ರೈತ ಚಳುವಳಿಯ ನಾಯಕ ಮಾರುತಿ ಮಾನ್ಪಡೆ ಇನ್ನಿಲ್ಲ
ಕರ್ನಾಟಕದ ಹಿರಿಯ ಕಮ್ಯುನಿಸ್ಟ್ ನಾಯಕ ಕಾಮ್ರೇಡ್ ಮಾರುತಿ ಮಾನ್ಪಡೆ (65) ಅವರು ಇಂದು ಬೆಳಿಗ್ಗೆ 9.30 ಕ್ಕೆ ಕೊನೆಯುಸಿರೆಳೆದರು.
ಬೆಂಗಳೂರು: ಕರ್ನಾಟಕದ ಹಿರಿಯ ಕಮ್ಯುನಿಸ್ಟ್ ನಾಯಕ ಕಾಮ್ರೇಡ್ ಮಾರುತಿ ಮಾನ್ಪಡೆ (65) ಅವರು ಇಂದು ಬೆಳಿಗ್ಗೆ 9.30 ಕ್ಕೆ ಕೊನೆಯುಸಿರೆಳೆದರು.
ಕಳೆದ ಎರಡು ವಾರಗಳಿಂದ ಕೊರೊನಾ ಸೋಂಕಿಗೊಳಗಾಗಿದ್ದ ಮಾನ್ಪಡೆ ಅವರನ್ನು ಸೊಲ್ಲಾಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಮಾನ್ಪಡೆ ಅವರ ನಿಧನದಿಂದ ಕಲ್ಯಾಣ ಕರ್ನಾಟಕ ಭಾಗ ಒಬ್ಬ ನಿಷ್ಟ ಜನಪರ ಹೋರಾಟಗಾರನನ್ನು ಕಳೆದುಕೊಂಡಂತಾಗಿದೆ.ಸಮಾಜದ ಅತ್ಯಂತ ತಳ ಸಮುದಾಯದಿಂದ ಬಂದ ಕಾಮ್ರೇಡ್ ಮಾನ್ಪಡೆ ಒಬ್ಬ ಮಹಾನ್ ಹೋರಾಟಗಾರಾಗಿದ್ದರು.
ಅವರು ಪ್ರಸ್ತುತ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಅಂಗಸಂಸ್ಥೆಯಾದ ಕರ್ನಾಟಕ ಪ್ರಂತ ರೈತ ಸಂಘದಲ್ಲಿ ದೀರ್ಘಕಾಲ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು.ಕರ್ನಾಟಕದ ರೈತ ಚಳುವಳಿಯ ಮುಖ್ಯ ನಾಯಕರಲ್ಲೊಬ್ಬರಾಗಿದ್ದ ಮಾನ್ಪಡೆ ಅವರು ಪಂಚಾಯತ್ ನೌಕರರ ಹೋರಾಟ, ದಲಿತರ ಹಕ್ಕುಗಳು, ಅಂಗನವಾಡಿ ಸಿಬ್ಬಂದಿ ಮೊದಲಾದ ಸಂಘಟನೆಗಳಲ್ಲಿಯೂ ತೊಡಗಿಸಿಕೊಂಡಿದ್ದರು.
Red Salute Comrade Maruti Manpade Senior leader of CPI(M), Maruti Manpade passed away in Solapur due to COVID related...
Posted by Communist Party of India (Marxist) on Tuesday, 20 October 2020
ಅವರು ಹೈದರಾಬಾದ್ ಕರ್ನಾಟಕದ ಭಾಗದಲ್ಲಿ ತೊಗರಿ ಬೆಳೆ, ಕೃಷ್ಣಾ ನದಿ ನೀರಾವರಿ ವಿದ್ಯುತ್ ಖಾಸಗೀಕರಣ ಮೊದಲಾದ ಹಲವು ರೈತರ ಪ್ರಶ್ನೆಗಳ ಹೋರಾಟ ಕೈಗೆತ್ತಿಕೊಂಡು ರೈತರಿಗೆ ಪರಿಹಾರ ಕೊಡಿಸುವುದರಲ್ಲಿ ಯಶಸ್ವಿಯಾಗಿದ್ದರು.ಅಷ್ಟೇ ಅಲ್ಲದೆ ಅವರು ಕರ್ನಾಟಕದಲ್ಲಿ ಭೂ ಹಕ್ಕುಗಳಿಗಾಗಿ ಮತ್ತು ಸಾಮಾಜಿಕ ದಬ್ಬಾಳಿಕೆಯ ವಿರುದ್ಧದ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು.ಅವರು ಮನರೇಗಾ ಕಾರ್ಮಿಕರು ಮತ್ತು ಪಂಚಾಯತ್ ಕಾರ್ಮಿಕರನ್ನು ಸಂಘಟಿಸಿದರು ಮತ್ತು ಪಂಚಾಯತ್ ಕಾರ್ಮಿಕರ ಸಂಘದ ಅಧ್ಯಕ್ಷರೂ ಆಗಿದ್ದರು.
ದೇವದಾಸಿ ಮಹಿಳೆಯರ ವಿಮೋಚನೆಗಾಗಿ ಅವರನ್ನು ಸಂಘಟಿಸಿದ್ದಲ್ಲದೇ.ದಲಿತ ಹಕ್ಕುಗಳ ಸಮಿತಿಯನ್ನು ಆಯೋಜಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.ಬೆಳೆ ಆಧಾರಿತ ಸಂಸ್ಥೆಗಳ ಅಗತ್ಯತೆಯ ಬಗ್ಗೆ ಅವರು ಒತ್ತಿ ಹೇಳಿದರು ಮತ್ತು ರಾಜ್ಯದಲ್ಲಿ ತುರ್ ರೈತರು ಮತ್ತು ಕಬ್ಬು ರೈತರನ್ನು ಸಂಘಟಿಸಿದ್ದರು.