ಚಾಮರಾಜನಗರ: ‘ಇರಲಾರದವರು ಇರುವೆ ಬಿಟ್ಟುಕೊಂಡರು’ ಎಂಬ ಗಾದೆಯಂತಾಗಿದೆ ಈ ಪ್ರವಾಸಿಗರ ಸ್ಥಿತಿ. ಸುಮ್ಮನೆ ಇರದೆ ಏನೋ ಮಾಡಲು ಹೋಗಿ ಇನ್ನೇನೋ ಮಾಡಿಕೊಂಡಿದ್ದಾರೆ. ಮಾಡಿದ ತಪ್ಪಿಗೆ ತಂಡವನ್ನೂ ಕಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಹೌದು, ಕಾಡಾನೆ ಜೊತೆ ಸೆಲ್ಪಿ ಕ್ಲಿಕ್ಕಿಸಿಕೊಂಡ ಇಬ್ಬರು ಪ್ರವಾಸಿಗರಿಂದ ತಲಾ 10 ಸಾವಿರ ರೂ. ದಂಡ ಕಕ್ಕಿಸಿರುವ ಘಟನೆ ಚಾಮರಾಜನಗರ ಗಡಿಭಾಗವಾದ ಅಸನೂರು ಬಳಿ ನಡೆದಿದೆ.


ಇದನ್ನೂ ಓದಿ: ವ್ಯಕ್ತಿಯ ದೂರಿನ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ಬಂದ ʼಕುದುರೆʼ...! ಏಕೆ ಗೊತ್ತೆ..?


ತೆಲಂಗಾಣದ ನಿಜಾಂಪೇಟೆ ಮೂಲದ ದಿಲೀಪ್ ಕುಮಾರ್ (42) ಹಾಗೂ ಶ್ಯಾಂಪ್ರಸಾದ್(31) ದಂಡ ಕಟ್ಟಿರುವ ಪ್ರವಾಸಿಗರು. ಬುಧವಾರ ಸಂಜೆ ಕಾರಿನಲ್ಲಿ ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಮೂಲಕ ಇವರು ಕೊಯಮತ್ತೂರಿಗೆ ತೆರಳುವಾಗ ಆಸನೂರು ಬಳಿ ಆನೆ ನಿಂತಿದ್ದನ್ನು ಕಂಡಿದ್ದಾರೆ.


ಕಾರಿನಿಂದ ಇಳಿದ ಈ ಇಬ್ಬರು ವ್ಯಕ್ತಿಗಳು ಕಾಡಾನೆಯ ತೀರಾ ಸಮೀಪ ಹೋಗಿ ಸೆಲ್ಪಿ ಕ್ಲಿಕ್ಕಿಸಿಕೊಂಡಿದ್ದನ್ನು ಗಸ್ತು ತಿರುಗುತ್ತಿದ್ದ ತಮಿಳುನಾಡಿನ ಅರಣ್ಯ ಇಲಾಖೆ ಸಿಬ್ಬಂದಿ ಗಮನಿಸಿದ್ದಾರೆ. ಇನ್ನೇನೂ ವಿಚಾರಿಸಬೇಕು ಎನ್ನುವಷ್ಟರಲ್ಲಿ ಕಾರು ಹತ್ತಿ ಪೇರಿ ಕಿತ್ತಿದ್ದರು.


ಇದನ್ನೂ ಓದಿ: ನನ್ನ ಬಳಿ ಇರುವ ಪೆನ್ ಡ್ರೈವ್ ಅಸಲಿ, ಹೈದ್ರಾಬಾದ್ ನಲ್ಲಿ ಮಾಡಿಸಿದ್ದಲ್ಲ- ಮಾಜಿ ಸಿಎಂ ಎಚ್‌ಡಿ‌ಕೆ


ಬಳಿಕ ಬಣ್ಣಾರಿ ಚೆಕ್ ಪೋಸ್ಟ್ಗೆ ಇವರ ಮಾಹಿತಿ ತಿಳಿಸಿ ಅಲ್ಲಿ ಕಾರನ್ನು ಅಡ್ಡ ಹಾಕಿ ವಿಚಾರಿಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಬೇಜಾವಬ್ದಾರಿತನ ತೋರಿದ ಇಬ್ಬರಿಗೂ ತಲಾ 10 ಸಾವಿರ ರೂ. ದಂಡ ವಿಧಿಸಿದ ಅರಣ್ಯಾಧಿಕಾರಿಗಳು ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.