ಚಾಮರಾಜನಗರ : ಕಳೆದ ಐದು ವರ್ಷದಿಂದ ತಾನು ಮಾಡುವ  ಟೀ ರುಚಿಯನ್ನು ನೆಚ್ಚಿನ ನಟನಿಗೆ ತೋರಿಸಬೇಕೆಂಬ ಅಭಿಮಾನಿಯ ಆಸೆ ಕೊನೆಗೂ ಈಡೇರಿದೆ.  ಐದು ವರ್ಷಗಳ ಅಭಿಮಾನಿಯ  ಕನಸನ್ನು  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನನಸಾಗಿದ್ದಾರೆ. 


COMMERCIAL BREAK
SCROLL TO CONTINUE READING

ಶಿವರಾಜ್ ಕುಮಾರ್  ಅವರ ಅಪ್ಪಟ್ಟ ಅಭಿಮಾನಿ ಮಂಜು. ಚಾಮರಾಜನಗರದಲ್ಲಿ ಟೀ ಅಂಗಡಿ ಇಟ್ಟು ಕೊಂಡಿರುವ ಮಂಜು, ತನ್ನ ಅಂಗಡಿಗೆ ಶಿವರಾಜ್ ಕುಮಾರ್ ಬಂದು ಟೀ ಕುಡಿಯಬೇಕು ಎನ್ನುವ ಕನಸು ಇಟ್ಟು ಕೊಂಡಿದ್ದರು.  ಇದೀಗ ಮಂಜು ಅಂಗಡಿಗೆ ಬಂದಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್,  ಚಹಾ ಕುಡಿದು ಅಭಿಮಾನಿಯ ಆಸೆ ಈಡೇರಿಸಿದ್ದಾರೆ. 


ಇದನ್ನೂ ಓದಿ : Big News: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಭೀಕರ ಕೊಲೆ


ಟೀ ಅಂಗಡಿಯ ಮಂಜು ಕಳೆದ ಒಂದೂವರೆ ದಶಕದಿಂದ ಶಿವರಾಜ್ ಕುಮಾರ್ ಅಭಿಮಾನಿಯಾಗಿದ್ದು, 2016ರಿಂದಲೂ ತಮ್ಮ ಟೀ ಅಂಗಡಿಗೆ ಶಿವಣ್ಣನನ್ನು ಆಹ್ವಾನಿಸುತ್ತಿದ್ದರು. ಆದರೆ ಕಾರ್ಯಕ್ರಮದ ಭರಾಟೆ ನಡುವೆ ಟೀ  ಅಂಗಡಿಗೆ ಭೇಟಿ ಕೊಡಲಾಗಿರಲಿಲ್ಲ. ಪ್ರೀ ರಿಲೀಸ್ ಈವೆಂಟ್ ಸಮಯದಲ್ಲೂ ಅಭಿಮಾನಿ ಆಸೆ ಈಡೇರಿರಲಿಲ್ಲ.  ಆದರೆ ಇಂದು ಅಭಿಮಾನಿಯ ಟೀ ಅಂಗಡಿಗೆ ಭೇಟಿಕೊಟ್ಟು ಚಹಾದ ರುಚಿ ಸವಿದಿದ್ದಾರೆ.  


ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳು:
ಶಿವಣ್ಣ ಬರುತ್ತಿದ್ದಂತೆ ಅಭಿಮಾನಿ ಸಾಗರವೇ ಹರಿದು ಬಂದಿದೆ. ಸ್ಥಳದಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡುವಂತಾಯಿತು. ಕೆಲವರಿಗೆ ಲಾಠಿ ರುಚಿಯನ್ನೂ ತೋರಿಸಬೇಕಾಯಿತು.


ಇದನ್ನೂ ಓದಿ : Dam Water Level: ಕೊಡಗಿನಲ್ಲಿ ಧಾರಾಕಾರ ಮಳೆ; KRS ಡ್ಯಾಂ ಭರ್ತಿಗೆ 13 ಅಡಿ ಬಾಕಿ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ