ಇಂದಿರಾ ಕ್ಯಾಂಟೀನ್ ಗೆ ಹೊಸ ಸ್ಪರ್ಶ ನೀಡೋಕೆ ಮುಂದಾದ ಸಿದ್ದರಾಮಯ್ಯ ಸರ್ಕಾರ
ಇಂದಿರಾ ಕ್ಯಾಂಟೀನ್ ಗೆ ಮರುಜೀವ ನೀಡೋಕೆ ಸರ್ಕಾರ ಎಲ್ಲಾ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡಿದೆ.ಹೊಸ ಮೆನು ಸಿದ್ಧವಾಗ್ತಿದ್ದು,ದರ್ಶಿನಿ ರೇಂಜ್‌ನಲ್ಲಿ ರೀಲಾಂಚ್ ಆಗ್ತಿದೆ.ಆದ್ರೆ,ಇದ್ರ ನಡುವೆ ಕೆಎಂಎಫ್ ಕೂಡ ಇಂದಿರಾ ಕ್ಯಾಂಟೀನ್ ನಲ್ಲಿ ಜಾಗ ಕೇಳ್ತಿದೆ.ಅರೆ,ಇಂದಿರಾ ಕ್ಯಾಂಟೀನ್ಗೂ KMFಗೂ ಏನ್ ಸಂಬಂಧ ಅಂತಿರಾ ಇಲ್ಲಿದೆ ಸ್ಟೋರಿ.
ಬೆಂಗಳೂರು: ಇಂದಿರಾ ಕ್ಯಾಂಟೀನ್ ಗೆ ಮರುಜೀವ ನೀಡೋಕೆ ಸರ್ಕಾರ ಎಲ್ಲಾ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡಿದೆ.ಹೊಸ ಮೆನು ಸಿದ್ಧವಾಗ್ತಿದ್ದು,ದರ್ಶಿನಿ ರೇಂಜ್‌ನಲ್ಲಿ ರೀಲಾಂಚ್ ಆಗ್ತಿದೆ.ಆದ್ರೆ,ಇದ್ರ ನಡುವೆ ಕೆಎಂಎಫ್ ಕೂಡ ಇಂದಿರಾ ಕ್ಯಾಂಟೀನ್ ನಲ್ಲಿ ಜಾಗ ಕೇಳ್ತಿದೆ.ಅರೆ,ಇಂದಿರಾ ಕ್ಯಾಂಟೀನ್ಗೂ KMFಗೂ ಏನ್ ಸಂಬಂಧ ಅಂತಿರಾ ಇಲ್ಲಿದೆ ಸ್ಟೋರಿ.
ಕಳೆಗುಂದಿದ್ದ ಇಂದಿರಾ ಕ್ಯಾಂಟೀನ್ಗೆ ಹೊಸ ಸ್ಪರ್ಶ ನೀಡೋಕೆ ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ. ಈಗಾಗಲೇ ವಾರದ ಮೆನೂ ಸಿದ್ದಪಡಿಸಿರೋ ಬಿಬಿಎಂಪಿ ಅನ್ನ, ಮುದ್ದೆ ಸಾರು, ಬನ್ಸ್ ಇಡ್ಲಿ ಚಟ್ನಿ, ಕಾಫಿ ಟೀ ಎಲ್ಲಾ ನೀಡೋಕೆ ತೀರ್ಮಾನಿಸಿದೆ.ಹೀಗಿರುವಾಗ ಇಂದಿರಾ ಕ್ಯಾಂಟೀನ್ ಈ ಹಿಂದೆಗಿಂತಲೂ ಹೆಚ್ಚು ಫೇಮಸ್ ಆಗೋ ಬಗ್ಗೆ ಈಗಲೇ ಸುಳಿವು ಸಿಗ್ತಿದೆ.ಬೆಲೆ ಏರಿಕೆ ನಡುವೆ ಅಗ್ಗದಲ್ಲಿ ದರ್ಶಿನಿ ರೇಂಜ್ ನ ಊಟ ಸಿಗುತ್ತೆ ಅಂದ್ರೆ ಯಾರ್ ಬಿಡ್ತಾರೆ ಹೇಳಿ. ಹೀಗಾಗಿ ಇಂದಿರಾ ಕ್ಯಾಂಟೀನ್ ಹೋಟೆಲ್ಗಳಿಗೆ ಕಾಂಪೀಟ್ ಮಾಡೋದು ಗ್ಯಾರೆಂಟಿ ಎಂಬ ಮಾತು ಕೇಳಿಬರ್ತಿದೆ. ಇದ್ರಿಂದ ಪ್ರೇರೇಪಣೆಗೊಂಡಿರೋ ಕೆಎಂಎಫ್ ಈಗ ಇಂದಿರಾ ಕ್ಯಾಂಟೀನ್ ನಲ್ಲೂ ಜಾಗ ಕೇಳ್ತಿದೆ.
ಇಂದಿರಾ ಕ್ಯಾಂಟೀನ್ ಊಟದ ಜೊತೆಗೆ ಕೆಎಂಎಫ್ ಉತ್ಪನ್ನಗಳನ್ನ ಮಾರಾಟಮಾಡೋ ಬಗ್ಗೆ ಈಗ ಚರ್ಚೆ ಆರಂಭವಾಗಿದೆ.ಕೆಎಂಎಫ್‌ನ ನೀರು, ಹಾಲು, ಮೊಸರು, ತುಪ್ಪ ಜೊತೆಗೆ ಐಸ್ ಕ್ರೀಂ ಸೇರಿ ಅನೇಕ ಉಪ ಉತ್ಪನ್ನಗಳನ್ನ ಮಾರಾಟಕ್ಕಿಡಲು ಕೆಎಂಎಫ್ ಜಾಗ ಕೇಳ್ತಿದೆ.ಈ ಮೂಲಕ ತನ್ನ ಸರಕಿಗೂ ಮಾರುಕಟ್ಟೆ ಗಿಟ್ಟಿಸಲು ಕೆಎಂಎಫ್ ಹೊರಟಿದೆ.ಇತ್ತ ಈ ಬಗ್ಗೆ ಬಿಬಿಎಂಪಿ ಇದಕ್ಕೆ ಅನುಮತಿ ಕೊಡೋದು ನಮ್ಮ ಕೈಲಿಲ್ಲ. ಸರ್ಕಾರ ತೀರ್ಮಾನ ಮಾಡಿದ್ರೆ ನಮ್ಮದೇನು ಅಭ್ಯಂತರವೇ ಇಲ್ಲ ಎನ್ನುತ್ತಿದೆ.
ಒಟ್ನಲ್ಲಿ,ಇಂದಿರಾ ಕ್ಯಾಂಟೀನ್ ಹೊಸ ರೂಪದಲ್ಲಿ ರೀಲಾಂಚ್ ಆಗೋದಂತೂ ಪಕ್ಕ.ಒಂದು ವೇಳೆ ಕೆಎಂಎಫ್ ಉತ್ಪನ್ನಗಳಿಗೆ ಇಂದಿರಾ ಕ್ಯಾಂಟೀನ್ ನಲ್ಲಿ ಜಾಗ ಕೊಟ್ಟಿದ್ದೇ ಆದ್ರೆ, ನಂದಿನಿ ಉತ್ಪನ್ನಗಳಿಗೂ ದೊಡ್ಡ ಮಾರುಕಟ್ಟೆ ಸಿಕ್ಕಂತಾಗಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ