಸ್ತ್ರ, ಭೌತಶಾಸ್ತ್ರ
ಸೆ. 14 ವ್ಯವಹಾರ ಅಧ್ಯಯನ, ರಸಾಯನ ಶಾಸ್ತ್ರ
ಸೆ. 15 ಕನ್ನಡ
ಸೆ. 16 ರಾಜ್ಯ ಶಾಸ್ತ್ರ ಮತ್ತು ಬೇಸಿಕ್​ ಗಣಿತಶಾಸ್ತ್ರ
ಸೆ.18 ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ, ಗಣಿತ
ಸೆ. 19 ಭೂಗೋಳ ಶಾಸ್ತ್ರ ಮತ್ತು ಮನಶಾಸ್ತ್ರ