ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ: ಡಾ.ಪರಮೇಶ್
ಶ್ರೀಗಳ ಕೈಕಾಲುಗಳ ಚಲನೆಯನ್ನೂ ಗಮನಿಸಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಶ್ರೀಗಳು ಇನ್ನಷ್ಟು ಚೇತರಿಸಿಕೊಳ್ಳಲಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ತುಮಕೂರು: ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಇಂದು ಬೆಳಿಗ್ಗೆ 3 ಗಂಟೆಗಳ ಕಾಲ ಸ್ವಾಭಾವಿಕವಾಗಿ ಉಸಿರಾಡಿದ್ದಾರೆ ಎಂದು ಡಾ.ಪರಮೇಶ್ ತಿಳಿಸಿದ್ದಾರೆ.
ಶ್ರೀಗಳ ಆರೋಗ್ಯ ಸ್ಥಿತಿಯ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆಗಿಂತ ಇಂದು ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ರಕ್ತ ಪರೀಕ್ಷೆ ನಂತರ ಸೋಂಕಿನ ಅಂಶ ಕಡಿಮೆಯಾಗಿದೆ. ದೇಹದಲ್ಲಿ ಪ್ರೊಟೀನ್ ಅಂಶ ಒಂದು ಪರ್ಸೆಂಟ್ ಹೆಚ್ಚಾಗಿದ್ದು ನಮ್ಮ ನಿರೀಕ್ಷೆಯಷ್ಟು ಪ್ರೊಟೀನ್ ಅಂಶ ಹೆಚ್ಚಾಗುತ್ತಿಲ್ಲ ಎಂದರು.
ಸೋಂಕಿನ ಅಂಶ ಕಡಿಮೆ ಆಗಿದ್ದು, ವೆಂಟಿಲೇಟರ್ ಸಹಾಯವಿಲ್ಲದೆ ಶ್ರೀಗಳು ಉಸಿರಾಡುತ್ತಿದ್ದಾರೆ. ಉಸಿರಾಟ ಕಷ್ಟವಾದಾಗ ಮಾತ್ರವೇ ವೆಂಟಿಲೇಟರ್ ತೊಡಿಸಲಾಗುತ್ತಿದೆ. ಅವರ ಕೈಕಾಲುಗಳ ಚಲನೆಯನ್ನೂ ಗಮನಿಸಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಶ್ರೀಗಳು ಇನ್ನಷ್ಟು ಚೇತರಿಸಿಕೊಳ್ಳಲಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.