ಬೆಂಗಳೂರು: ಬುದ್ದಿ ಬಲ ಮತ್ತು ದೈವ ಬಲದಿಂದ ಶಂಕರ ಬಿದರಿಯವರು ಮಹತ್ವದ ಸಾಧನೆಯನ್ನು ಮಾಡಿದ್ದಾರೆ. ಅವರು ನಾಡಿನ ಹೆಮ್ಮೆಯೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ವರ್ಣಿಸಿದರು.


COMMERCIAL BREAK
SCROLL TO CONTINUE READING

ಅವರು ಕನ್ನಡ ಸಾಹಿತ್ಯ ಪರಿಷತ್ತು ಇವತ್ತು ಏರ್ಪಡಿಸಿದ್ದ ‘ಕನ್ನಡದ ಧೃವತಾರೆ’ ಕಾರ್ಯಕ್ರಮದಲ್ಲಿ ಶಂಕರ ಬಿದರಿಯವರ ಜೊತೆಗಿನ ಸಂವಾದಕ್ಕೆ ಮೊದಲು ಪ್ರಾಸ್ತಾವಿಕ ಮಾತುಗಳನ್ನಾಡುತ್ತಿದ್ದರು. ಕರ್ನಾಟಕದ ಇತಿಹಾಸವೆಂದರೆ ಅದು ಸಾಧಕರ ಇತಿಹಾಸ, ಇತಿಹಾಸವನ್ನು ಓದಿದವರು ಇತಿಹಾಸವನ್ನು ಸೃಷ್ಟಿ ಮಾಡುತ್ತಾರೆ ಎಂದ ಅವರು ಕರ್ನಾಟಕ ಎಲ್ಲಾ ಕ್ಷೇತ್ರಗಳಲ್ಲಿ ಸೃಷ್ಟಿಸಿದ ಸಾಧಕರನ್ನು ಸ್ಮರಿಸಿ ಕೊಂಡರು. ಸರಳತೆ ಮತ್ತು ದಕ್ಷತೆಯಿಂದ ಮಹತ್ವವಾದದನ್ನು ಸಾಧಿಸಿದ ಶಂಕರ ಬಿದರಿಯವರ ಸವಾಲಿನ ಜೀವನದ ಮೇಲೆ ಕಿರುನೋಟವನ್ನು ಅವರು ತಮ್ಮ ಮಾತುಗಳ ಮೂಲಕ ಬೀರಿದರು.


ಇದನ್ನೂ ಓದಿ-ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿಡಲು ಈ 12 ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ!


ಸಂವಾದವನ್ನು ಆರಂಭಿಸಿದ ನಾಡೋಜ.ಡಾ.ಮಹೇಶ ಜೋಶಿಯವರು ಶಂಕರ ಬಿದರಿಯವರ ಬಾಲ್ಯದ ಕುರಿತು ಕೇಳಿದರು. ತಮ್ಮ ಬಾಲ್ಯದ ವಿಶಿಷ್ಟತೆಯನ್ನು ಸ್ಮರಿಸಿ ಕೊಂಡ ಶಂಕರ ಬಿದರಿಯವರು ಸೈನ್ಯ ಸಹಾಯ ನಿಧಿಗೆ ತಮ್ಮ ಬೆಲೆ ಬಾಳುವ ಉಂಗುರವನ್ನು ಹಾಕಿದ್ದು, ಇದು ತಿಳಿದ ನಂತರ ತಾಯಿ ಎಂದಿಗೂ ಸುಳ್ಳನ್ನು ಹೇಳ ಬಾರದು ಎನ್ನುವ ಪಾಠವನ್ನು ಕಲಿಸಿದ್ದನ್ನು ಸ್ಮರಿಸಿ ಅದು ತಮ್ಮ ಬದುಕನ್ನೇ ರೂಪಿಸಿತು ಎಂದರು. ಅದರಂತೆ ಒಂಬತ್ತನೆಯ ವಯಸ್ಸಿನಿಂದಲೂ ಬಂದ ದೈವ ಪೂಜೆಯ ಪದ್ದತಿ ತಮ್ಮಲ್ಲಿ ಆತ್ಮ ವಿಶ್ವಾಸವಾಗಿ ರೂಪುಗೊಂಡ ರೀತಿಯನ್ನೂ ವರ್ಣಿಸಿದರು.


ಇದನ್ನೂ ಓದಿ-ಕಿಚನ್ ನಲ್ಲಿ ಬಿದ್ದಿರುವ ಈ ಒಣ ಎಲೆ ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಹೊರಹಾಕುತ್ತೆ, ಈ ರೀತಿ ಬಳಸಿ!


ಸಭಿಕರೊಂದಿಗಿನ ಸಂವಾದದಲ್ಲಿ ಶಂಕರ ಬಿದರಿಯವರು ತಮ್ಮ ಜೀವನದ ಹಲವು ಪ್ರಮುಖ ಘಟನೆಗಳನ್ನು ಬಿಚ್ಚಿಡುತ್ತಾ ಸಾಗಿದರು. ಟೆಲಿಪೋನ್ ಅಪರೇಟರ್ ಆಗಿ ವೃತ್ತಿ ಜೀವನವನ್ನು ಆರಂಭಿಸಿದ ಅನಿವಾರ್ಯತೆ, ಇಂಡಿಗೆ ಬಂದ ಸಂದರ್ಭವನ್ನು ವಿವರಿಸಿ ಕೃಷ್ಣ ಕುಮಾರ್ ಅವರಿಂದ ಪ್ರೇರಣೆ ಪಡೆದು ಬಾಹ್ಯವಾಗಿ ಪದವಿಯನ್ನು ಪಡೆದು ನಂತರ ಕೆ.ಎ.ಎಸ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿ ಅಸಿಸ್ಟೆಂಟ್ ಕಮೀಷನರ್ ಆಗಿದ್ದು ನಂತರ ಪೋಲೀಸ್ ಅಧಿಕಾರಿಗಳ ಸಂಪರ್ಕ ಬೆಳೆದು ಐ.ಪಿ.ಎಸ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದ್ದು ಹೀಗೆ ತಮ್ಮ ಬದುಕಿನ ಸಾಧನೆಯ ಮೆಟ್ಟಿಲುಗಳನ್ನು ಸ್ವಾರಸ್ಯಕರವಾಗಿ ತೆರೆದಿಟ್ಟರು. ವೀರಪ್ಪನ್ ಸಮಸ್ಯೆ ಉಂಟಾಗಲು ಕಾರಣಗಳನ್ನು ಶ್ರೀರಂಗ ಪಟ್ಟಣ ಒಪ್ಪಂದದ ಕಾಲದಿಂದಲೂ ಎಳೆ ಎಳೆಯಾಗಿ ಬಿಡಿಸಿಟ್ಟ ಅವರು ಗಂಧದ ಕಳ್ಳನಾದ ಅವನು ದಂತ ಕಳ್ಳನಾಗಿ ಅಪಹರಣಕಾರನಾಗಿ ಬೆಳೆದ ಪರಿಯನ್ನು ವಿವರಿಸಿ ತಾವು ವೀರಪ್ಪನ್ ತಂಡದ ವಿರುದ್ದ ಮಾಡಿದ ಹೋರಾಟವನ್ನು ಇನ್ನೂರರಷ್ಟಿದ್ದ ಅವನ ತಂಡವನ್ನು ಐದಕ್ಕೆ ಇಳಿಸಿದ ರೀತಿಯನ್ನು ವಿವರಿಸಿದರು. ಬಳ್ಳಾರಿಯಲ್ಲಿ ನಕ್ಸಲೇಟ್ ಭೀಮ್ಲಾ ನಾಯಕ್‍ ನಿಗ್ರಹವನ್ನೂ ಕೂಡ ಶಂಕರ ಬಿದರಿಯವರು ರೋಚಕವಾಗಿ ನಡೆದ ಘಟನೆಗಳನ್ನು ವಿವರಿಸಿ ತೆರೆದಿಟ್ಟರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ