ಸೇವಾನ್ಯೂನ್ಯತೆ: ಪರಿಹಾರ ನೀಡಲು ಗ್ರಾಹಕರ ಆಯೋಗ ಆದೇಶ
ಅಖಿಲಾ ಸಿ.ಕೆ ಜೈನ್ ಎಂಬುವವರು ತಮ್ಮ ವಕೀಲರ ಮೂಲಕ ಬಾತ್ಲಾ ಟೆಲಿ ಟೆಕ್ ಪ್ರೈವೇಟ್ ಲಿಮಿಟೆಡ್, ತಮಿಳುನಾಡು ಮತ್ತು ಸ್ಯಾಮ್‌ಸಂಗ್ ಸವೀರ್ಸ್ ಸೆಂಟರ್ ಶಿವಮೊಗ್ಗ ಇವರುಗಳ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಪರಿಹಾರ ನೀಡಲು ಆದೇಶಿಸಿದೆ.
ಶಿವಮೊಗ್ಗ: ಅಖಿಲಾ ಸಿ.ಕೆ ಜೈನ್ ಎಂಬುವವರು ತಮ್ಮ ವಕೀಲರ ಮೂಲಕ ಬಾತ್ಲಾ ಟೆಲಿ ಟೆಕ್ ಪ್ರೈವೇಟ್ ಲಿಮಿಟೆಡ್, ತಮಿಳುನಾಡು ಮತ್ತು ಸ್ಯಾಮ್‌ಸಂಗ್ ಸವೀರ್ಸ್ ಸೆಂಟರ್ ಶಿವಮೊಗ್ಗ ಇವರುಗಳ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಪರಿಹಾರ ನೀಡಲು ಆದೇಶಿಸಿದೆ.
ಅರ್ಜಿದಾರ ಅಖಿಲಾ ಸಿ.ಕೆ ಜೈನ್ ರವರು ಎದುರಾರ ಬಾತ್ಲಾ ಟೆಲಿ ಟೆಕ್ ಪ್ರೈವೇಟ್ ಲಿಮಿಟೆಡ್, ತಮಿಳುನಾಡು ಮತ್ತು ಸ್ಯಾಮ್‌ಸಂಗ್ ಸವೀರ್ಸ್ ಸೆಂಟರ್ ಶಿವಮೊಗ್ಗದಲ್ಲಿ ಪ್ಲಿಪ್ ಕಾರ್ಟ್ ಮೂಲಕ ಸ್ಯಾಮ್‌ಸಂಗ್ ವಾಷಿಂಗ್ ಮಿಷನ್ ಖರೀದಿಸಿದ್ದರು. ಮಿಷನ್‌ಗೆ ಮೂರು ವರ್ಷಗಳ ಹಾಗೂ ಬಿಡಿಭಾಗಗಳಿಗೆ 10 ವರ್ಷಗಳ ವಾರಂಟಿ ಇರುತ್ತದೆ. ಆದರೆ 2023 ರಲ್ಲಿ ವಾಷಿಂಗ್ ಮಷಿನ್ ಡ್ರಮ್ ಹಾಳಾಗಿದ್ದು, ಹೊಸದಾಗಿ ಡ್ರಮ್ ಅಳವಡಿಸಿಕೊಡಲು 5,291 ರೂಗಳನ್ನು ಪಡೆದಿರುತ್ತಾರೆ. ಆದರೆ ಬದಲಿಸಿದ ನಂತರವು ನೀರು ಸೊರಲು ಪ್ರಾರಂಭವಾಗುತ್ತದೆ. ಸರ್ವೀಸ್ ಸೆಂಟರ್‌ರವರಿಗೆ ದೂರು ನೀಡಿದ್ದು, ಮನೆಗೆ ಬಂದು ಡ್ರಮ್ ಸರಿಯಾದ ರೀತಿಯಲ್ಲಿ ಅಳವಡಿಸದೆ, ಪ್ರಶ್ನಿಸಿದಾಗ ಯಾವುದೆ ಪ್ರತಿ ಕ್ರಿಯೆ ನೀಡದೆ ಹೋರಹೋಗಿರುತ್ತಾರೆ.
ಇದನ್ನೂ ಓದಿ: ತನಿಖೆಗೆ ಹೆದರಲ್ಲ; ತನಿಖೆಯನ್ನು ಎದುರಿಸಲು ಸಿದ್ಧ, ಕಾನೂನಾತ್ಮಕ ಹೋರಾಟಕ್ಕೆ ಸಜ್ಜು: ಸಿಎಂ ಸಿದ್ದರಾಮಯ್ಯ
ಈ ಕುರಿತು ಆಯೋಗದ ಮುಂದೆ ಸೂಕ್ತ ಪರಿಹಾರ ಕೋರಿ ಪ್ರಕರಣ ದಾಖಲಿಸಿದ್ದು, ಪ್ರಕರಣದ ಅಂಶಗಳು ಮತ್ತು ಅರ್ಜಿದಾರರು ಹಾಜರುಪಡಿಸಿದ ದಾಖಲೆಗಳನ್ನು ಪರಿಗಣಿಸಿ, ಎದುರುದಾರರಿಗೆ ಆಯೋಗವು ನೋಟೀಸ್ ನೀಡಿ ದೂರಿನ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ತಿಳಿಸಿದ್ದು, ನೋಟೀಸ್ ಪಡೆಯದ ಹಾಗೂ ನೋಟೀಸ್ ಪಡೆದು ಹಾಜರಾಗದ ಕಾರಣ ಪ್ರಕರಣವನ್ನು ಏಕಪಕ್ಷೀಯವೆಂದು ಆಯೋಗವು ತೀರ್ಮಾನಿಸಿದೆ.
ಅರ್ಜಿದಾರರ ಅಂಶಗಳು, ಪ್ರಮಾಣ ಪತ್ರ, ದಾಖಲೆಗಳನ್ನು ಮತ್ತು ದೂರುದಾರರ ಪರ ವಕೀಲರ ವಾದವನ್ನು ಆಲಿಸಿ, ಸೇವಾ ನ್ಯೂನತೆ ಎಸಗಿರುವುದು ಕಂಡುಬಂದಿದ್ದು, ಎದುರುದಾರರು ದೂರುದಾರರಿಂದ 45 ದಿನದೊಳಗೆ ವಾಷಿಂಗ್ ಮಷಿನ್ ಬದಲಿಸಿಕೊಡಲು ಮತ್ತು ವಾಷಿಂಗ್ ಮಷಿನ್ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡಿಕೊಡಲು ಸೂಚಿಸಿದೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿಯಿಂದ ಪ್ರತಿಭಟನೆ
ಈ ಆದೇಶ ಪಾಲಿಸುವರೆಗೂ ದಿನಕ್ಕೆ ರೂ. 150 ರಂತೆ ವಾಷಿಂಗ್ ಚಾರ್ಜ್ ನೀಡಲು ಹಾಗೂ ರೂ.5.291 ಡ್ರಮ್ ಚಾರ್ಜಸ್ ಮತ್ತು ರೂ. 10,000 ಗಳನ್ನು ಮಾನಸಿಕ ಹಿಂಸೆ ಹಾಗೂ ಹಾನಿಗಳಿಗೆ ಪರಿಹಾರವಾಗಿ ಹಾಗೂ ವ್ಯಾಜ್ಯದ ಖರ್ಚು ವೆಚ್ಚದ ಬಾಬ್ತಾಗಿ ನೀಡಬೇಕು. ತಪ್ಪಿದಲ್ಲಿ ಆದೇಶವಾದ ದಿನಾಂಕದಿಂದ ಈ ಮೊತ್ತಗಳಿಗೆ ವಾರ್ಷಿಕ ಶೇ.9 ರಷ್ಟು ಬಡ್ಡಿಯನ್ನು ಪೂರಾ ಹಣ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ. ಶಿವಣ್ಣ, ಸದಸ್ಯರಾದ ಸವಿತಾ ಬಿ ಪಟ್ಟಣಶೆಟ್ಟಿ ಮತ್ತು ಬಿ.ಡಿ.ಯೋಗಾನಂದ ಭಾಂಡ್ಯ ಇವರ ಪೀಠವು ಸೆ.18 ರಂದು ಆದೇಶಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.