ಬೆಂಗಳೂರು: ಟಿಪ್ಪು ಜಯಂತಿ ಆಚರಿಸಲು ಯಾವ ಮುಸ್ಲಿಮರು‌ ಕೇಳಿರಲಿಲ್ಲ, ಎರಡು ವರ್ಷದ ಹಿಂದೆ ಸಿಎಂ ಸಿದ್ದರಾಮಯ್ಯಗೆ ಜ್ಞಾನೋದಯ ಆಗಿದೆ. ಸಿದ್ದರಾಮಯ್ಯ ಹಟಕ್ಕೆ ಬಿದ್ದು ಟಿಪ್ಪು ಜಯಂತಿ ಆಚರಿಸುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಸರ್ಕಾರದ ಟಿಪ್ಪು ಜಯಂತಿಗೆ ಬಿಜೆಪಿ ವತಿಯಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಟಿಪ್ಪು ಜಯಂತಿ ಆಚರಿಸಲು ಯಾವ ಮುಸ್ಲಿಮರು‌ ಕೇಳಿರಲಿಲ್ಲ, ಸಿದ್ದರಾಮಯ್ಯ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ, ಅಧಿಕಾರದ ವೈಫಲ್ಯತೆಯನ್ನು ಮುಚ್ಚುಹಾಕಲು ಮಾಡುತ್ತಿರುವ ಪ್ರಯತ್ನ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಸಿಎಂ ವಿರುದ್ಧ ಕಿಡಿಕಾರಿದ್ದಾರೆ.


ಟಿಪ್ಪು ಮತಾಂಧ, ಕನ್ನಡ ವಿರೋಧಿ, ಟಿಪ್ಪು ಮೇಲೆ ಅಷ್ಟು ಪ್ರೀತಿ ಇದ್ದರೆ ಕಾಂಗ್ರೇಸ್ ಕಚೇರಿಯಲ್ಲಿ ಟಿಪ್ಪು ಜಯಂತಿ ಆಚರಿಸಲಿ, ಬಿಜೆಪಿಯ ಯಾವ ನಾಯಕರು ಸರ್ಕಾರ ನಡೆಸಲಿರುವ 'ಟಿಪ್ಪು ಜಯಂತಿ' ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಶೋಭಾ ಇದೇ ಸಂದರ್ಭದಲ್ಲಿ ತಿಳಿಸಿದರು.  


ಈ ಬಗ್ಗೆ ಪ್ರತಿಕ್ರಿಯಿಸಿರುವ ಮತ್ತೋರ್ವ ಬಿಜೆಪಿ ನಾಯಕ, ರಾಜ್ಯ ಬಿಜೆಪಿ ಉಸ್ತುವಾರಿ ಮುರುಳಿಧರ್ ರಾವ್ - ಟಿಪ್ಪು ಹಿಂದೂಗಳನ್ನು ಹತ್ಯೆ ಮಾಡಿದವನು. ಮಲಬಾರ್ ಹಾಗೂ ಮಡಿಕೇರಿ ಜನರನ್ನು ಕೇಳಿದರೆ ಸತ್ಯ ಹೇಳುತ್ತಾರೆ. ಬಿಜೆಪಿ ಮೊದಲಿನಿಂದಲೂ ಟಿಪ್ಪು ಜಯಂತಿ ವಿರುದ್ಧ ಇದೆ. ಆದರೆ ಕಾಂಗ್ರೇಸ್ ಟಿಪ್ಪು ಜಯಂತಿಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.