ಸಚಿವರಾದ ಬಳಿಕ ಶಿವರಾಜ ತಂಗಡಗಿ ತವರು ಜಿಲ್ಲೆಗೆ ಮೊದಲ ಭೇಟಿ: ಹಾರದ ಬದಲು ಪುಸ್ತಕದಿಂದ ಸ್ವಾಗತ
ನೂತನ ಸರ್ಕಾರದಲ್ಲಿ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಶಿವರಾಜ ತಂಗಡಗಿ ಅವರು ಮೊಟ್ಟಮೊದಲನೇ ಬಾರಿಗೆ ಮೇ 29ರಂದು ತವರು ಜಿಲ್ಲೆ ಕೊಪ್ಪಳಕ್ಕೆ ಆಗಮಿಸಿದರು.
ಕೊಪ್ಪಳ: ನೂತನ ಸರ್ಕಾರದಲ್ಲಿ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಶಿವರಾಜ ತಂಗಡಗಿ ಅವರು ಮೊಟ್ಟಮೊದಲನೇ ಬಾರಿಗೆ ಮೇ 29ರಂದು ತವರು ಜಿಲ್ಲೆ ಕೊಪ್ಪಳಕ್ಕೆ ಆಗಮಿಸಿದರು.
ಪೂರ್ವ ನಿಗದಿಯಂತೆ ಸಚಿವರು ಮೊದಲಿಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿಗೆ ತೆರಳಿ ಅಲ್ಲಿನ ಚನ್ನಬಸವ ತಾತನವರ ಮಠ ಹಾಗೂ ಶ್ರೀ ದುರ್ಗಾದೇವಿ ದೇವಸ್ಥಾನ ಮತ್ತು ಇನ್ನೀತರ ಧಾರ್ಮಿಕ ಸ್ಥಳಗಳಿಗೆ ಪತ್ನಿಯೊಂದಿಗೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು. ಬಳಿಕ ಸಚಿವರು ಸ್ವ-ಕ್ಷೇತ್ರ ಕನಕಗಿರಿಗೆ ತೆರಳಿದರು.
ಇದನ್ನೂ ಓದಿ: "ಅವರಿಗೆ ಇವರಿಗೆ ಚಾಡಿ ಹೇಳಿಕೊಂಡು ಬದುಕುತ್ತೇನೆ ಎನ್ನುವವರನ್ನು ಮಟ್ಟ ಹಾಕುತ್ತೇನೆ"
*ಪುಸ್ತಕ ನೀಡಿ ಸ್ವಾಗತ:* ಕಾರ್ಯಕರ್ತರು, ಅಭಿಮಾನಿಗಳು ಸರಳವಾಗಿ ಸ್ವಾಗತಿಸಬೇಕು. ಹೂವಿನ ಹಾರ, ಸನ್ಮಾನದ ಬದಲು ಪುಸ್ತಕ ನೀಡಿ ಸ್ವಾಗತಿಸಬೇಕು ಎಂದು ಸಚಿವರು ಅಪೇಕ್ಷೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ಥಳೀಯ ಕಾರ್ಯಕರ್ತರು ಮತ್ತು ಅವರ ಅಭಿಮಾನಿಗಳು ಸಚಿವರಾದ ಶಿವರಾಜ ತಂಗಡಗಿ ಅವರಿಗೆ ಪುಸ್ತಕ ನೀಡಿ ಆತ್ಮೀಯ ಸ್ವಾಗತ ಕೋರಿದರು.
ಇದನ್ನೂ ಓದಿ: ನಮ್ಮ ಸರ್ಕಾರ ಪೊಲೀಸ್ ಇಲಾಖೆಯನ್ನ ʼಕೇಸರಿಕರಣʼ ಮಾಡೋಕೆ ಬಿಡಲ್ಲ
*ಯಾವ ಖಾತೆ:* ಮೇ 28ರಂದು ಖಾತೆ ಹಂಚಿಕೆ ಮಾಡಿ ಅಧಿಸೂಚನೆಯನ್ನು ಹೊರಡಿಸಿದ್ದು, ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಿವರಾಜ ತಂಗಡಗಿ ಅವರು ನೂತನ ಸರ್ಕಾರದಲ್ಲಿ ಸಚಿವ ಸಂಪುಟಕ್ಕೆ ಸೇರಿದ ಬಳಿಕ ಅವರಿಗೆ ಹಿಂದುಳಿದ ವರ್ಗಗಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಖಾತೆ ದೊರೆತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ