ಚಾಮರಾಜನಗರ: ಓದಿರೋದು ಒಂದು ಕೊಡುತ್ತಿದ್ದ ಚಿಕಿತ್ಸೆ ಮತ್ತೊಂದು. ಹೀಗೇ ಮಾಡಿ ಜನರ ಜೀವದೊಟ್ಟಿಗೆ ಚೆಲ್ಲಾಟ ಆಡುತ್ತಿದ್ದ ನಕಲಿ ಅಲೋಪತಿ ವೈದ್ಯರಿಗೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಬಿಸಿ‌ ಮುಟ್ಟಿಸಿ ಕ್ಲಿನಿಕ್ ಗಳನ್ನು ಬಂದ್ ಮಾಡಿಸಿರುವ ಘಟನೆ ಹನೂರು ತಾಲೂಕಿನ ಕೌದಳ್ಳಿಯಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಹನೂರು ತಾಲೂಕಿನ ನಕಲಿ ಕ್ಲಿನಿಕ್ ಗಳ ಮೇಲೆ  ಡಿಎಚ್ಒ ಡಾ.ವಿಶ್ವೇಶ್ವರಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಕೌದಳ್ಳಿ ಗ್ರಾಮದಲ್ಲಿ ಇರುವ ಆದಮ್ ಕ್ಲಿನಿಕ್,  ಜನತಾ ಕ್ಲಿನಿಕ್ ಹಾಗೂ ದೀಪಾ ಕ್ಲಿನಿಕ್ ಗಳಿಗೆ ನೋಟಿಸ್ ಜಾರಿ ಮಾಡಿ ನಕಲಿ ಕ್ಲಿನಿಕ್ ಗಳನ್ನು ಬಂದ್ ಮಾಡಿಸಿದ್ದಾರೆ‌.


ಇದನ್ನೂ ಓದಿ- "ಬಂಡವಾಳ ಹೂಡಿಕೆಗಳ ಒಪ್ಫಂದಗಳು ಕಾರ್ಯಗತಗೊಳ್ಳಲು ಸಹಕಾರ ನೀಡಲು ಸರ್ಕಾರ ಸಿದ್ಧ”


ಹನೂರು ತಾಲೂಕಿನ ವಿವಿಧಡೆ ನಕಲಿ ಕ್ಲಿನಿಕ್ ಗಳ ಹಾವಳಿ ಹೆಚ್ಚಾಗಿದೆ ಎಂದು ಸಾರ್ವಜನಿಕರು ದೂರಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ. ‌ಅಜ್ಜೀಪುರ, ರಾಮಾಪುರ, ಕೂಡ್ಲೂರು  ಮತ್ತು ಹೂಗ್ಯಂ ಇನ್ನಿತರ ಕಡೆಗಳಲ್ಲಿ ಇರುವ ಕ್ಲಿನಿಕ್ ಗಳಿಗೆ ಆರೋಗ್ಯ ಅಧಿಕಾರಿಗಳ‌ ತಂಡ  ಭೇಟಿ ನೀಡಿ  ಪರಿಶೀಲಿಸಿದ್ದಾರೆ. 


ಇದನ್ನೂ ಓದಿ- "ಶ್ರೀರಾಮುಲು ಮಲಗಿದ್ದಾರೆ ಅಂದ್ರೆ ರಾಮರಾಜ್ಯದ ಪರಿಸ್ಥಿತಿ‌ ಏನೆಂದು ಅರ್ಥೈಸಿಕೊಳ್ಳಿ"


ಪರಿಶೀಲನೆ ವೇಳೆ ಲೈಸೆನ್ಸ್ ಒಬ್ಬರದ್ದಾದರೇ ಚಿಕಿತ್ಸೆ ಕೊಡುವವರು ಮತ್ತೊಬ್ಬರು, ಆಯುಷ್ ವೈದ್ಯರು ಅಲೋಪತಿ ಚಿಕಿತ್ಸೆ ಕೊಡುತ್ತಿರುವುದು ಬೆಳಕಿಗೆ ಬಂದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.