ಗೃಹ ಸಚಿವರು ಆಗಮಿಸಬೇಕಾದ ದಾರಿಯಲ್ಲಿ ಶಾರ್ಟ್ ಸರ್ಕ್ಯೂಟ್; ಬದಲಾದ ಮಾರ್ಗ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅರಮನೆ ಮೈದಾನಕ್ಕೆ ಆಗಮಿಸುವ ಮಾರ್ಗದಲ್ಲಿ ಶಾರ್ಟ್ ಸರ್ಕ್ಯೂಟ್ ಆದ ಹಿನ್ನಲೆಯಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ.
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅರಮನೆ ಮೈದಾನಕ್ಕೆ ಆಗಮಿಸುವ ಮಾರ್ಗದಲ್ಲಿ ಶಾರ್ಟ್ ಸರ್ಕ್ಯೂಟ್ ಆದ ಹಿನ್ನಲೆಯಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ.
ಆಗಿದ್ದೇನು?
ಮೌಂಟ್ ಕಾರ್ಮೆಲ್ ಕಾಲೇಜು ಬಳಿ ಅರೆ ಕ್ಷಣ ಆತಂಕ ಸೃಷ್ಟಿ ಮಾಡಿದ ಸ್ಫೋಟದ ಶಬ್ದ ಕಾಲೇಜು ವಿದ್ಯಾರ್ಥಿಗಳು ಅಲ್ಲಿಂದ ಭಯಗೊಂಡು ಓಡಿದ್ರು.ಸ್ಥಳದಲ್ಲಿದ್ದ ಪೊಲೀಸರ ಪ್ರಕಾರ ಕರೆಂಟ್ ಶಾರ್ಟ್ ಸರ್ಕ್ಯೂಟ್ ಹಿನ್ನೆಲೆ ಸ್ಫೋಟದ ಶಬ್ದ ಕೇಳಿತು ಎನ್ನಲಾಯಿತು.ಗೃಹ ಸಚಿವ ಅಮಿತ್ ಶಾ ಅರಮನೆ ಮೈದಾನದ ಕಾರ್ಯಕ್ರಮ ವೇದಿಕೆಯ ಕೆಲ ದೂರದಲ್ಲೇ ಈ ಘಟನೆ ನಡೆದಿದೆ.
ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟು : ರಾತ್ರೋರಾತ್ರಿ ಶ್ರೀಲಂಕಾ ಅಧ್ಯಕ್ಷರ ಮನೆ ಮುಂದೆ ಭಾರಿ ಪ್ರತಿಭಟನೆ
ಪರಿಸ್ಥಿತಿ ಸರಿ ಇದೆ: ಕಮಲ್ ಪಂತ್
ಈ ಘಟನೆ ಜರುಗಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಕಮೀಷನರ್ ಕಮಲ್ ಪಂತ್ ಸ್ಥಳ ಪರಿಶೀಲನೆ ನಡೆಸಿದರು.ನಂತರ ಮಾತನ್ನಾಡಿದ ಇವರು, ಬೆಸ್ಕಾಂ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ.ಸ್ಥಳದಲ್ಲಿ ಫ್ಲಿಕರಿಂಗ್ ನಡೆಯುತ್ತಿತ್ತು,ಈಗ ಪರಿಸ್ಥಿತಿ ಸರಿ ಇದೆ.ಇದು ದಾರಿದೀಪದ ಸಮಸ್ಯೆ, ಈಗ ಏನು ಸಮಸ್ಯೆ ಇಲ್ಲ ಎಂದರು.
ಇದನ್ನೂ ಓದಿ: ನ್ಯಾಯಾಲಯ ತಲುಪಿದ ‘ಮೇಕೆ’ ಪ್ರಕರಣ!: ನ್ಯಾಯಾಧೀಶರ ತೀರ್ಪು ಏನು ಗೊತ್ತಾ?
ಕೇಂದ್ರ ಗೃಹ ಸಚಿವರ ಆಗಮನ ದಾರಿಯಲ್ಲಿ ಪರಿಶೀಲನೆ ನಡೆದಿಲ್ವಾ? ಎಂಬ ಜೀ ಕನ್ನಡ ನ್ಯೂಸ್ ಪ್ರಶ್ನೆಗೆ ಉತ್ತರ ನೀಡಿದ ಆಯುಕ್ತ ಪಂತ್ ಪರಿಶೀಲನೆ ಆಗಿತ್ತು, ಈಗ ಸಮಸ್ಯೆ ಕಂಡುಬಂದಿತು ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.