ಬೆಂಗಳೂರು: ಮೈಸೂರು ಮತ್ತು ಬೆಂಗಳೂರು, ಮೈಸೂರು ಮತ್ತು ತಾಳಗುಪ್ಪ ನಡುವೆ ಸಂಚರಿಸುವ ಎಕ್ಸ್ಪ್ರೆಸ್ ರೈಲುಗಳ ಹೆಸರುಗಳನ್ನು ಭಾರತೀಯ ರೈಲ್ವೆ ಇಲಾಖೆ ಬದಲಾಯಿಸಿದೆ.


COMMERCIAL BREAK
SCROLL TO CONTINUE READING

ಮೈಸೂರು-ಬೆಂಗಳೂರು ಟಿಪ್ಪು ಎಕ್ಸ್ಪ್ರೆಸ್ ರೈಲಿನ ಹೆಸರನ್ನು ಒಡೆಯರ್ ಎಕ್ಸ್ಪ್ರೆಸ್ ರೈಲು ಎಂದು ಮತ್ತು ತಾಳಗುಪ್ಪ-ಮೈಸೂರು ಎಕ್ಸ್ಪ್ರೆಸ್ ರೈಲಿನ ಹೆಸರನ್ನು ಕುವೆಂಪು ಎಕ್ಸ್ಪ್ರೆಸ್ ರೈಲು ಎಂದು ಮರುನಾಮಕರಣ ಮಾಡಲಾಗಿದೆ. ಟಿಪ್ಪು ಎಕ್ಸ್ಪ್ರೆಸ್‍ ರೈಲಿನ ಹೆಸರು ಬದಲಾಯಿಸಿರುವ ಬಿಜೆಪಿ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.


ಇದನ್ನೂ ಓದಿ: ಟಿಪ್ಪು, ತಾಳಗುಪ್ಪ ರೈಲುಗಳಿಗೆ ಒಡೆಯರ್, ಕುವೆಂಪು ಎಕ್ಸಪ್ರೆಸ್ ಎಂದು ಮರುನಾಮಕರಣ


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸಿದ್ದರಾಮಯ್ಯ, ‘ಬಿಜೆಪಿಯವರಿಗೆ ದ್ವೇಷ ಬಿತ್ತುವುದೇ ಕೆಲಸ. ದ್ವೇಷದ ರಾಜಕಾರಣ ಮಾಡುವುದೇ ಅವರ ಕೆಲಸವಾಗಿದೆ. ಟಿಪ್ಪು ಎಕ್ಸ್ಪ್ರೆಸ್ ರೈಲಿನ ಹೆಸರು ಬದಲಾಯಿಸುವ ಅಗತ್ಯವಿರಲಿಲ್ಲ. ಇದರ ಬದಲು ಹೊಸ ರೈಲಿಗೆ ಒಡೆಯರ್ ಹೆಸರು ಇಟ್ಟಿದ್ದರೆ ಚೆನ್ನಾಗಿರುತ್ತಿತ್ತು’ ಎಂದು ಹೇಳಿದ್ದಾರೆ.


‘ಒಡೆಯರ್ ಅವರಿಗೆ ಗೌರವ ಕೊಡಬೇಕೆಂದರೆ ಇನ್ನೊಂದು ಹೊಸ ರೈಲಿಗೆ ಹೆಸರಿಡಬೇಕಿತ್ತು. ಇದು ದ್ವೇಷ ಬಿತ್ತುವ ಉದ್ದೇಶದಿಂದಲೇ ಮಾಡಿದ ಕೆಲಸ. ಬಿಜೆಪಿಯವರು ಈ ಥರ ಎಲ್ಲಾ ಮಾಡುತ್ತಾರೆ. ಟಿಪ್ಪು ಹೆಸರು ತೆಗೆದುಬಿಟ್ಟೇ ರೈಲಿಗೆ ಮರುನಾಮಕರಣ ಮಾಡುವ ಅಗತ್ಯವಿರಲಿಲ್ಲ’ ಅಂತಾ ಸಿದ್ದರಾಮಯ್ಯ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.


ಇದನ್ನೂ ಓದಿ: ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ಜನಸಂಖ್ಯೆಗೆ ತಕ್ಕಂತೆ ಹೆಚ್ಚಿಸಿ : ಹೆಚ್‌ಡಿಕೆ ಸಲಹೆ


‘ಒಡೆಯರ್ ಅವರಿಗೆ ನಾವು ಗೌರವ ಕೊಡಬೇಕು ನಿಜ. ಆದರೆ ಗೌರವ ಕೊಡಬೇಕೆಂದಿದ್ದರೆ ಹೊಸ ರೈಲಿಗೆ ಅವರ ಹೆಸರು ಇಡಬೇಕಿತ್ತು’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಟಿಪ್ಪು ರೈಲಿನ ಹೆಸರು ಬದಲಾವಣೆಗೆ ಸಂಸದ ಪ್ರತಾಪ್ ಸಿಂಹ ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆದಿದ್ದರು ಅನ್ನೋ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ‘ಪತ್ರ ಯಾರೇ ಬರೆಯಲಿ, ಆದರೆ ಟಿಪ್ಪು ಹೆಸರು ಬದಲಾಯಿಸುವ ಬದಲು ಹೊಸ ರೈಲಿಗೆ ಒಡೆಯರ್ ಹೆಸರು ಇಟ್ಟಿದ್ದರೆ ಚೆನ್ನಾಗಿರುತ್ತಿತ್ತು’ ಎಂದು ಉತ್ತರಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.