ಶಾಲೆ ಮಕ್ಕಳ ಪೇನ್ಸಿಲ್ ಮೇಲೂ ಟ್ಯಾಕ್ಸ್ ಹಾಕಿದ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಇಂದು ತೈಲ ಬೆಲೆ ಗಗನಕೇರಿದೆ . ರೈತರ ಸಾಲಾ ಒಂದು ರೂಪಾಯಿ ಮನ್ನಾ ಮಾಡಿಲ್ಲ. ಅಷ್ಟೇ ಸಾಲದೆಂದು ಶಾಲೆ ಮಕ್ಕಳ ಪೇನ್ಸಿಲ್ ಮೇಲೆ ಟ್ಯಾಕ್ಸ್ ಹಾಕಿದ್ದಾರೆ.
ಬೀದರ್ : ಥೆರ ಮೈದಾನದಲ್ಲಿ ಪ್ತಜಾ ಧ್ವನಿ ಯಾತ್ರೆ ಯಲ್ಲಿ ಮಾತಾನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಾ ,ಬಿಜೆಪಿ ಮನುವಾದದ ಪರವಾಗಿ ಇದೆ.ಯಾರಾದ್ರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದಾರಾ ...ಬಿಜೆಪಿ ಅವರದು ಯಾವುದೇ ತ್ಯಾಗ ಬಲಿದಾನ ಇಲ್ಲದೆ 16 ವರ್ಷ ಅಧಿಕಾರ ಮಾಡಿದ್ದಾರೆ.
ಬಿಜೆಪಿಯವರಿಗೆ ಸಮಾನತೆ ಮೇಲೆ ನಂಬಿಕೆ ಇಲ್ಲಾ...ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿವರು ಯಾರು? ಆರ್ ಎಸ್ ಎಸ್, ಸಂಘ ಪರಿವಾರ, ಜನಸಂಘದ, ಬಿಜೆಪಿಯವರಾ.. ಗಾಂಧಿ ಹಿಂದೂ - ಮುಸ್ಲಿಂ ಒಗ್ಗೂಡಿಸುತ್ತಿದ್ದಾರೆ ಎಂದು ಗೋಡ್ಸೆ ಗಾಂದಿಯನ್ನು ಕೊಂದ್ರು...ಸಾರ್ವಕರ್ ಇವರಿಗೆ ಪ್ರಚೋದನೆ ನೀಡಿದ್ರು.ಇಂಥಾವರಿಂದ ನಾವು ದೇಶಭಕ್ತಿ ಕಲಿಬೇಕಾ..? ಎಂದು ಬಿಜೆಪಿಯವರ ವಿರುದ್ಧ ಸಿದ್ದರಾಮಯ್ಯಾ ತೀವ್ರ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: “ರಾಜ್ಯದಲ್ಲಿ ಯಾರೇ ಸಿಎಂ ಆಗಬೇಕಾದರೂ ಪಂಚಮಸಾಲಿ ಅವಶ್ಯಕತೆ ಇದೆ”
ಮೋದಿ ಹೇಳಿದ್ರು ಅಚ್ಛೆ ದಿನ ಬರುತ್ತೆ ಎಂದು, ಇಂದು ತೈಲ ಬೆಲೆ ಗಗನಕೇರಿದೆ . ರೈತರ ಸಾಲಾ ಒಂದು ರೂಪಾಯಿ ಮನ್ನಾ ಮಾಡಿಲ್ಲ. ಅಷ್ಟೇ ಸಾಲದೆಂದು ಶಾಲೆ ಮಕ್ಕಳ ಪೇನ್ಸಿಲ್ ಮೇಲೆ ಟ್ಯಾಕ್ಸ್ ಹಾಕಿದ್ದಾರೆ. ಈ ವೇಳೆ ರಾಜ್ಯ ಸರ್ಕಾರದಲ್ಲಿ ಗೋಡೆಗಳಿಗೆ ಕಿವಿಕೊಟ್ರೆ ಬರೀ ಲಂಚದ ಸುದ್ಧಿ ಕೇಳುತ್ತೆ. ಅಲಿಬಾಬ ಕಥೆಯನ ಈ ಸರ್ಕಾರ ಕಥೆಯಾಗಿದೆ...ಚಾಲಿಸ್ ಚೋರ್ ಕಥೆಯಂತ್ತೆ ಈ ಸರ್ಕಾರದ ಸ್ಥಿತಿಯಾಗಿದೆ ಎಂದು ಬಿಜೆಪಿ ಸರ್ಕಾರದ ಮೆಲೆ ಆರೋಪ ಸುರಿಮಳೆ ಗೈದು ಸಿದ್ದರಾಮಯ್ಯಾ ಅಕ್ರೋಶ ಹೊರಹಾಕಿದ್ರು...
ಇದನ್ನೂ ಓದಿ: ಸಿಡಿ ವಿಚಾರವಾಗಿ ರಮೇಶ್ ಜಾರಕಿಹೊಳಿಗೆ ಈಶ್ವರಪ್ಪ ಬೆಂಬಲ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.