ಕಾಯಕ ಯೋಗಿಗೊಂದು ನಮನ – ಸಿದ್ದಗಂಗೆಯಲ್ಲಿ ಶಿವಕುಮಾರಸ್ವಾಮಿಗಳ ಪುಣ್ಯ ಸ್ಮರಣೆ
ತುಮಕೂರಿನ ಸಿದ್ದಗಂಗೆಯ ಮಠದ ಸ್ವಾಮೀಜಿ ಶಿವಕುಮಾರಸ್ವಾಮಿಗಳು ಲಿಂಗೈಕ್ಯರಾಗಿ ಇಂದಿಗೆ ಎರಡು ವರ್ಷ. ಹಾಗಾಗಿ ಸಿದ್ದಗಂಗೆಯಲ್ಲಿ ಇಂದು ಎರಡನೇ ವರ್ಷದ ಪುಣ್ಯ ಸ್ಮರಣೆ ನೆರವೇರುತ್ತಿದೆ.
ಸಿದ್ದಗಂಗೆ, ತುಮಕೂರು : ನಡೆದಾಡುವ ದೇವರು, ಸಿದ್ದಗಂಗೆಯ ಬೆಳಕು, ತ್ರಿವಿಧ ದಾಸೋಹಿ ತುಮಕೂರಿನ ಸಿದ್ದಗಂಗೆಯ ಮಠದ (Siddaganga Matt) ಸ್ವಾಮೀಜಿ ಶಿವಕುಮಾರಸ್ವಾಮಿಗಳು (Sri Shivakumara Swamiji) ಲಿಂಗೈಕ್ಯರಾಗಿ ಇಂದಿಗೆ ಎರಡು ವರ್ಷ. ಹಾಗಾಗಿ ಸಿದ್ದಗಂಗೆಯಲ್ಲಿ ಇಂದು ಎರಡನೇ ವರ್ಷದ ಪುಣ್ಯ ಸ್ಮರಣೆ (death anniversary) ನೆರವೇರುತ್ತಿದೆ. ಶ್ರೀಗಳ ಪುಣ್ಯ ಸ್ಮರಣೆಗೆ ಸಕಲ ತಯಾರಿ ನಡೆದಿದೆ. ಭಕ್ತರು ಅಪಾರ ಸಂಖ್ಯೆಯಲ್ಲಿ ತುಮಕೂರಿಗೆ ಆಗಮಿಸುತ್ತಿದ್ದಾರೆ.
ಮುಂಜಾನೆಯಿಂದಲೇ ಗದ್ದುಗೆ ದರ್ಶನ :
ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯುತ್ತಿವೆ. ಸಹಸ್ರ ಸಂಖ್ಯೆಯಲ್ಲಿ ಭಕ್ತರು ಸಿದ್ದಗಂಗೆಗೆ ಧಾವಿಸುತ್ತಿದ್ದಾರೆ. ಬೆಳಗ್ಗಿನಿಂದಲೇ ಗದ್ದುಗೆ ದರ್ಶನ ಪಡೆಯುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ (BS Yediyurappa) ಸೇರಿದಂತೆ 30 ಸಾವಿರಕ್ಕೂ ಹೆಚ್ಚು ಭಕ್ತರು (Devotees) ಸಿದ್ದಗಂಗೆಗೆ ಹರಿದು ಬರುವ ಸಾಧ್ಯತೆಗಳಿವೆ. ಬೆಳಗ್ಗಿನಿಂದಲೇ ಶ್ರೀಗಳ ಗದ್ದುಗೆ (‘Gadduge’) ಪೂಜೆ ನಡೆಯುತ್ತಿದೆ. ಶ್ರೀಗಳ ಭಾವಚಿತ್ರದ ಭವ್ಯ ಮೆರವಣಿಗೆಯೂ ಸಾಗಲಿದೆ. ಬೆಳ್ಳಿರಥದ ಮೆರವಣಿಗೆಯೂ ಸಾಗಲಿದೆ. 11 ಗಂಟೆಯ ಹೊತ್ತಿಗೆ ಯಡಿಯೂರಪ್ಪ ಆಗಮಿಸಲಿದ್ದಾರೆ.
ಇದನ್ನೂ ಓದಿ : ಮೃತರ ಹೆಸರಿನಲ್ಲಿ Pension, Ration ಪಡೆಯುತ್ತಿರುವವರಿಗೆ ಶಾಕ್ !
ದಾಸೋಹ ಸಂಭ್ರಮ :
30 ಸಾವಿರಕ್ಕೂ ಅಧಿಕ ಭಕ್ತರು ಸಿದ್ದಗಂಗೆಗೆ ಹರಿದು ಬರುವ ಸಾಧ್ಯತೆಗಳಿವೆ. ಬಂದವರೆಲ್ಲರಿಗೂ ದಾಸೋಹಕ್ಕೆ ವ್ಯವಸ್ಥೆ ಮಾಡಲಾಗಿದೆ. ದಾಸೋಹಕ್ಕೆ ಖಾರ ಬೂಂದಿ, ಸಿಹಿ ಬೂಂದಿ, ಪಾಯಸ, ಚಿತ್ತಾನ್ನ, ಅನ್ನ, ಸಾಂಬಾರು, ವಿವಿಧ ಪಲ್ಯ ಜೊತೆಗೆ ವಿವಿಧ ರೀತಿಯ ಭಕ್ಷ್ಯಗಳನ್ನು ವ್ಯವಸ್ಥೆ ಮಾಡಲಾಗಿದೆ. ಸಿದ್ದಗಂಗೆಗೆ ಆಗಮಿಸಿದ ಭಕ್ತರೆಲ್ಲರೂ ದಾಸೋಹ (Dasoha) ಸ್ವೀಕರಿಸುವುದು ಇಲ್ಲಿನ ಸಂಪ್ರದಾಯ.
ದಾಸೋಹ ದಿನವನ್ನಾಗಿ ಆಚರಿಸಲು ಒತ್ತಾಯ :
ಶ್ರೀ ಶಿವಕುಮಾರ ಸ್ವಾಮೀಜಿಗಳ (Shivakumara Swamiji) ಲಿಂಗೈಕ್ಯ ದಿನವನ್ನು ಸರ್ಕಾರ ದಾಸೋಹ ದಿನ (Dasoha Day) ಎಂದು ಘೋಷಣೆ ಮಾಡಬೇಕು ಎಂದು ಹೊನ್ನಮ್ಮಗವಿ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ. ಡಿ. 21ರ ದಿನವನ್ನು ದಾಸೋಹ ದಿನವೆಂದು ಘೋಷಣೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ರುದ್ರಮುನಿ ಸ್ವಾಮೀಜಿ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: B.S.Yediyurappa: ನೂತನ ಸಚಿವರಿಗೆ 'ಭರ್ಜರಿ ಸಿಹಿ ಸುದ್ದಿ ನೀಡಿದ ' ಸಿಎಂ ಯಡಿಯೂರಪ್ಪ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.