ಬೆಂಗಳೂರು: ಸರ್ಕಾರದ 5 ಗ್ಯಾರಂಟಿ ಭರವಸೆ ಯೋಜನೆಗೆ ಕಾದು ಕುಳಿತಿದ್ದ ಜನರಿಗೆ ಬಹಳಷ್ಟು ಸಂಕಷ್ಟ ಎದುರಾಗಿದೆ.‌ ಬಿಪಿಎಲ್, ಎಪಿಎಲ್ ಕಾರ್ಡ್ ಮಾಡುವ ಆಕಾಂಕ್ಷಿಗಳಿಗೆ ಪಡಿತರ ಚೀಟಿ ಮಾಡಿಸಲು ರಾಜ್ಯದ ಜನರು ಅಲ್ಲಿ ಇಲ್ಲಿ ಪರದಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.


COMMERCIAL BREAK
SCROLL TO CONTINUE READING

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿಗಳ ಸದುಪಯೋಗ ಪಡೆದುಕೊಳ್ಳಲು ರಾಜ್ಯದ ಜನರು ಕಾದು ಕುಳಿತಿದ್ದಾರೆ. ಪಡಿತರ ಚೀಟಿ ಮಾಡಿಸಲು ಮುಂದಾಗಿದ್ದಾರೆ..ಆದರೆ ಇದೂವರೆಗೂ ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿ ಅರ್ಜಿ ಪ್ರಕ್ರಿಯೆ ಆರಂಭವಾಗಿಲ್ಲ.ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂನ್ ಮೊದಲ ವಾರ ಅವಕಾಶ ನೀಡುವುದಾಗಿ ಆಹಾರ ಇಲಾಖೆ ಹೇಳಿತ್ತು.ಈಗ ಜೂನ್ ಮೊದಲ ವಾರ, ಎರಡನೇ ವಾರ ಮುಗಿದು ಮೂರನೇ ವಾರಕ್ಕೆ ಕಾಲಿಟ್ಟಿದ್ದೇವೆ.ಆದ್ರೂ ಆನ್ ಲೈನ್ ಪೋರ್ಟಲ್ ಓಪನ್ ಆಗ್ತಿಲ್ಲ.


ಇದನ್ನೂ ಓದಿ: ಪಾವಗಡ ಸೋಲಾರ್ ಪಾರ್ಕ್- ನವೀಕರಿಸಬಹುದಾದ ಇಂಧನ ಮತ್ತು ಸುಸ್ಥಿರ ಅಭಿವೃದ್ಧಿಯ ಬದ್ಧತೆಗೆ ಸಾಕ್ಷಿ


ಸರ್ಕಾರದಿಂದ ಯಾವುದೇ ಸೂಚನೆ ಬರದ ಹಿನ್ನೆಲೆ ಪೋರ್ಟಲ್ ಓಪನ್ ಮಾಡಿಲ್ಲವೆಂದು ಹೇಳಲಾಗ್ತಿದೆ.ಚುನಾವಣೆ ನೀತಿ ಸಂಹಿತೆ ಕಾರಣ ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಕೆ ಮತ್ತು ವಿತರಣೆ ಕಾರ್ಯ ಸ್ಥಗಿತಗೊಳಿಸಲಾಗಿತ್ತು.ವೆಬ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಕೆ ವಿಭಾಗ ಲಾಕ್ ಮಾಡಲಾಗಿದ್ದು,ಚುನಾವಣೆ ಮುಗಿದು ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಓಪನ್ ಮಾಡಿಲ್ಲ.ಗೃಹಲಕ್ಷ್ಮಿ ಯೋಜನೆ ಸೌಲಭ್ಯ ಪಡೆಯಲು ಹೆಚ್ಚಿನ ಸಂಖ್ಯೆಯ ಜನ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.ಆದರೆ, http://ahara.kar.nic ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಕೆ ವಿಭಾಗ ಲಾಕ್ ಆಗಿದೆ.‌ ಸರ್ಕಾರದ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯಲು ಅನರ್ಹರು ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುತ್ತಾರೆ ಎನ್ನುವ ಕಾರಣಕ್ಕೆ ವಿಳಂಬ ಮಾಡಲಾಗುತ್ತಿದೆ ಅಂತಾ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.


ಇದನ್ನೂ ಓದಿ: ಮಳೆಗಾಲದ ಸಿದ್ದತೆ ಕುರಿತು ಮುಖ್ಯ ಆಯುಕ್ತರಿಂದ ಹಿರಿಯ ಅಧಿಕಾರಿಗಳ ಜೊತೆ ಸಭೆ


ಬಿಪಿಎಲ್ ಕಾರ್ಡ್ ಮಾಡಿಸಲು ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ. ಮೀರಬಾರದು. ಎಪಿಎಲ್ ಕಾರ್ಡ್ ಗಳಿಗೆ ಯಾವುದೇ ನಿರ್ಬಂಧಗಳಿಲ್ಲ.ಗೃಹಲಕ್ಷ್ಮೀ ಯೋಜನೆ ಲಾಭ ಪಡೆಯಲು ಜನರು ಪಡಿತರ ಚೀಟಿ ಮಾಡಿಸಲು ಮುಂದಾಗ್ತಿದ್ರೆ,ಆನ್ ಲೈನ್ ಪೋರ್ಟಲ್ ಓಪನ್ ಆಗ್ದೆ ಇರೋದು ಜನರಿಗೆ ನಿರಾಸೆ ಉಂಟುಮಾಡಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.