ಮಂಗಳೂರು: ಸಕಲೇಶಪುರ - ಬಾಳ್ಳುಪೇಟೆ ನಡುವೆ ಭೂಕುಸಿತ ಉಂಟಾಗಿದ್ದು, ಹಲವು ರೈಲು ಸಂಚಾರಕ್ಕೆ ತೊಂದರೆಯಾಗಿದೆ. ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್ - ವಿಜಯಪುರ ವಿಶೇಷ ಎಕ್ಸ್‌ಪ್ರೆಸ್, ರೈಲು ಸಂಖ್ಯೆ 16515 ಯಶವಂತಪುರ ಜಂಕ್ಷನ್-ಕಾರವಾರ ಎಕ್ಸ್‌ಪ್ರೆಸ್, ರೈಲು ನಂ.16576 ಮಂಗಳೂರು ಜಂಕ್ಷನ್ - ಯಶವಂತಪುರ ಜಂಕ್ಷನ್ ಎಕ್ಸ್‌ಪ್ರೆಸ್ ಪ್ರಯಾಣವನ್ನು ಆಗಸ್ಟ್ 12 ರಂದು ರದ್ದುಗೊಳಿಸಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯರ ಚಡ್ಡಿ ಫುಲ್‌ ಕಪ್ಪಾಗಿದೆ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯ 


ರೈಲು ಸಂಖ್ಯೆ 16586 ಮುರ್ಡೇಶ್ವರ-SMVT ಬೆಂಗಳೂರು ಎಕ್ಸ್‌ಪ್ರೆಸ್ ಅನ್ನು ಮುರ್ಡೇಶ್ವರದಿಂದ ಮಂಗಳೂರು ಜಂಕ್ಷನ್‌ನಲ್ಲಿ ಅಲ್ಪಾವಧಿಗೆ ನಿಲ್ಲಿಸಲಾಯಿತು. ಭಾನುವಾರ ಮಂಗಳೂರು ಜಂಕ್ಷನ್ ಮತ್ತು SMVT ಬೆಂಗಳೂರು ಸಂಚಾರ ರದ್ದುಗೊಳಿಸಲಾಯಿತು. ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ಕೂಡ ಬಾಗಲಕೋಟೆಯಲ್ಲಿ ಅಲ್ಪಾವಧಿಗೆ ಸಂಚಾರ ನಿಲ್ಲಿಸಿದೆ. ರೈಲಿನ ಸೇವೆಗಳನ್ನು ಬಾಗಲಕೋಟೆ ಮತ್ತು ಮಂಗಳೂರು ಸೆಂಟ್ರಲ್ ನಡುವೆ ಭಾನುವಾರ ರದ್ದುಗೊಳಿಸಲಾಯಿತು.  


ಕರ್ನಾಟಕದಲ್ಲಿ ಬೆಂಗಳೂರು-ಮಂಗಳೂರು ವಿಭಾಗದಲ್ಲಿ ಭೂಕುಸಿತವು ಐದು ರೈಲು ಸೇವೆಗಳ ಮೇಲೆ ಪರಿಣಾಮ ಬೀರುತ್ತದೆ. ಸಕಲೇಶಪುರ ಮತ್ತು ಬಿಎಲ್‌ಎಲ್‌ಟಿ ನಿಲ್ದಾಣಗಳ ನಡುವೆ ಹೊಸ ಭೂಕುಸಿತ ಸಂಭವಿಸಿದ್ದು, ಬೆಂಗಳೂರು-ಮಂಗಳೂರು ರೈಲು ಸಂಚಾರ ಸ್ಥಗಿತಗೊಂಡಿದ್ದು, ನೂರಾರು ಪ್ರಯಾಣಿಕರು ಪರದಾಡುವಂತಾಯಿತು. ಹಳಿಗಳ ಮೇಲೆ ಬಿದ್ದ ಮಣ್ಣನ್ನು ತೆರವುಗೊಳಿಸುವ ಪ್ರಯತ್ನಗಳು ನಡೆಯುತ್ತಿದ್ದು, ಪ್ರಯಾಣಿಕರಿಗೆ ಬೆಂಗಳೂರಿಗೆ ಬಸ್ ಸೇವೆ ವ್ಯವಸ್ಥೆ ಮಾಡಲಾಗಿದೆ.


ಇದನ್ನೂ ಓದಿ: ಹಿಂದೂ ಸಂಪ್ರದಾಯದಂತೆ ಅದ್ದೂರಿಯಾಗಿ ನಡೆದ ಸೋನಲ್​ ಮಾಂತೆರೋ ಹಾಗೂ ತರುಣ್​ ಸುಧೀರ್ ವಿವಾಹ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.