ಬೆಂಗಳೂರು: ಶಿರಾ ಚುನಾವಣೆ ಸೋಲಿಗೆ ಡಿ.ಕೆ. ಶಿವಕುಮಾರ್ ಮತ್ತು ನಿಮ್ಮೊಳಗಿರುವ ವೈಮನಸ್ಸೇ ಕಾರಣ ಹೊರತು ಮತದಾರರಲ್ಲ. ಕೈಲಾಗದವನು ಮೈಪರಚಿಕೊಂಡಂತೆ ಆಗಿದೆ ನಿಮ್ಮ ಸದ್ಯದ ಪರಿಸ್ಥಿತಿ. ದೂರುವುದನ್ನು ಬಿಟ್ಟು ಅವಲೋಕನ ಮಾಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಬಿಜೆಪಿ ಭರ್ಜರಿ ಟಾಂಗ್ ನೀಡಿದೆ.


COMMERCIAL BREAK
SCROLL TO CONTINUE READING

ಮತಗಳನ್ನು ಖರೀದಿ ಮಾಡಿ ಬಿಜೆಪಿ ಶಿರಾದಲ್ಲಿ ಗೆಲುವು ಸಾಧಿಸಿದೆ ಎಂಬ ಸಿದ್ದರಾಮಯ್ಯ(Siddaramaiah)ನವರ ಹೇಳಿಕೆಗೆ ಬಿಜೆಪಿ ಕರ್ನಾಟಕ ತನ್ನ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದೆ. ನಿಮ್ಮ ವೈಫಲ್ಯವನ್ನು ಬೇರೆಯವರ ಹೆಗಲ ಮೇಲೆ ಹಾಕಿ ನುಣುಚಿಕೊಳ್ಳುವ ನಿಮ್ಮ ಪ್ರವೃತ್ತಿಯನ್ನು ಎಂದು ಕೊನೆಗಾಣಿಸುತ್ತೀರಿ ಸಿದ್ದರಾಮಯನವರೇ ಎಂದು ಪ್ರಶ್ನಿಸಿದೆ.


'ಯಡಿಯೂರಪ್ಪ ಈ ಹಂತಕ್ಕೆ ಇಳೀತಾರೆ ಅಂತಾ ಅಂದುಕೊಂಡಿರಲಿಲ್ಲ'


ಐದು ವರ್ಷ ಮುಖ್ಯಮಂತ್ರಿಯಾಗಿದ್ದ ನೀವು ಚಾಮುಂಡೇಶ್ವರಿಯಲ್ಲಿ ಹೀನಾಯವಾಗಿ ಸೋತರೂ ಬುದ್ಧಿ ಕಲಿತಿಲ್ಲ. ಮತದಾರರನ್ನು ನಿಂದಿಸುವ ಮಟ್ಟಕ್ಕೆ ನೀವು ಇಳಿದಿರುವುದು ನಿಜಕ್ಕೂ ನಾಚಿಕೆಗೇಡು. ನಿಮ್ಮದೇ ಕಾರ್ಯಕರ್ತರನ್ನು ದೂರಲು ಮನಸ್ಸು ಹೇಗೆ ಬಂತು? ಕಾಂಗ್ರೆಸ್‌ ಕಾರ್ಯಕರ್ತರು ಆಮಿಷಕ್ಕೆ ಬಲಿಯಾಗಿದ್ದಾರೆ ಎಂದರೆ ಏನರ್ಥ ಎಂದು ಬಿಜೆಪಿ ಪ್ರಶ್ನಿಸಿದೆ.


ಸಹಕಾರ ಸಂಘಗಳ ಮೂಲಕ ಜೂನ್ ಒಳಗೆ 5 ಸಾವಿರ ಉದ್ಯೋಗ ನಿರ್ಮಾಣ: ಎಸ್.ಟಿ.‌ ಸೋಮಶೇಖರ್


ಮತಗಳನ್ನು ಖರೀದಿ ಮಾಡಿಯೇ ಶಿರಾ ಉಪಚುನಾವಣೆಯನ್ನು ಗೆದ್ದ‌ ಬಿಜೆಪಿ ಮಸ್ಕಿ ಚುನಾವಣೆಯಲ್ಲೂ ಹಣ ಹಂಚಲು ತಂಡವನ್ನೇ ಕಟ್ಟಿಕೊಂಡು ಬರುತ್ತಾರೆ. ಬಿಜೆಪಿಯವರ ಆಸೆ, ಆಮಿಷಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಬಲಿಯಾಗಬಾರದು. ಮಾರುಕಟ್ಟೆಯಲ್ಲಿ ಕುರಿ, ಕೋಣಗಳಂತೆ ತನ್ನನ್ನೇ ಮಾರಾಟ ಮಾಡಿಕೊಂಡವರನ್ನು ಮಸ್ಕಿ ಕ್ಷೇತ್ರದ ಜನರು ನಂಬಬೇಡಿ ಎಂದು ಸಿದ್ದರಾಮಯ್ಯ ಹೇಳಿದ್ದರು.


ಅವಳಿ ನಗರಿ ಹುಬ್ಬಳ್ಳಿ-ಧಾರವಾಡದಲ್ಲಿ ಪ್ರತಿಷ್ಠಿತ ಕಂಪನಿಗಳಿಂದ‌ 6 ಸಾವಿರ ಕೋಟಿ ಬಂಡವಾಳ ಹೂಡಿಕೆ!