ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಶಕ್ತಿಯೋಜನೆಗೆ ಈಗ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ಬಂದಿದೆ. ಅಷ್ಟೇ ಅಲ್ಲದೆ ಮಹಿಳೆಯರಿಗೆ ಉಚಿತ್ ಬಸ್ ಪ್ರಯಾಣದ ಅವಕಾಶ ನೀಡಿರುವುದರಿಂದಾಗಿ ಈಗ ಸಾರಿಗೆ ಸಂಸ್ಥೆಯೂ ಈ ಹಿಂದಿಗಿಂತಲೂ ಲಾಭದಾಯಕವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.


COMMERCIAL BREAK
SCROLL TO CONTINUE READING

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಶಕ್ತಿ ಯೋಜನೆಯೂ ಮಹಿಳೆಯರಿಗೆ ಅವಕಾಶಗಳ ಜಗತ್ತನ್ನು ಪ್ರವೇಶಿಸಲು ರೆಕ್ಕೆ ನೀಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.


ಇದನ್ನೂ ಓದಿ: ಆರೆಸೆಸ್ಸ್ ಕಾರ್ಯಕ್ರಮದಲ್ಲಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೆಸರು..! ಸ್ಪಷ್ಟನೆ ನೀಡಿದ ನಿರ್ದೇಶಕರು


ಈ ಕುರಿತಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿರುವ ಅವರು 'ಕುಟುಂಬ ನಿರ್ವಹಣೆ, ಉದ್ಯೋಗ, ಮಕ್ಕಳ ಶಿಕ್ಷಣ, ತಮ್ಮವರ ಆರೋಗ್ಯ ಹೀಗೆ ಹತ್ತು ಹಲವು ಜವಾಬ್ದಾರಿಗಳನ್ನು ತನ್ನ ಹೆಗಲ ಮೇಲೆ ಹೊತ್ತು,ಸುಂದರ ಬದುಕು ಕಟ್ಟಿಕೊಳ್ಳಬೇಕೆಂಬ ಕನಸಿನೊಂದಿಗೆ ಹಗಲಿರುಳು ದುಡಿಯುತ್ತಿರುವ ನಾಡಿನ ನನ್ನ ತಾಯಂದಿರಿಗೆ, ಅಕ್ಕತಂಗಿಯರಿಗೆ, ಬಡತನದಲ್ಲೂ ಓದಿ ಏನನ್ನಾದರೂ ಸಾಧಿಸಬೇಕೆಂಬ ಆಸೆ ಕಂಗಳ ಹೆಣ್ಣು ಮಕ್ಕಳ ಜೀವನ ಉತ್ಸಾಹಕ್ಕೆ ಶಕ್ತಿ ತುಂಬುವ ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ ಜಾರಿಯಾದ ನಂತರ ಸಾರಿಗೆ ನಿಗಮಕ್ಕೂ ಆರ್ಥಿಕ ಶಕ್ತಿ ಬಂದಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿದರೆ ಸಾರಿಗೆ ಸಂಸ್ಥೆ ದಿವಾಳಿಯಾಗುತ್ತದೆ, ಬಿಟ್ಟಿ ಭಾಗ್ಯಗಳಿಂದ ರಾಜ್ಯ ಶ್ರೀಲಂಕವಾಗುತ್ತದೆ ಎಂದು ಹೀಗಳೆದ ಹೊಟ್ಟೆತುಂಬಿದ ಮಂದಿಗೆ ಈ ವರದಿ ಕಣ್ತೆರೆಸಬಹುದು ಎಂದು ನಂಬಿದ್ದೇನೆ.


ಇದನ್ನೂ ಓದಿ: ಲಿಂಗಾಯತ ನಾಯಕತ್ವ ಹಾಗೂ BSY ಬೆಂಬಲಿಗರನ್ನು ಮುಗಿಸಿಹಾಕಲು ಸಂತೋಷ ಕೂಟ ಪಣ ತೊಟ್ಟಿದೆ: ಕಾಂಗ್ರೆಸ್


ಹೆಣ್ಣನ್ನು ನಾಲ್ಕು ಗೋಡೆಗಳ ಮಧ್ಯೆ ಕೂಡಿಟ್ಟು ಸಧೃಡ ರಾಷ್ಟ್ರ ಕಟ್ಟಲು ಸಾಧ್ಯವಿಲ್ಲ. ಶಕ್ತಿ ಯೋಜನೆ ನಾಡಿನ ಮಹಿಳೆಯರಿಗೆ ಅವಕಾಶಗಳ ಜಗತ್ತನ್ನು ಪ್ರವೇಶಿಸಲು ರೆಕ್ಕೆ ನೀಡಿರುವುದಂತು ನಿಜ ಎಂದು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.