ಬಿಜೆಪಿ ನಾಯಕರ ಹೆಸರಲ್ಲಿಯೇ ಹುಕ್ಕಾ ಬಾರ್ ತೆರೆಯಲಿ: ಸಿ.ಟಿ.ರವಿಗೆ ಸಿದ್ದರಾಮಯ್ಯ ಇತಿಹಾಸ ಪಾಠ!
ಸಿ.ಟಿ.ರವಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಇತಿಹಾಸದ ಪಾಠ ಮಾಡಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ನಾಯಕರು ಜವಾಹರಲಾಲ್ ನೆಹರು(Jawaharlal Nehru) ಹೆಸರಲ್ಲಿ ಹುಕ್ಕಾ ಬಾರ್ ತೆರೆಯಲಿ ಎಂಬ ಸಿ.ಟಿ.ರವಿ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಬಿಜೆಪಿ ನಾಯಕರ ಹೆಸರಿನಲ್ಲಿಯೇ ಹುಕ್ಕಾ ಬಾರ್ ತೆರೆಯಬಹುದಲ್ಲ, ಹೀಗ್ಯಾಕೆ ಮಾಡುತ್ತಿಲ್ಲ ಅಂತಾ ಪ್ರಶ್ನಿಸಿದ್ದಾರೆ. ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರವಾಗಿ ಮಾತನಾಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ನಾಯಕರು ನೆಹರು ಹೆಸರಿನಲ್ಲಿ ಹುಕ್ಕಾ ಬಾರ್ ತೆರೆಯಲು ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಸಿ.ಟಿ.ರವಿಗೆ ಇತಿಹಾಸದ ಪಾಠ ಮಾಡಿದ್ದಾರೆ.
ಗುಜರಾತ್ ನ ಅಹಮದಾಬಾದ್ ನಲ್ಲಿರುವ ವಿಶ್ವದ ಅತಿದೊಡ್ಡ ಸರ್ದಾರ್ ಪಟೇಲ್ ಕ್ರಿಕೆಟ್ ಕ್ರೀಡಾಂಗಣಕ್ಕೆ ಪ್ರಧಾನಿ ನರೇಂದ್ರ ಮೋದಿ(Narendra Modi) ಹೆಸರು ಮರುನಾಮಕರಣ ಮಾಡಿದ್ದಾರೆ, ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನಕ್ಕೆ ಅರುಣ್ ಜೇಟ್ಲಿ ಸ್ಟೇಡಿಯಂ ಅಂತಾ ಹೆಸರಿಡಲಾಗಿದೆ. ಬೆಂಗಳೂರಿನ ಯಶವಂತಪುರದಲ್ಲಿ ದೀನ್ ದಯಾಳ್ ಉಪಾಧ್ಯಾಯ ಮೇಲ್ಸೇತುವೆ, ಯಲಹಂಕದಲ್ಲಿ ವೀರ್ ಸಾವರ್ಕರ್ ಮೇಲ್ಸೇತುವೆ ಅಂತಾ ಹೆಸರು ಇಡಲಾಗಿದೆ. ಹುಕ್ಕಾ ಬಾರ್(Hookah Bar)ಗಳಿಗೆ ಈ ನಾಯಕರ ಹೆಸರುಗಳನ್ನೇ ಇಡಬಹುದಿತ್ತಲ್ಲಾ..? ನೆಹರು ಹೆಸರು ಯಾಕೆ ಬೇಕು ಅಂತಾ ಸಿದ್ದರಾಮಯ್ಯ(Siddaramaiah)ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Karnataka COVID-19: ‘ಕೋವಿಡ್-19ಗೆ ಪರಿಹಾರ ಲಸಿಕೆಗಳೇ ಹೊರತು ಲಾಕ್‌ಡೌನ್ ಅಲ್ಲ’
ನಾನು ಲಘುವಾಗಿ ಮಾತನಾಡಲು ಹೋಗುವುದಿಲ್ಲ. ನೆಹರು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು. ಅವರ ಇಡೀ ಕುಟುಂಬವೇ ದೇಶಕ್ಕಾಗಿ ಬಲಿದಾನ ಮಾಡಿದೆ. ರಾಜೀವ್ ಗಾಂಧಿ, ಇಂದಿರಾ ಗಾಂಧಿ ಏಕೆ ಸಾವನ್ನಪ್ಪಿದರು? ಮೋತಿಲಾಲ್ ನೆಹರು ಕಾಲದಿಂದಲೂ ಈ ದೇಶದ ಸ್ವಾತಂತ್ರ್ಯಕ್ಕಾಗಿ ಅವರು ಹೋರಾಟ ಮಾಡಿದ್ದಾರೆ. ಸಿ.ಟಿ.ರವಿ(CT Ravi) ಏನಾದರೂ ಹೋರಾಟ ಮಾಡಿದ್ನಾ..? ಬಿಜೆಪಿ ನಾಯಕರು ಹೋರಾಟ ಮಾಡಿದರಾ? ಬಿಜೆಪಿ ನಾಯಕರ ಹೆಸರಿಟ್ಟಿದ್ದಕ್ಕೆ ನಾವು ಎಂದಾದರೂ ಪ್ರಶ್ನೆ ಮಾಡಿದ್ದೇವಾ? ಹೆಸರು ಬದಲಿಸುವಂತೆ ಎಂದಾದರೂ ಹೇಳಿದ್ದೇವಾ? ಅಂತಾ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಸಭೆ-ಸಮಾರಂಭಗಳಲ್ಲಿ ಹೂಗುಚ್ಛ, ಹಾರ ತುರಾಯಿ ನಿಷೇಧ: ಸಿಎಂ ಬೊಮ್ಮಾಯಿ ಆದೇಶ
ಯಾರ ಬಗ್ಗೆಯೂ ಲಘುವಾಗಿ ಮಾತನಾಡಬಾರದು. ನಾವು ಅಟಲ್ ಬಿಹಾರಿ ವಾಜಪೇಯಿ(Atal Bihari Vajpayee), ಎಲ್.ಕೆ.ಅಡ್ವಾಣಿಯವರ ಬಗ್ಗೆ ಲಘುವಾಗಿ ಮಾತನಾಡುತ್ತೇವಾ? ಸಿ.ಟಿ.ರವಿ(CT Ravi)ಗೆ ಇತಿಹಾಸವೂ ಗೊತ್ತಿಲ್ಲ, ಯಾರಿಗೆ ಹೇಗೆ ಗೌರವ ಕೊಡಬೇಕೆಂಬುದೂ ಗೊತ್ತಿಲ್ಲ. ಭಾರತೀಯ ಸಂವಿಧಾನವನ್ನೇ ಬದಲಾಯಿಸುತ್ತೇವೆ ಎನ್ನುವವರಿಗೆ ದೇಶದ ಇತಿಹಾಸದ ಬಗ್ಗೆ, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ದೇಶ ಕಟ್ಟಿದವರ ಬಗ್ಗೆ ಗೌರವ ಇದೆಯಾ..? ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿ.ಟಿ.ರವಿ ಅರಿತು ಮಾತನಾಡಬೇಕೇ ಹೊರತು ಲಘುವಾಗಿ ಮಾತನಾಡವುದನ್ನು ಬಿಡಬೇಕು ಅಂತಾ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ