Shivamogga Lokasabha Election Result 20204 : ಶಿವಮೊಗ್ಗದಲ್ಲಿ ನಾಲ್ಕನೇ ಬಾರಿಗೆ ಸಂಸದರಾಗಿ ಬಿಎಸ್ ಯಡಿಯೂರಪ್ಪ ಪುತ್ರ ಬಿ ವೈ ರಾಘವೇಂದ್ರ ಆಯ್ಕೆಯಾಗಿದ್ದಾರೆ. ಬಿ ವೈ ರಾಘವೇಂದ್ರ  ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ವಿರುದ್ದ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಇಲ್ಲಿ ಕೆ ಎಸ್ ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರೂ ಹೇಳಿಕೊಳ್ಳುವಂಥಹ ಫೈಟ್ ನೀಡುವಲ್ಲಿ ಮಾತ್ರ ವಿಫಲರಾಗಿದ್ದಾರೆ.   


COMMERCIAL BREAK
SCROLL TO CONTINUE READING

ಮತ ಎಣಿಕೆ ಆರಂಭದಿಂದಲೂ ಇಲ್ಲಿ ಬಿ ವೈ ರಾಘವೇಂದ್ರ ಮೇಲು ಗೈ ಸಾಧಿಸಿದ್ದರು. ಆರಂಭದಿಂದ ಕೊನೆಯವರೆಗೂ ಮುನ್ನಡೆ ಕಾಯ್ದುಕೊಂಡೆ ಬಂದ ರಾಘವೇಂದ್ರ ಕೊನೆಗೆ ಭಾರೀ ಅಂತರದಿಂದ ವಿಜಯ ಪತಾಕೆ ಹಾರಿಸಿದ್ದಾರೆ. 


ಇದನ್ನೂ ಓದಿ : ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ ಬೊಮ್ಮಾಯಿ ಜಯ


ಕಾರ್ಯಕರ್ತರ ಸಂಭ್ರಮಾಚರಣೆ : 
ಇನ್ನು ತಮ್ಮ ನೆಚ್ಚಿನ ಅಭ್ಯರ್ಥಿ ಗೆಲುವು ಸಾಧಿಸುತ್ತಿದ್ದಂತೆ, ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ.ಎಲ್ಲೆಲ್ಲೂ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದಾರೆ.ಮೋದಿ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಡ್ರಮ್ ಸೆಟ್ ಸೌಂಡ್ ಗೆ  ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ. ಎಲ್ಲಿ ನೋಡಿದರೂ ಪಟಾಕಿ ಸದ್ದು ಕೇಳಿ ಬರುತ್ತಿತ್ತು. ಶಿವಮೊಗ್ಗ ನಗರದ ಬಿಜೆಪಿ ಕಚೇರಿ ಮುಂಭಾಗ ಕಾರ್ಯಕರ್ತರು ಕುಣಿದು ಕುಪ್ಪಳಿಸಿದ್ದಾರೆ.  


ಈ ನಡುವೆ, ಬಿ.ವೈ ರಾಘವೇಂದ್ರಗಾಗಿ ಬೃಹತ್ ಗಾತ್ರದ ಕೊಬ್ಬರಿ ಹಾರ ಸಿದ್ದ ಪಡಿಸಲಾಗಿತ್ತು.  
 
ಇದನ್ನೂ ಓದಿ : ಸಿದ್ದರಾಮಯ್ಯ ತವರು ಕ್ಷೇತ್ರ ಮತ್ತೇ ಕೈ ವಶ: ಸಚಿವರ ಪುತ್ರನಿಗೆ ಜೈ ಎಂದ ಮತದಾರ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.