ನವ-ಕರ್ನಾಟಕಕ್ಕೆ ಹೊಸ ನಾಂದಿ ಹಾಡಿದ ಸಿದ್ದರಾಮಯ್ಯ
ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕರ್ನಾಟಕದ ಅಭಿವೃದ್ದಿಗೆ ಮುನ್ನೋಟ ಸಿದ್ದಪಡಿಸುವ ನಿಟ್ಟಿನಲ್ಲಿ ಧೃಡವಾದ ಹೆಜ್ಜೆ ಇಟ್ಟಿದೆ.ಅದರ ಭಾಗವಾಗಿ ಇಂದು ನವ ಕರ್ನಾಟಕ- 2025 ಎನ್ನುವ ಧ್ಯೇಯದೊಂದಿಗೆ ತನ್ನ ವಿಶನ್ ಡಾಕ್ಯುಮೆಂಟ್ ನ್ನು ಬಿಡುಗಡೆಗೊಳಿಸಿದೆ.
ಆ ಮೂಲಕ ಈ ದಾಖಲೆಯು ಮುಂದಿನ ಏಳು ವರ್ಷಗಳಲ್ಲಿ ಪ್ರತಿ ಜಿಲ್ಲೆಗಳ ಅಭಿವೃದ್ದಿಗಳ ಕುರಿತಾಗಿ ಹಲವು ಕ್ಷೇತ್ರಗಳ ತಜ್ಞರನ್ನು ಭೇಟಿ ಮಾಡಿ ಮುಂದಿನ ಹಂತದಲ್ಲಿ ಕರ್ನಾಟಕವು ಸಾಗಬೇಕಾದ ಅಭಿವೃದ್ದಿ ಪಥದ ಬಗ್ಗೆ ಸಮಾಲೋಚನೆ ನಡೆಸಲಾಗಿದೆ.
ಈ ನವ ಕರ್ನಾಟಕ-2025 ಗೆ ಮುನ್ನೋಟದ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿಗಳು "ರಾಜ್ಯದ ಭವಿಷ್ಯದ ಕಲ್ಪನೆ ಏನಿರಬೇಕು ? ಮತ್ತು ಅದನ್ನು ಹೇಗೆ ಸಾಧಿಸಬೇಕು ? ಎನ್ನುವ ಒಂದು ನೋಟವನ್ನು ಈ ದಾಖಲೆ ನೀಡುತ್ತದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು, ಅವರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯವಾಗಿದೆ' ಎಂದು ತಿಳಿಸಿದ್ದಾರೆ.
ಇನ್ನು ಮುಂದುವರೆದು ಅವರು "ಇಂದು ಬಿಡುಗಡೆಗೊಂಡ ವಿಷನ್ ಡಾಕ್ಯುಮೆಂಟ್ ಅಂತಿಮವಾದರೂ ಮುನ್ನೋಟ ಎಂಬುದು ನಿರಂತರ ಪ್ರಕ್ರಿಯೆ. ಈ ಹಿನ್ನೆಲೆಯಲ್ಲಿ ನವ ಕರ್ನಾಟಕ 2025 ಎನ್ನುವುದನ್ನು ಜೀವಂತ ದಾಖಲೆಯನ್ನಾಗಿಸುವ ನಮ್ಮ ಪ್ರಯತ್ನ ಮುಂದುವರಿಯಲಿದೆ" ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.