ಬೆಂಗಳೂರು: ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸುವ ಹಕ್ಕು ಸಿದ್ದರಾಮಯ್ಯರಿಗೆ ಇಲ್ಲವೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಭಾನುವಾರ ಕೊಪ್ಪಳದಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಡಿಕೆಶಿ ತಿರುಗೇಟು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಹಕ್ಕು ಸಿದ್ದರಾಮಯ್ಯರಿಗೆ ಇಲ್ಲ, ನನಗೂ ಘೋಷಣೆ ಮಾಡುವ ಹಕ್ಕಿಲ್ಲ. ಎಐಸಿಸಿಗೆ ಮಾತ್ರ ಅಭ್ಯರ್ಥಿಗಳ ಘೋಷಣೆ ಮಾಡುವ ಹಕ್ಕಿದೆ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ ಅಂತಾ ಡಿಕೆಶಿ ಹೇಳಿದ್ದಾರೆ. ಕೆಲ ಸಂದರ್ಭಗಳಲ್ಲಿ ಕಳೆದ ಬಾರಿ ಸೋಲು ಕಂಡವರಿಗೆ ಎನ್ಕ್ರೇಜ್ ಮಾಡಲು ಸಿದ್ದರಾಮಯ್ಯನವರು ಹಾಗೆ ಹೇಳಿರಬಹುದು. ಅದನ್ನು ಬಿಟ್ಟರೆ ಮಲ್ಲಿಕಾರ್ಜುನ್ ಖರ್ಗೆ ಅವರೇ ನಮಗೆ ಹೈಕಮಾಂಡ್. ಹೀಗಾಗಿ ಅವರಿಗೆ ಮಾತ್ರ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಹಕ್ಕಿರುತ್ತದೆ. ನನಗೂ ಕೂಡ ಆ ಹಕ್ಕಿಲ್ಲವೆಂದು ಡಿಕೆಶಿ ಸ್ಪಷ್ಟಪಡಿಸಿದ್ದಾರೆ.


ಇದನ್ನೂ ಓದಿ: ಜೆಡಿಎಸ್‍ಗೆ ಬಹುಮತ; ಕಾಂಗ್ರೆಸ್-ಬಿಜೆಪಿ ಜೊತೆ ಮತ್ತೊಮ್ಮೆ ಸರ್ಕಾರ ಮಾಡಲ್ಲ- ನಿಖಿಲ್ ಕುಮಾರಸ್ವಾಮಿ


ನಮ್ಮ ಹತ್ತಿರ ದಾಖಲಾತಿಗಳಿವೆ


ವೋಟರ್ ಐಡಿ ಹಗರಣದ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ, ನಾವು ನಾಳೆಗೆ ಸಮಯ ಕೇಳಿದ್ದೇವೆ. ನಮಗೆ‌ ಚಿಫ್ ಎಲೆಕ್ಷನ್ ಕಮಿಷನರ್ ಅವರೇ ಬೇಕು. ನಮ್ಮ ಹತ್ತಿರ ಅನೇಕ ಮಾಹಿತಿ ಇವೆ. ಪೊಲೀಸ್ ಅಧಿಕಾರಿಗಳು ಏನು ಮಾಡ್ತಾ ಇದ್ದಾರೆಂದು ಗಮನಿಸುತ್ತಿದ್ದೇವೆ. ನಮ್ಮ‌ಕಡೆ ಏನೇನು MOUಗಳಿವೆ, ಸಂಪೂರ್ಣವಾಗಿ ತನಿಖೆ‌ ಮಾಡಿದ್ದೇವೆ. ಮ್ಯಾಪಿಂಗ್ ಯಾವ ರೀತಿ ಮಾಡಿದ್ದಾರೆ, ಅದಕ್ಕೆ ಅನುಮತಿ ಇದೆಯಾ? ಮಾಧ್ಯಮಗಳಲ್ಲಿ ಎಲೆಕ್ಷನ್ ಅಫೀಸರ್ ಒಪ್ಪಿಕೊಂಡಿದ್ದಾರೆ. ನಮಗೆ ಹೈಯರ್ ಅಫೀಸರಿಂದ ಆದೇಶ ಬಂದಿತ್ತು. ಹೀಗಾಗಿ ನಮ್ಮ ಕರ್ತವ್ಯ ಮಾಡಿದ್ದೇವೆ ಎಂದು ಹೇಳಿದ್ದಾರೆ. ಯಾರು ಆ ಉನ್ನತ ಅಧಿಕಾರಿ? 15 ಸಾವಿರಕ್ಕೆ ಕೆಲಸಕ್ಕೆ ಬಂದಿರುವ ಒಬ್ಬರು-ಇಬ್ಬರನ್ನು ಅರೆಸ್ಟ್ ಮಾಡುವುದಲ್ಲ. ಯಾರು ಕಿಂಗ್ ಪಿನ್? ಯಾರು ಮಂತ್ರಿಗಳು ಇದ್ದಾರೆ? ಶಾಸಕರು ಇದ್ದಾರೆ ಅನ್ನೋದು ಬಯಲಾಗಬೇಕು ಅಂತಾ ಡಿಕೆಶಿ ಒತ್ತಾಯಿಸಿದ್ದಾರೆ.


ನಮ್ಮ ಬಳಿ ಶಾಸಕರ ಶಿಫಾರಸ್ಸು ಮಾಡಿರುವ ದಾಖಲಾತಿ, ಶಾಸಕರು, ಮಂತ್ರಿಗಳು ಫೋನ್‌ನಲ್ಲಿ ಮಾತಾಡಿರುವ ದಾಖಲೆ ಇದೆ. ರಾಜರಾಜೇಶ್ವರಿ ನಗರ, ಮಲ್ಲೇಶ್ವರಂ, ಬೊಮ್ಮನಹಳ್ಳಿ, ಮಹದೇವಪುರ ಸೇರಿ 28 ಕ್ಷೇತ್ರದ AROಗಳ ಮೇಲೆ ಕೇಸ್ ದಾಖಲಾಗಬೇಕು. ಈ ಬಗ್ಗೆ ಪೊಲೀಸರು ಏನು ಮಾಡುತ್ತಿದ್ದಾರೆಂದು ನೋಡ್ತಾ ಇದ್ದೀವಿ ಅಂತಾ ಡಿಕೆಶಿ ಹೇಳಿದ್ದಾರೆ.


ಇದನ್ನೂ ಓದಿ: ಚುಮು ಚುಮು ಚಳಿ ನಡುವೆ ರಾಜ್ಯದ ಜನತೆಗೆ ಮತ್ತೆ ವರುಣನ ಕಾಟ- ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ


ಪ್ರಕರಣ ಮುಚ್ಚಿಹಾಕುವ ಅನುಮಾನವಿದೆ


ಇನ್ನು ವೋಟರ್ ಐಡಿ ಅಕ್ರಮ ಪ್ರಕರಣ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ, ‘ನಾನು ಇದರ ಬಗ್ಗೆ ಈಗ ಮಾತಾಡಲ್ಲ. ಯಾವ ರೀತಿ ಪ್ರಕರಣ ಮುಚ್ಚಲು ನೋಡ್ತಾ ಇದಾರೆ. ಹಿಂದೆ ರೇಪ್ ‌ಕೇಸ್, 40% ಕಮಿಷನ್ ಸೇರಿ ಅನೇಕ ಪ್ರಕರಣಗಳ ಸಿಎಂ ಯಡಿಯೂರಪ್ಪ, ಕ್ಲೀನ್ ಹ್ಯಾಂಡ್ ಇದ್ದಾರೆ ಎಂದು ಹೇಳಿದ್ದರು. ಅವರ ಮಂತ್ರಿಗಳನ್ನು ರಕ್ಷಣೆ ಮಾಡಲು ಬಿ ರಿಪೋರ್ಟ್ ಬರೆಸಿದ್ದಾರೆ. ಈ ಪ್ರಕರಣವನ್ನು ಸಹ ಮುಚ್ಚಿಹಾಕುವ ಅನುಮಾನವಿದೆ’ ಅಂತಾ ಡಿಕೆಶ ಆತಂಕ ವ್ಯಕ್ತಪಡಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.