ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಶಸ್ತ್ರ ಚಿಕಿತ್ಸೆ ಯಶಸ್ವಿ
ಬೆಂಗಳೂರು: ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ತುಮಕೂರಿನ ಶ್ರೀ ಸಿದ್ದಗಂಗಾ ಶ್ರೀಗಳ ಶ್ರೀಗಳಿಗೆ ಅಳವಡಿಸಲಾಗಿದ್ದ ಸ್ಟಂಟ್‌ಗಳನ್ನು ಸ್ವಚ್ಛಗೊಳಿಸುವ ಕಾರ್ಯ ಯಶಸ್ವಿಯಾಗಿದ್ದು, ಶ್ರೀಗಳನ್ನು ಆಪರೇಷನ್ ಥಿಯೇಟರ್‌ನಿಂದ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪಿತ್ತನಾಳ ಬ್ಲಾಕ್ ಸೇರಿದಂತೆ ಶ್ರೀಗಳಿಗೆ ಈಗಾಗಲೇ 8 ಸ್ಟಂಟ್‌ಗಳನ್ನು ಅಳವಡಿಸಿದ್ದು, ಅವುಗಳಲ್ಲಿನ ಬ್ಲಾಕೇಜ್ ತೆರವುಗೊಳಿಸುವ ಉದ್ದೇಶದಿಂದ ಇಂದು ಬೇಕಿಗ್ಗೆ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಹೊಸದಾಗಿ ಸ್ಟಂಟ್‌ಗಳನ್ನು ಅಳವಡಿಸುವುದು ಕಷ್ಟವಾದ ಕಾರಣ ಹಾಕಿದ್ದ ಸ್ಟಂಟ್‌ಗಳಲ್ಲಿ ಕಂಡು ಬಂದ ಸ್ವಲ್ಪ ಪ್ರಮಾಣದಲ್ಲಿನ ಬ್ಲಾಕ್ ಅನ್ನು ಸ್ವಚ್ಛಗೊಳಿಸಲಾದ್ದು, ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಸಿದ್ದಗಂಗಾ ಶ್ರೀಗಳ ಪಿತ್ತನಾಳದ ಸೋಂಕು ಕಡಿಮೆಯಾಗಿದ್ದು, ರಕ್ತದೊತ್ತಡ ಸಾಮಾನ್ಯವಾಗಿದೆ. ಸ್ಟಂಟ್ ಸ್ವಚ್ಛಗೊಳಿಸಿದ ಕಾರಣ ಪಿತ್ತನಾಳ ಬ್ಲಾಕೇಜ್ ಕಡಿಮೆಯಾಗಿದೆ. ಎಂಡೋಸ್ಕೋಪಿ ಮೂಲಕ ಪಿತ್ತಕೋಶದ ಸ್ಟಂಟ್ ಬ್ಲಾಕ್‌ನ್ನು ಕ್ಲೀನ್ ಮಾಡಲಾಗಿದ್ದು, ಅವರಿಗೆ ಪ್ರಜ್ಞೆ ಬಂದ ನಂತರ ವಾರ್ಡ್ಗೆ ಶಿಫ್ಟ್ ಮಾಡಲಾಗುವುದು ಎಂದು ಆಸ್ಪತ್ರೆ ವೈದ್ಯ ಡಾ.ರವೀಂದ್ರ ತಿಳಿಸಿದ್ದಾರೆ.