ಬೆಂಗಳೂರು : ಪಿ ಜಿ ಮಾಲೀಕರಿಗೆ ಪೊಲೀಸ್ ಇಲಾಖೆ ಶಾಕ್ ನೀಡಿದೆ. ಪಿಜಿಗಳಿಗೆ ಪ್ರತ್ಯೇಕ ಗೈಡ್ ಲೈನ್ಸ್  ಹೊರಡಿಸಿದೆ. ಈ ಬಗ್ಗೆ ಹತ್ತಕ್ಕೂ ಹೆಚ್ಚು ನಿಯಮಗಳನ್ನ ಜಾರಿ ಮಾಡಿದೆ. ಪಿಜಿಗಳಲ್ಲಿ ನಡೆಯುತ್ತಿರುವ ಅಪರಾಧ, ಅಕ್ರಮ ಚಟುವಟಿಕೆಗಳನ್ನೂ ತಡೆಗಟ್ಟಲು ಪೊಲೀಸ್ ಇಲಾಖೆ ಹೊಸ ಮಾರ್ಗಸೂಚಿ ಹೊರಡಿಸಿದೆ. 


COMMERCIAL BREAK
SCROLL TO CONTINUE READING

ಪಿಜಿಗಳಿಗೆ ಹೊಸ ಮಾರ್ಗಸೂಚಿಯನ್ನು ಪೋಲೀಸ್ ಇಲಾಖೆ ಬಿಡುಗಡೆ ಮಾಡಿದೆ. ಅಪರಾಧ ಮತ್ತು ಅಕ್ರಮ ಚಟುವಟಿಕೆಗೆ ತಡೆಯೊಡ್ಡುವ ನಿಟ್ಟಿನಲ್ಲಿ ಪೋಲೀಸ್ ಇಲಾಖೆ ಈ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇನ್ನು ಮುಂದೆ ಪಿಜಿ ಆರಂಭಿಸಬೇಕಾದರೆ ಪಿಜಿ  ಮಾಲೀಕರು ಬಿಬಿಎಂಪಿಯಿಂದ ಕಡ್ಡಾಯವಾಗಿ ಪರವಾನಗಿ ಪಡೆದುಕೊಳ್ಳಬೇಕು. ಈ ಮಾರ್ಗಸೂಚಿಯ ಪ್ರಕಾರ ಬಂದವರನ್ನೆಲಾ ಪಿಜಿಯಲ್ಲಿ ಇರಿಸಿಕೊಳ್ಳುವಂತೆ ಇಲ್ಲ. ಪಿಜಿ ಯಲ್ಲಿ ಸ್ಥಳಾವಕಾಶ ನೀಡಬೇಕಾದರೆ ಅವರು ಕೆಲವೊಂದು ದಾಖಲೆಗಳನ್ನು ನೀಡಬೇಕು.ಇಲಾಖೆ ಬಿಡುಗಡೆ ಮಾಡಿರುವ ಈ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದರೆ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. 


ಇದನ್ನೂ ಓದಿ : ಗುಮ್ಮಟ ನಗರಿ ವಿಜಯಪುರದಲ್ಲಿ ತಡರಾತ್ರಿ ಎರಡು ಬಾರಿ ಕಂಪಿಸಿದ ಭೂಮಿ


ಪಿಜಿಗಳಿಗೆ ಹೊರಡಿಸಿದ ನೂತನ ಮಾರ್ಗಸೂಚಿ :
- ಪಿಜಿ ಆರಂಭಿಸಲು ಬಿಬಿಎಂಪಿ ಪರವಾನಗಿ ಕಡ್ಡಾಯ
- ಅಗತ್ಯವಿರುವ ಪರವಾನಿಗೆಯನ್ನ ಬಿಬಿಎಂಪಿಯಿಂದ ಪಡೆಯಬೇಕು
- ಪಿಜಿ ವಾಸಕ್ಕೆ ಬರುವ ಎಲ್ಲಾ ವ್ಯಕ್ತಿಗಳ ಗುರುತಿನ ಚೀಟಿ ಪಡೆಯಬೇಕು
-ಇತ್ತೀಚಿನ ಭಾವಚಿತ್ರ ಮತ್ತು ರಕ್ತ ಸಂಬಂಧಿಗಳ ವಿವರ, ಮೊಬೈಲ್ ನಂಬರ್ ದಾಖಲೆ ಮಾಡಬೇಕು
- ಪಿಜಿಗೆ ಭೇಟಿ ನೀಡುವ ಸಂಬಂಧಿಕರಾಗಲಿ‌ ಅಥವಾ ಯಾರೇ ಆಗಿರಲಿ ಅವರ ವಿವರ ಪ್ರತ್ಯೇಕವಾಗಿ ನಿರ್ವಹಿಸಬೇಕು
- ಸಿಸಿಟಿವಿ, ಅಗ್ನಿ ಸುರಕ್ಷತಾ ವ್ಯವಸ್ಥೆ ಹೊಂದಿರಬೇಕು
- ಮಾದಕ ವಸ್ತು ಸೇವನೆ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಬಾರದು
- ವಿದೇಶಿ ಪ್ರಜೆಗಳ ಬಗ್ಗೆ ಸ್ಥಳೀಯ ಠಾಣೆ ಮತ್ತು ಎಫ್ಆರ್ ಓ ಗೆ ಮಾಹಿತಿ ನೀಡಬೇಕು
-ವಾಸಕ್ಕೆ ಇರುವವರನ್ನ ಬಿಟ್ಟು ಇತರರಿಗೆ ತಾತ್ಕಾಲಿಕ ವಾಸ ಕಲ್ಪಿಸಬಾರದು
-ನ್ಯಾಯಾಲಯದ ಆದೇಶದನ್ವಯದ ರಾತ್ರಿ 10 ರಿಂದ ಬೆಳಗ್ಗೆ 6 ವರೆಗೆ ಧ್ವನಿವರ್ಧಕ ಬಳಸುವಂತಿಲ್ಲ
-ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದರೆ ಪಿಜಿ ಮಾಲೀಕರೆ ಹೊಣೆ ಎಂದು ಸೂಚನೆ


ಇದನ್ನೂ ಓದಿ : "ಬಿಜೆಪಿ ನಾಯಕರ ಮಾತುಗಳಿಗೆ ಮರುಳಾಗಿ, ಕಾನೂನು ಕೈಗೆತ್ತಿಕೊಳ್ಳುವ ತಪ್ಪನ್ನು ಜನತೆ ಮಾಡಬಾರದು"


ಪೋಲೀಸ್ ಇಲಾಖೆ ಜಾರಿಗೊಳಿಸಿದ ಈ ಮಾರ್ಗಸೂಚಿಗಳನ್ನು ಪಾಲಿಸದಿದ್ದರೆ ಅವರ ವಿರುದ್ದ ತಕ್ಷಣ ಕ್ರಮ ಕೈಗೊಳ್ಳಲಾಗುವುದು.  


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.