ಗದಗ : ಪರೀಕ್ಷಾ ಕೊಠಡಿಯಲ್ಲಿ ಹಿಜಾಬ್ (Hijab)ಧರಿಸಲು ಅವಕಾಶ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಅಮಾನತು ಮಾಡಲಾಗಿದೆ. ಐವರು ಮೇಲ್ವಿಚಾರಕರು, ಇಬ್ಬರು ಅಧೀಕ್ಷಕರು ಸೇರಿದಂತೆ ಏಳು ಜನರನ್ನು  ಅಮಾನತು ಮಾಡಲಾಗಿದೆ. 


COMMERCIAL BREAK
SCROLL TO CONTINUE READING

ಗದಗ ನಗರದ ಸಿಎಸ್ ಪಾಟೀಲ ಪ್ರೌಢ ಶಾಲೆಯ ಪರೀಕ್ಷಾ ಕೊಠಡಿಯಲ್ಲಿ, ವಿದ್ಯಾರ್ಥಿಗಳಿಗೆ  ಹಿಜಾಬ್ (Hijab) ಧರಿಸಲು ಅವಕಾಶ ಕಲ್ಪಿಸಲಾಗಿತ್ತು.  ಮಾರ್ಚ್ 28 ರಂದು ನಡೆದಿದ್ದ  ಎಸ್ ಎಸ್ ಎಲ್ ಸಿ  ಪ್ರಥಮ ಭಾಷೆ ಪರೀಕ್ಷೆ ವೇಳೆ  ವಿದ್ಯಾರ್ಥಿನಿಯರು ಹಿಜಾಬ್, ಬುರ್ಖಾ ಧರಿಸಿ ಪರೀಕ್ಷೆ ಬರೆದಿದ್ದರು (Hijab Contraversy). 


ಇದನ್ನೂ ಓದಿ : Pariksha Pe Charcha: ಪ್ರಧಾನಿ ಮೋದಿಯೊಟ್ಟಿಗೆ ಚಾಮರಾಜನಗರ ವಿದ್ಯಾರ್ಥಿನಿ ಮಾತು


ಕ್ಷೇತ್ರ ಶಿಕ್ಷಣಾಧಿಕಾರಿಗಳ ವರದಿ ಹಿನ್ನೆಲೆಯಲ್ಲಿ  ಐವರು ಮೇಲ್ವಿಚಾರಕರು, ಇಬ್ಬರು ಅಧೀಕ್ಷಕರು ಸೇರಿದಂತೆ   ಏಳು ಜನರನ್ನು ಅಮಾನತು ಮಾಡಲಾಗಿದೆ. ಪರೀಕ್ಷಾ ಕೇಂದ್ರದ ಅಧೀಕ್ಷಕರಾದ ಕೆಬಿ ಭಜಂತ್ರಿ, ಬಿಎಸ್ ಹೊನ್ನಗುಡಿ , ಕೊಠಡಿ ಮೇಲ್ವಿಚಾರಕರಾದ ಎಸ್ ಜಿ ಗೋಡಕೆ, ಎಸ್ ಎಸ್ ಗುಜಮಾಗಡಿ, ವಿಎನ್ ಕಿವುಡರ್, ಎಸ್ ಯು ಹೊಕ್ಕಳದ, ಎಸ್ ಎಮ್ ಪತ್ತಾರ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ತಕ್ಷಣಕ್ಕೆ ಜಾರಿಯಾಗುವಂತೆ  ಏಳು ಜನರನ್ನ ಅಮಾನತು ಮಾಡಿ ಗದಗ ಡಿಡಿಪಿಐ (DDPI) ಜಿ.ಎಮ್  ಬಸವಲಿಂಗಪ್ಪ  ಆದೇಶ ಹೊರಡಿಸಿದ್ದಾರೆ. 


ಇದನ್ನೂ ಓದಿ :  Aam Aadmi Party: ಆಮ್ ಆದ್ಮಿ ಪಕ್ಷಕ್ಕೆ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಸೇರ್ಪಡೆ ಸಾಧ್ಯತೆ?!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.