ಶಿವಮೊಗ್ಗ : ಇಡೀ  ರಾಜ್ಯವನ್ನೆ ತಲ್ಲಣಗೊಳಿಸಿರುವ ಶಿವಮೊಗ್ಗದ (Shivamogga) ಹುಣಸೋಡು (Hunasodu)ಕಲ್ಲುಗಣಿ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಶಿವಮೊಗ್ಗ-ಹಾನಗಲ್ ರಾಜ್ಯ ಹೆದ್ದಾರಿಯ ಅಬ್ಬಲಗೆರೆ ಗ್ರಾಮದಲ್ಲಿದೆ ಈ ಕಲ್ಲು ಕ್ರಶರ್.  ನಿನ್ನೆ ರಾತ್ರಿ ಈ  ಕಲ್ಲುಗಣಿಯಲ್ಲಿ ಪ್ರಬಲ ಸ್ಫೋಟ (Massive explosion) ಸಂಭವಿಸಿತ್ತು. 8 ಕಾರ್ಮಿಕರ ಛಿದ್ರ ಛಿದ್ರ ದೇಹಗಳು ಪತ್ತೆಯಾಗಿತ್ತು. ಕಲ್ಲು ಕ್ರಶರ್ ನಲ್ಲಿ 50 ಕ್ಕೂ ಹೆಚ್ಚು ಜಿಲೆಟಿನ್ ಕಡ್ಡಿಗಳಿತ್ತು ಎನ್ನಲಾಗಿದೆ.  ಸುಮಾರು 100 ಕಿ.ಮಿ. ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದ  ಅನುಭವವಾಗಿದೆ. ಪೊಲೀಸರು ರಕ್ಷಣೆ ಮತ್ತು ಪರಿಹಾರ ಕಾರ್ಯ ತೀವ್ರಗೊಳಿಸಿದ್ದಾರೆ.  ಪ್ರಕರಣದ ತನಿಖೆಯನ್ನೂ ಕೈಗೆತ್ತಿಕೊಂಡಿದ್ದಾರೆ.  


COMMERCIAL BREAK
SCROLL TO CONTINUE READING

ಪ್ರಧಾನಿ ನರೇಂದ್ರ ಮೋದಿ ಸಂತಾಪ:
ಹುಣಸೋಡು ಬ್ಲಾಸ್ಟ್ ನಲ್ಲಿ ಮೃತ ಪಟ್ಟ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಸಂತಾಪ  ವ್ಯಕ್ತ ಪಡಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಲಭ್ಯವಾಗಲಿದೆ. ಕರ್ನಾಟಕ ಸರ್ಕಾರ  ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಪ್ರಧಾನಿ ಕಚೇರಿ (PMO) ಟ್ವೀಟ್ ಮಾಡಿದೆ. 


 Dynamite blast : ಕಲ್ಲುಗಣಿಯಲ್ಲಿ ಮಧ್ಯರಾತ್ರಿಯ ಭೀಕರ ಸ್ಫೋಟ!8 ಕಾರ್ಮಿಕರು ಛಿದ್ರ ಛಿದ್ರ..!


ಮುಖ್ಯಮಂತ್ರಿ ಯಡಿಯೂರಪ್ಪ ದಿಗ್ಭ್ರಮೆ:
ಶಿವಮೊಗ್ಗದ (Shivamogga) ಬಳಿ ನಿನ್ನೆ ರಾತ್ರಿ ಸಂಭವಿಸಿದ ಭಾರಿ ಅನಾಹುತದಲ್ಲಿ ಅನೇಕ ಮಂದಿ ಸಾವನ್ನಪ್ಪಿರುವ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪ (BSY) ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಇದೊಂದು ಆಘಾತಕಾರಿ, ದುರದೃಷ್ಟಕರ ಘಟನೆ ಎಂದಿರುವ ಮುಖ್ಯಮಂತ್ರಿಗಳು, ಮೃತರ ಆತ್ಮಕ್ಕೆ ಶಾಂತಿಯನ್ನು ಕೋರಿ, ಕುಟುಂಬದವರಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. 


ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿದ ಯಡಿಯೂರಪ್ಪ:
 ಇದೇ ವೇಳೆ ಯಡಿಯೂರಪ್ಪ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶ ('A high-level probe) ನೀಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ (strict action) ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. 


MP Renukacharya: ಸಚಿವ ಸ್ಥಾನ ಸಿಗದೆ ಮುನಿಸಿಕೊಂಡಿದ್ದ ರೇಣುಕಾಚಾರ್ಯಗೆ ಸಿಎಂ ಭರ್ಜರಿ ಗಿಫ್ಟ್..!


ತನಿಖೆಗೆ ಕುಮಾರಸ್ವಾಮಿ ಆಗ್ರಹ:
 ಈ  ನಡುವೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (H D Kumaraswamy) ಟ್ವೀಟ್ ಮಾಡಿದ್ದಾರೆ. ಕಲ್ಲು ಕ್ವಾರಿಯಲ್ಲಿ ನಡೆದ ಈ ಸ್ಫೋಟ(Blast) ದುರಂತದ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಬೇಕು. ಬಡ ಕಾರ್ಮಿಕರ ಜೀವ ಹರಣಕ್ಕೆ, ಈ ದುರ್ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಅವಘಡಗಳು ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಹೇಳಿದ್ದಾರೆ. 


 


https://bit.ly/3hDyh4G 
Apple Link - https://apple.co/3hEw2hy 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.