ಶಿವಮೊಗ್ಗ : ಶಿವಮೊಗ್ಗ ಜಿಲ್ಲೆ ಹುಣಸೋಡು ಗಣಿ ಸ್ಫೋಟ (Hunasodu massive blast) ಪ್ರಕರಣದಲ್ಲಿ ಪೊಲೀಸರು ಈಗಾಗಲೇ ತೀವ್ರಗತಿಯಲ್ಲಿ ತನಿಖೆ ಮುಂದುವರಿಸಿದ್ದಾರೆ.   ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲೆಟಿನ್ ಪೂರೈಕೆದಾರ, ಗಣಿ ಮಾಲೀಕ, ಜಾಮೀನಿನ ಮೂಲ ಮಾಲೀಕರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಇತ್ತೀಚಿನ ಮಾಹಿತಿ ಪ್ರಕಾರ ಜಿಲೆಟಿನ್ ಪೂರೈಕೆ ಆರೋಪದ ಮೇಲೆ ನರಸಿಂಹ ಎಂಬಾತನನ್ನು ಪೊಲೀಸರು (Police)ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ಕ್ರಷರ್ ಪಾಲುದಾರ ಸುಧಾಕರ್ ಎಂಬಾತನನ್ನೂ ಬಂಧಿಸಲಾಗಿದೆ. ಜಮೀನಿನ ಮೂಲ ಮಾಲೀಕ ಅವಿನಾಶ್ ಕುಲಕರ್ಣಿ ಕೂಡಾ ಕಂಬಿ ಎಣಿಸಬೇಕಾಗಿ ಬಂದಿದೆ. 
ಕಲ್ಲುಕ್ರಶರ್ ಪಾಲುದಾರಿಕೆಯಲ್ಲಿ ನಡೆಯುತ್ತಿತ್ತು ಎನ್ನಲಾಗಿದೆ. 


ಇದನ್ನೂ ಓದಿ : Dynamite blast : ಕಲ್ಲುಗಣಿಯಲ್ಲಿ ಮಧ್ಯರಾತ್ರಿಯ ಭೀಕರ ಸ್ಫೋಟ!8 ಕಾರ್ಮಿಕರು ಛಿದ್ರ ಛಿದ್ರ..!


ಇದೇ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ(BS Yediyurappa) ಶಿವಮೊಗ್ಗ ಜಿಲ್ಲಾಡಳಿತದೊಂದಿಗೆ ಸತತ ಸಂಪರ್ಕದಲ್ಲಿದ್ದಾರೆ. ಗಣಿ ಸಚಿವ ಮುರುಗೇಶ್ ನಿರಾಣಿ (Murugesh Nirani) ಅವರೊಂದಿಗೂ ಚರ್ಚಿಸಿದ್ದಾರೆ. ಘಟನಾ ಸ್ಥಳಕ್ಕೆ ತೆರಳುವಂತೆ ನಿರಾಣಿಗೆ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. 


20 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ : 
ಹುಣಸೋಡಿನ 20 ಎಕರೆ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಯುತಿತ್ತು ಎನ್ನಲಾಗಿದೆ. ಬ್ಲಾಸ್ಟ್ (Blast) ಎಷ್ಟೊಂದು ಪ್ರಬಲವಾಗಿತ್ತು ಎಂದರೆ ಕಬ್ಬಿಣದ ರಾಡ್ ಗಳು ಕೂಡಾ ಪೀಸ್ ಪೀಸ್ ಆಗಿವೆ.  ಸುತ್ತ ಮುತ್ತ ಮನೆಗಳ ಛಾವಣಿ ಹೆಂಚು ಹಾರಿಹೋಗಿವೆ. ದೇಹಗಳು ಛಿದ್ರ ಛಿದ್ರವಾಗಿ ಬಿದ್ದತ್ತು


ಇದನ್ನೂ ಓದಿ SHIMOGA BLAST : ಪ್ರಧಾನಿ ಮೋದಿ ಸಂತಾಪ, ಸಿಎಂ ದಿಗ್ಭ್ರಮೆ, ತನಿಖೆಗೆ ಕುಮಾರಸ್ವಾಮಿ ಪಟ್ಟು


ರಾಹುಲ್ ಗಾಂಧಿ ಟ್ವೀಟ್:
ಮಲೆನಾಡನ್ನೇ ಬೆಚ್ಚಿ ಬೀಳಿಸಿದ ಸ್ಫೋಟದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಟ್ವೀಟ್ ಮಾಡಿದ್ದಾರೆ.  ಘಟನೆ ಬಗ್ಗೆ ಸಂತಾಪ ವ್ಯಕ್ತ ಪಡಿಸಿದ್ಧಾರೆ. ಇಂಥಹ ಘಟನೆ ನಡೆಯದಂತೆ ತಡೆಯಬೇಕು ಎಂದು ರಾಹುಲ್ ಗಾಂಧಿ ಸೂಚಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.